ಬಂಟ್ವಾಳ ತಾಲೂಕಿನಲ್ಲಿ ಕದನ ಕುತೂಹಲ

www.bantwalnews.comಸಂಪಾದಕ: ಹರೀಶ ಮಾಂಬಾಡಿ

ಇದು ಬಂಟ್ವಾಳ ತಾಲೂಕಿನ ನಕ್ಷೆ. ಇದರಲ್ಲಿ ಕೆಲವು ಪುತ್ತೂರು ಕ್ಷೇತ್ರ, ಕೆಲವು ಮಂಗಳೂರು ಕ್ಷೇತ್ರಕ್ಕೆ ಒಳಪಟ್ಟಿದೆ. ಹೀಗಾಗಿ ಬಂಟ್ವಾಳ ತಾಲೂಕಿಗೆ ಮೂವರು ಶಾಸಕರು.

ಸೋಮವಾರ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗಿ ಬಂಟ್ವಾಳಕ್ಕೆ ರಾಜೇಶ್ ನಾಯ್ಕ್ ಮತ್ತು ಪುತ್ತೂರಿಗೆ ಸಂಜೀವ ಮಠಂದೂರು ಹೆಸರು ಅಂತಿಮವಾದಂತೆಯೇ ಚುನಾವಣಾ ಕಾವು ಏರತೊಡಗಿದೆ.

ಜಾಹೀರಾತು

ಬಂಟ್ವಾಳ ತಾಲೂಕಿನ ಘೋಷಿತ ಅಭ್ಯರ್ಥಿಗಳ ಲೆಕ್ಕಾಚಾರ ಹೀಗಿದೆ.

  • ಬಂಟ್ವಾಳ –  ರಮಾನಾಥ ರೈ (ಕಾಂಗ್ರೆಸ್), ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು (ಬಿಜೆಪಿ), ರಿಯಾಜ್ ಫರಂಗಿಪೇಟೆ (ಎಸ್.ಡಿ.ಪಿ.ಐ.)
  • ಪುತ್ತೂರು – ಶಕುಂತಳಾ ಶೆಟ್ಟಿ (ಕಾಂಗ್ರೆಸ್), ಸಂಜೀವ ಮಠಂದೂರು (ಬಿಜೆಪಿ)
  • ಮಂಗಳೂರು – ಯು.ಟಿ.ಖಾದರ್ (ಕಾಂಗ್ರೆಸ್) – ಬಿಜೆಪಿಯಿಂದ ಯಾರು? ಇನ್ನೂ ನಿರ್ಧಾರ ಆಗಿಲ್ಲ.

ವಿಟ್ಲ ಸಹಿತ ಹಲವು ಭಾಗಗಳು ಪುತ್ತೂರು ಕ್ಷೇತ್ರಕ್ಕೆ ಒಳಪಟ್ಟರೆ, ಫಜೀರು, ಕೈರಂಗಳ ಸಹಿತ ಕೆಲ ಭಾಗಗಳು ಮಂಗಳೂರು ಕ್ಷೇತ್ರಕ್ಕೆ ಸೇರಿವೆ. ಉಳಿದಂತೆ ಬಂಟ್ವಾಳ ತಾಲೂಕಿನ ಬಹುತೇಕ ಗ್ರಾಮಗಳು ವಿಧಾನಸಭೆಯ ಬಂಟ್ವಾಳ ಕ್ಷೇತ್ರಕ್ಕೆ ಸೇರುತ್ತದೆ. ಕಳೆದ ಬಾರಿ ಈ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದಿವೆ. ಅದಕ್ಕೂ ಮೊದಲು ಒಂದು ಕ್ಷೇತ್ರದಲ್ಲಿ (ಪುತ್ತೂರು) ಬಿಜೆಪಿ ಗೆದ್ದಿತ್ತು. ಈ ಬಾರಿ ಯಾರು? ಕಾದು ನೋಡಬೇಕು.

ಯಾರು ಗೆಲ್ಲುತ್ತಾರೆ, ಸೋಲುತ್ತಾರೆ ಎಂಬುದು ಮತದಾರರ ತೀರ್ಮಾನಕ್ಕೆ ಬಿಟ್ಟದ್ದು, ಆದರೆ ದ.ಕ. ಜಿಲ್ಲೆಯಷ್ಟೇ ಅಲ್ಲ, ಇಡೀ ರಾಜ್ಯದ ಚುನಾವಣಾ ಕದನ ಕುತೂಹಲ ಕೆರಳಿಸಿರುವ ವಿಧಾನಸಭಾ ಕ್ಷೇತ್ರ ಬಂಟ್ವಾಳ.

