ಭಾರತ ಅನೇಕ ಪುಣ್ಯಪುರುಷರಿಗೆ ಜನ್ಮ ನೀಡಿದ ಪುಣ್ಯಭೂಮಿ ಇಂತಹ ಶ್ರೇಷ್ಠ ಮಣ್ಣಿನಲ್ಲಿ ಜನ್ಮ ಪಡೆದ ಸಾಧಕ ಡಾ| ಬಿ.ಆರ್‌ಅಂಬೇಡ್ಕರ್ ಎಂದು ಶ್ರೀರಾಮ ಪ್ರೌಢಶಾಲೆ ಸಹಶಿಕ್ಷಕ ಪ್ರಶಾಂತ್ ನೇರೋಳು ಹೇಳಿದ್ದಾರೆ.
ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯಲ್ಲಿ ನಡೆದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ಅವರು ತನಗೆ ಎದುರಾದ ಅನೇಕ ಅವಮಾನ, ಅಪಮಾನಗಳನ್ನು ಸಾಧನೆಯ ಮೆಟ್ಟಿಲುಗಳಾಗಿ ಪರಿವರ್ತಿಸಿ ಬೆಳೆದ ಶ್ರೇಷ್ಠರು.ತನ್ನ ಜ್ಞಾನ ಸಾಧನೆಯ ಮೂಲಕ ವಿಶ್ವಕ್ಕೆ ಪರಿಚಿತರಾದ ಇವರು ತಮ್ಮ ಜ್ಞಾನ ಸಾಧನೆಯಿಂದ ಭಾರತದ ಸಂವಿಧಾನ ಕರಡು ಸಮಿತಿ ಅಧ್ಯಕ್ಷರಾಗಿ ಸಂವಿಧಾನ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇಂಥ ಶ್ರೇಷ್ಠರ ಜೀವನ ನಮ್ಮೆಲ್ಲರಿಗೂ ಮಾದರಿ ಎಂದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ವಿಶ್ವನಾಥ ಪ್ರಭು, ಸಹಸಂಚಾಲಕರಾದ ರಮೇಶ ಎನ್, ಮುಖ್ಯ ಶಿಕ್ಷಕಿಯಾದ ವಸಂತಿ ಮಾತಾಜಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಭವ್ಯ ನಿರೂಪಿಸಿ, ಪದ್ಮಶ್ರೀ ಸ್ವಾಗತಿಸಿ, ಸುಶ್ಮಿತಾ ವಂದಿಸಿದರು.
Be the first to comment on "ಕಲ್ಲಡ್ಕದಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ"