ಮುಂಬರುವ ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಬಂಟ್ವಾಳ ತಾಲೂಕು ಮಟ್ಟದ ಮತದಾರರ ಜಾಗೃತಿ ಜಾಥಾ ಕಾರ್ಯಕ್ರಮ ಬಿ.ಸಿ.ರೋಡಿನಲ್ಲಿ ಮಂಗಳವಾರ ನಡೆಯಿತು.
ಬಿ.ಸಿ.ರೋಡಿನ ಪೊಳಲಿ ದ್ವಾರದಿಂದ ಮಿನಿ ವಿಧಾನಸೌಧದ ವರೆಗೆ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಜಾಥಾದಲ್ಲಿ ಆಗಮಿಸಿ ಚುನಾವಣೆ ಸಂದರ್ಭ ಮುಕ್ತ ಮತ್ತು ನಿರ್ಭೀತಿಯ ಮತದಾನದ ಮಹತ್ವವನ್ನು ಹಾಗೂ ಕಡ್ಡಾಯವಾಗಿ ಮತ ಚಲಾಯಿಸಬೇಕು ಎಂಬ ಸಂದೇಶಗಳನ್ನು ಹೊತ್ತ ಫಲಕಗಳನ್ನು ಹಿಡಿದು ಸಾಗಿದರು.
ಈ ಸಂದರ್ಭ ಚುನಾವಣಾಧಿಕಾರಿ ರವಿ ಬಸರಿಹಳ್ಳಿ ಮತ್ತು ತಹಶೀಲ್ದಾರ್ ವೈ. ರವಿ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು.
ಬಂಟ್ವಾಳ ನಗರ ಠಾಣಾ ಎಸ್.ಐ ಚಂದ್ರಶೇಖರ್, ಗ್ರಾಮಾಂತರ ಠಾಣಾ ಎಸ್.ಐ ಪ್ರಸನ್ನ, ತಾಪಂ ಇಒ ರಾಜಣ್ಣ, ಕಾಮಾಜೆ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ. ಅಜಕ್ಕಳ ಗಿರೀಶ ಭಟ್, ಕಾಲೇಜಿನ ಸ್ವೀಪ್ ಸಂಚಾಲಕ ಬಾಲಸುಬ್ರಹ್ಮಣ್ಯ ಪಿ.ಎಸ್, ಎನ್ನೆಸ್ಸೆಸ್ ಸಂಯೋಜಕ ಪ್ರೊ. ಹೈದರಾಲಿ, ತಾಪಂ ಸಹಾಯಕ ನಿರ್ದೇಶಕ ಡಿ.ಪ್ರಶಾಂತ್ ಬಳಂಜ, ಪುರಸಭೆ ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ, ಆರೋಗ್ಯಾಧಿಕಾರಿ ರತ್ನಪ್ರಸಾದ್, ವಲಯಾರಣ್ಯಾಧಿಕಾರಿ ಸುರೇಶ್, ಉಪತಹಶೀಲ್ದಾರ್ ಗಳಾದ ಎ ಪ್ರಕಾಶ್, ರಾಜೇಶ್ ನಾಯ್ಕ್, ಗ್ರೆಟ್ಟಾ ಮಸ್ಕರೇಂಜಸ್, ಸೀತಾರಾಮ, ಕಂದಾಯ ನಿರೀಕ್ಷಕರಾದ ದಿವಾಕರ ಮುಗುಳಿಯ, ರಾಮ ಕಾಟಿಪಳ್ಳ, ನವೀನ್ ಬೆಂಜನಪದವು ಸಹಿತ ನಾನಾ ಇಲಾಖೆಗಳ ಪ್ರಮುಖರು, ಸಿಬ್ಬಂದಿ, ಉಪನ್ಯಾಸಕರು, ವಿದ್ಯಾರ್ಥಿಗಳು ಈ ಸಂದರ್ಭ ಉಪಸ್ಥಿತರಿದ್ದರು.
Be the first to comment on "ಬಿ.ಸಿ.ರೋಡಿನಲ್ಲಿ ಮತದಾರರ ಜಾಗೃತಿ ಜಾಥಾ, ಪ್ರತಿಜ್ಞಾ ಸ್ವೀಕಾರ"