ಜಾಹೀರಾತು

ಆರು ಬಾರಿಯ ಶಾಸಕ ಎಂಬ ಹೆಗ್ಗಳಿಕೆಯೊಂದಿಗೆ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಎಂಟನೇ ಬಾರಿ ಕಾಂಗ್ರೆಸ ಅಭ್ಯರ್ಥಿಯಾಗಿ ಸ್ಪರ್ಧೆಗೆ ಇಳಿಯುವ ಸಿದ್ಧತೆ ನಡೆಸುತ್ತಿದ್ದರೆ, ಬಿಜೆಪಿ ಬಂಟ್ವಾಳ ಕ್ಷೇತ್ರ ಸಮಿತಿ ರಾಜೇಶ ನಾಕ್ ಉಳಿಪ್ಪಾಡಿಗುತ್ತು ಅವರ ನೇತೃತ್ವದಲ್ಲಿ ತಯಾರಿ ನಡೆಸಿತ್ತು. ಇದೀಗ ಸೋಮವಾರ ಪಕ್ಷ ರಾಜೇಶ್ ನಾಯಕ್ ಅವರನ್ನೇ ಅಭ್ಯರ್ಥಿಯನ್ನಾಗಿಸಿದೆ. ಎಸ್.ಡಿ.ಪಿ.ಐ. ಈಗಾಗಲೇ ರಿಯಾಜ್ ಫರಂಗಿಪೇಟೆ ಅವರನ್ನು ಅಭ್ಯರ್ಥಿ ಎಂದು ಘೋಷಿಸಿದೆ.

ಜೆಡಿಎಸ್ ನಲ್ಲಿ ದೇವೇಗೌಡರಿಗೆ ಮನವಿ ನೀಡುವ ಕೆಲಸಗಳು ನಡೆಯುತ್ತಿವೆ. ಜಾತ್ಯಾತೀತ ಸಿದ್ಧಾಂತ ನೆಲೆಗಟ್ಟಿನಲ್ಲಿ ಎಡಪಕ್ಷಗಳೂ ರಾಜ್ಯಮಟ್ಟದ ತೀರ್ಮಾನಗಳ ನಿರೀಕ್ಷೆಯಲ್ಲಿರುವ ಕಾರಣ ಇನ್ನೂ ಅಖೈರಾಗಿಲ್ಲ.

ಕ್ಷೇತ್ರ ಹೀಗಿದೆ:
ವಿಧಾನಸಭೆಯ ಬಂಟ್ವಾಳ ಕ್ಷೇತ್ರ 2008ರ ಚುನಾವಣೆಗೆ ಮೊದಲು ಹೆಚ್ಚಾಗಿ ಮಂಗಳೂರು ತಾಲೂಕಿನ ಭಾಗಗಳನ್ನು ಒಳಪಡುತ್ತಿತ್ತು. ಬಿ.ಸಿ.ರೋಡ್ ಸೇರಿದಂತೆ ತಾಲೂಕಿನ ಪ್ರಮುಖ ಭಾಗಗಳು ವಿಟ್ಲ, ಪುತ್ತೂರು ಮತ್ತು ಉಳ್ಳಾಲ ಕ್ಷೇತ್ರಗಳಿಗೆ ಸೇರಿದ್ದವು. ಆದರೆ ಈಗ ಹಾಗಿಲ್ಲ. ಬಹುತೇಕ ಬಂಟ್ವಾಳ ತಾಲೂಕು ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟರೆ, ವಿಟ್ಲ ಹಾಗೂ ಅದಕ್ಕೆ ಸಮೀಪದ ಗ್ರಾಮಗಳು ಪುತ್ತೂರು ಕ್ಷೇತ್ರಕ್ಕೆ ಬರುತ್ತವೆ. ಸಜೀಪನಡು ದಾಟಿದ ಮೇಲೆ ಮಂಗಳೂರು ಕ್ಷೇತ್ರ ವ್ಯಾಪ್ತಿಗೊಳಡುತ್ತದೆ. ಹೀಗಾಗಿ 2008ರ ಬಳಿಕವಷ್ಟೇ ತಾಲೂಕಿನ ಕೇಂದ್ರಸ್ಥಾನದ ಸಂಪೂರ್ಣ ಹಿಡಿತ ಬಂಟ್ವಾಳ ಕ್ಷೇತ್ರಕ್ಕೆ ದೊರಕಿದೆ. ವಿಟ್ಲ ಕ್ಷೇತ್ರ ಬಹುಪಾಲು ಬಿಜೆಪಿ ಹಿಡಿತದಲ್ಲಿದ್ದರೆ, ಬಂಟ್ವಾಳ ಕಾಂಗ್ರೆಸ್ ಸುಪರ್ದಿಯಲ್ಲಿತ್ತು. ಹೀಗಾಗಿ ತಾಲೂಕಿನಲ್ಲಿ ಎರಡೂ ಪಕ್ಷಗಳು ಸಮಬಲದಲ್ಲಿದ್ದವು.

