ಸುಳ್ಳು ಹೇಳಿ ಪಕ್ಷ ಕಟ್ಟುವ ಅಗತ್ಯ ನಮಗಿಲ್ಲ. ಸಾಮರಸ್ಯಕ್ಕೆ ಒತ್ತು ನೀಡಿದ್ದೇನೆ. ಕೆಲವರಿಗೆ ಅದು ಅಪಥ್ಯವಾಗಿರಬಹುದು ಎಂದು ಸಚಿವ ಬಿ.ರಮಾನಾಥ ರೈ ಹೇಳಿದರು.
ಶನಿವಾರ ಬಿ.ಸಿ.ರೋಡಿನ ಪ್ರಚಾರ ಕಚೇರಿ ಉದ್ಘಾಟನಾ ಕಾರ್ಯಕ್ರಮದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೈ, ತಾನು ಸಾವಿರ ಕೋಟಿಗೂ ಮಿಕ್ಕಿ ಅನುದಾನವನ್ನು ಕ್ಷೇತ್ರದ ಅಭ್ಯುದಯಕ್ಕಾಗಿ ತರಿಸಿ ಅಭಿವೃದ್ಧಿ ಕಾರ್ಯ ಮಾಡಿದ್ದು, ಇದನ್ನು ಸಹಿಸದೆ ಅಪಪ್ರಚಾರ ಮಾಡಲಾಗುತ್ತಿದೆ ಎಂದರು.
ಕಾರ್ಯಕರ್ತರೇ ವಾರದ ಏಳೂ ದಿನ ಇಪ್ಪತ್ತನಾಲ್ಕು ತಾಸು ಕೆಲಸ ಮಾಡಿ, ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ಮುಟ್ಟುವಂತೆ ತಿಳಿಸಿ, ನನ್ನ ಅವಧಿಯಲ್ಲಿ ದೇವಸ್ಥಾನಗಳ ಸಹಿತ ಪ್ರಾರ್ಥನಾ ಮಂದಿರಗಳ ಅಭಿವೃದ್ಧಿಯಾಗಿದೆ. ಎಲ್ಲ ಜನರ ಪ್ರೀತಿ ವಿಶ್ವಾಸ ಗಳಿಸುವಂತೆ ಕೆಲಸ ಮಾಡಿದ್ದೇನೆ, ವಿರೋಧ ಪಕ್ಷದ ಶಾಸಕನಾಗಿದ್ದಾಗಲೇ ಸಕ್ರಿಯವಾಗಿ ಕೆಲಸ ಮಾಡಿದ್ದೇನೆ. ಪಕ್ಷವೊಂದರಲ್ಲಿ ಪೇಜ್ ಪ್ರಮುಖ್ ಎಂಬ ನೇಮಕವಾಗಿದೆ. ನಮ್ಮಲ್ಲಿ ಪೇಜ್‌ಗೊಬ್ಬ ಸತ್ಯವಾದಿ ಕಾರ್ಯಕರ್ತರಿದ್ದಾರೆ. ಕೆಲವರು ಸುಳ್ಳಿನ ಪ್ರಚಾರವನ್ನು ಮನೆಮನೆಗೆ ಮಾಡುತ್ತಿದ್ದಾರೆ. ಅಪಪ್ರಚಾರ ಮಾಡುವುದರ ವಿರುದ್ಧ ಸತ್ಯವಾದಿಯಾಗಿ, ಅಭಿವೃದ್ಧಿಗಾಗಿ ಸಾಮಾಜಿಕ ಸಾಮರಸ್ಯಕ್ಕಾಗಿ ಮತ ನೀಡಿ ಎಂದರು.
ಇದು ಸತ್ಯ ಮತ್ತು ಸುಳ್ಳಿನ ನಡುವಿನ ಚುನಾವಣೆ ಎಂದು ಹೇಳಿದ ಸಚಿವ ಯು.ಟಿ.ಖಾದರ್, ಅಪಪ್ರಾರ ಮಾಡುವವರು ವಿಭಜನವಾದಿಗಳು. ರಮಾನಾಥ ರೈ ದಕ್ಷಿಣ ಕನ್ನಡ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕಾರಣಕರ್ತರಾಗಿದ್ದಾರೆ. ಅಪಪ್ರಚಾರ ಮಾಡುವವರು ತಮ್ಮ ಅವಧಿಯಲ್ಲಿ ಯಾಕೆ ಅಭಿವೃದ್ಧಿ ಕಾರ್ಯ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು.
21ರಂದು ನಾಮಪತ್ರ ಸಲ್ಲಿಕೆ:
ಏ.21ರಂದು ತಾನು ನಾಮಪತ್ರವನ್ನು ಸಲ್ಲಿಸುವುದಾಗಿ ಹೇಳಿದ ರಮಾನಾಥ ರೈ, ಜನತೆಗೆ ಕೊಟ್ಟ ಭರವಸೆ ಈಡೇರಿಸುತ್ತೇನೆ, ಶಕ್ತಿಮೀರಿ ಕಾರ್ಯ ನಿರ್ವಹಿಸುತ್ತೇನೆ, ತನ್ನನ್ನು ಬೆಂಬಲಿಸುವಂತೆ ಮನವಿ ಮಾಡಿದರು.
Be the first to comment on "ಅಭಿವೃದ್ಧಿ ಕಾರ್ಯ ಸಹಿಸದೆ ಅಪಪ್ರಚಾರ: ರಮಾನಾಥ ರೈ"