ಜಾಹೀರಾತು

ಇವರಲ್ಲಿ 1985ರಿಂದ ಸ್ಪರ್ಧೆಗಿಳಿದಿದ್ದ ರಮಾನಾಥ ರೈ ಆರು ಬಾರಿ ಶಾಸಕರಾಗಿದ್ದರೆ,  1972ರಿಂದ ಬಂಟ್ವಾಳ ಮತ್ತು ವಿಟ್ಲ ಕ್ಷೇತ್ರಗಳಲ್ಲಿ 1999ರವರೆಗೆ ಸ್ಪರ್ಧಿಸಿದ್ದ ರುಕ್ಮಯ ಪೂಜಾರಿ ಮೂರು ಬಾರಿ ಶಾಸಕರಾಗಿದ್ದಾರೆ. ಈಗ ಪುತ್ತೂರು ಶಾಸಕಿಯಾಗಿರುವ ಶಕುಂತಳಾ ಶೆಟ್ಟಿ ಬಂಟ್ವಾಳ ಕ್ಷೇತ್ರದಲ್ಲಿ ರಮಾನಾಥ ರೈ ಅವರೊಂದಿಗೆ ಎರಡು ಬಾರಿ ಮುಖಾಮುಖಿಯಾಗಿ ಬಿಜೆಪಿಯಿಂದ ಸ್ಪರ್ಧಿಸಿದ್ದರು.

ವಿಧಾನಸಭೆ ಬಂಟ್ವಾಳ ಕ್ಷೇತ್ರ:
ಮತದಾರರು: 2,01,433 (ಕಳೆದ ಚುನಾವಣೆಯಲ್ಲಿದ್ದಂತೆ)
ಫಲಿತಾಂಶ: 2013 – ಬಿ.ರಮಾನಾಥ ರೈ (ಕಾಂಗ್ರೆಸ್) – 81,665 ಮತಗಳು. ರಾಜೇಶ್ ನಾಯ್ಕ್ ಉಳಿಪ್ಪಾಡಿ (ಬಿಜೆಪಿ) 63815 ಮತಗಳು.
2008 – ಬಿ.ರಮಾನಾಥ ರೈ (ಕಾಂಗ್ರೆಸ್) 61560 ಮತಗಳು, ಬಿ.ನಾಗರಾಜ ಶೆಟ್ಟಿ (ಬಿಜೆಪಿ) 60309 ಮತಗಳು.
2004 – ಬಿ.ನಾಗರಾಜ ಶೆಟ್ಟಿ (ಬಿಜೆಪಿ) 54860 ಮತಗಳು, ಬಿ.ರಮಾನಾಥ ರೈ (ಕಾಂಗ್ರೆಸ್) 48934 ಮತಗಳು.
1999 – ಬಿ.ರಮಾನಾಥ ರೈ (ಕಾಂಗ್ರೆಸ್) 49905 ಮತಗಳು, ಶಕುಂತಳಾ ಶೆಟ್ಟಿ (ಬಿಜೆಪಿ) 36084 ಮತಗಳು
1994 – ಬಿ.ರಮಾನಾಥ ರೈ (ಕಾಂಗ್ರೆಸ್) 34027 ಮತಗಳು, ಶಕುಂತಳಾ ಶೆಟ್ಟಿ (ಬಿಜೆಪಿ) 29734 ಮತಗಳು
1989 – ಬಿ.ರಮಾನಾಥ ರೈ (ಕಾಂಗ್ರೆಸ್) 32939 ಮತಗಳು, ಎಚ್. ನಾರಾಯಣ ರೈ (ಬಿಜೆಪಿ) 16995 ಮತಗಳು
1985 – ಬಿ.ರಮಾನಾಥ ರೈ (ಕಾಂಗ್ರೆಸ್) 26344 ಮತಗಳು, ಎನ್. ಶಿವರಾವ್(ಬಿಜೆಪಿ) 18328 ಮತಗಳು
1983 – ಎನ್.ಶಿವರಾವ್ (ಬಿಜೆಪಿ)17690 ಮತಗಳು, ಕೆ.ಪಿ.ಅಬ್ದುಲ್ಲ (ಕಾಂಗ್ರೆಸ್) 14217 ಮತಗಳು
1978 – ಬಿ.ಎ.ಮೊಯ್ದೀನ್ (ಕಾಂಗ್ರೆಸ್ ಐ) 30790 ಮತಗಳು, ಎ.ರುಕ್ಮಯ ಪೂಜಾರಿ (ಜೆಎನ್‌ಪಿ) 18409 ಮತಗಳು
1972 – ಬಿ.ವಿ.ಕಕ್ಕಿಲ್ಲಾಯ (ಸಿಪಿಐ) 30031 ಮತಗಳು, ಎ.ರುಕ್ಮಯ ಪೂಜಾರಿ (ಬಿಜೆಎಸ್) 11762 ಮತಗಳು

ಬಂಟ್ವಾಳ/ವಿಟ್ಲ ಕ್ಷೇತ್ರಗಳ ವಿಜೇತ ಅಭ್ಯರ್ಥಿಗಳು ಇವರು

ಜಾಹೀರಾತು

1957 – ಪಾಣೆಮಂಗಳೂರು ಕ್ಷೇತ್ರ – ನಾಗಪ್ಪ ಆಳ್ವ ಕೆ. (ಕಾಂಗ್ರೆಸ್)
1962 – ಪಾಣೆಮಂಗಳೂರು ಕ್ಷೇತ್ರ – ಕೆ. ನಾಗಪ್ಪ ಆಳ್ವ (ಕಾಂಗ್ರೆಸ್)
1967 – ಬಂಟ್ವಾಳ ಕ್ಷೇತ್ರ – ಕೆ.ಎಲ್. ರೈ (ಕಾಂಗ್ರೆಸ್)
1972 – ಬಂಟ್ವಾಳ ಕ್ಷೇತ್ರ – ಬಿ.ವಿ.ಕಕ್ಕಿಲ್ಲಾಯ (ಸಿಪಿಐ)
1978 – ಬಂಟ್ವಾಳ ಕ್ಷೇತ್ರ – ಬಿ.ಎ.ಮೊಯ್ದೀನ್ (ಕಾಂಗ್ರೆಸ್)
ವಿಟ್ಲ ಕ್ಷೇತ್ರ – ಬಿ.ವಿ.ಕಕ್ಕಿಲ್ಲಾಯ (ಸಿಪಿಐ)
1983 – ಬಂಟ್ವಾಳ ಕ್ಷೇತ್ರ – ಎನ್. ಶಿವರಾವ್ (ಬಿಜೆಪಿ)
ವಿಟ್ಲ ಕ್ಷೇತ್ರ – ಎ.ರುಕ್ಮಯ ಪೂಜಾರಿ (ಬಿಜೆಪಿ)
1985 – ಬಂಟ್ವಾಳ ಕ್ಷೇತ್ರ – ಬಿ.ರಮಾನಾಥ ರೈ (ಕಾಂಗ್ರೆಸ್)
ವಿಟ್ಲ ಕ್ಷೇತ್ರ – ಬಿ.ಎ.ಉಮರಬ್ಬ (ಕಾಂಗ್ರೆಸ್)
1989 – ಬಂಟ್ವಾಳ ಕ್ಷೇತ್ರ – ಬಿ.ರಮಾನಾಥ ರೈ (ಕಾಂಗ್ರೆಸ್)
ವಿಟ್ಲ ಕ್ಷೇತ್ರ – ಎ.ರುಕ್ಮಯ ಪೂಜಾರಿ (ಬಿಜೆಪಿ)
1994 – ಬಂಟ್ವಾಳ ಕ್ಷೇತ್ರ – ಬಿ.ರಮಾನಾಥ ರೈ (ಕಾಂಗ್ರೆಸ್)
ವಿಟ್ಲ ಕ್ಷೇತ್ರ – ಎ.ರುಕ್ಮಯ ಪೂಜಾರಿ (ಬಿಜೆಪಿ)
1999 – ಬಂಟ್ವಾಳ ಕ್ಷೇತ್ರ – ಬಿ.ರಮಾನಾಥ ರೈ (ಕಾಂಗ್ರೆಸ್)
ವಿಟ್ಲ ಕ್ಷೇತ್ರ – ಕೆ.ಎಂ.ಇಬ್ರಾಹಿಂ (ಕಾಂಗ್ರೆಸ್)
2004 – ಬಂಟ್ವಾಳ ಕ್ಷೇತ್ರ – ಬಿ.ನಾಗರಾಜ ಶೆಟ್ಟಿ (ಬಿಜೆಪಿ)
ವಿಟ್ಲ ಕ್ಷೇತ್ರ – ಕೆ.ಪದ್ಮನಾಭ ಕೊಟ್ಟಾರಿ (ಬಿಜೆಪಿ)

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಬಂಟ್ವಾಳ ತಾಲೂಕಿನಲ್ಲಿ ಕದನ ಕುತೂಹಲ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*