www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ದಕ್ಷಿಣ ಗಾಣಗಾಪುರ ಎಂಬ ಖ್ಯಾತಿ ಉಳ್ಳ ಬಂಟ್ವಾಳ ತಾಲೂಕಿನ ಒಡಿಯೂರು ಶ್ರೀ ದತ್ತಾಂಜನೇಯ ಕ್ಷೇತ್ರ ಶ್ರೀ ಗುರುದೇವದತ್ತ ಸಂಸ್ಥಾನಂನಲ್ಲಿ ಮಾರ್ಚ್ 31ರಂದು ಶನಿವಾರ ಲೋಕಕಲ್ಯಾಣಾರ್ಥವಾಗಿ ಶ್ರೀಮದ್ರಾಮಾಯಣ ಮಹಾಯಜ್ಞ, ಶ್ರೀ ಹನುಮೋತ್ಸವ ಶ್ರೀ ಗುರುದೇವಾನಂದ ಸ್ವಾಮೀಜಿ ಅವರ ಸತ್ಸಂಕಲ್ಪದಂತೆ ನಡೆಯಲಿದೆ.
ಈ ಹಿನ್ನೆಲೆಯಲ್ಲಿ ಬೆಳಗ್ಗೆ 7 ಗಂಟೆಯಿಂದ ವಿಟ್ಲ ಸೀಮೆಯ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಿಂದ ಶ್ರೀ ಸಂಸ್ಥಾನ ಒಡಿಯೂರಿಗೆ ಭಗವನ್ನಾಮ ಸಂಕೀರ್ತನಾ ಪಾದಯಾತ್ರೆ ನಡೆಯುವುದು. ಶ್ರೀ ರಾಮನವಮಿಯಿಂದ ಹನುಮಜ್ಜಯಂತಿಯ ತನಕ ನಡೆಯುವ ಭಗವನ್ನಾಮ ಸಂಕೀರ್ತನಾ ಸಪ್ತಾಹಕ್ಕೆ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮಿಗಳವರು ದೀಪ ಪ್ರಜ್ವಲನದ ಮೂಲಕ ಶನಿವಾರ ಸೂರ್ಯೋದಯಕ್ಕೆ ಚಾಲನೆ ನೀಡಿದರು. ಸಾಧ್ವ್ವಿ ಶ್ರೀ ಮಾತಾನಂದಮಯೀ ಹಾಗೂ ಶ್ರೀ ಸಂಸ್ಥಾನದ ಸಹಸಂಸ್ಥೆಗಳ ಅಧ್ಯಕ್ಷರುಗಳು, ಪದಾಧಿಕಾರಿಗಳು ಹಾಗೂ ಸದಸ್ಯರು ಈ ಸಂದರ್ಭ ಉಪಸ್ಥಿತರಿದ್ದರು.
31ರ ಕಾರ್ಯಕ್ರಮ ಹೀಗಿದೆ:
ಬೆಳಗ್ಗೆ ಭಗವನ್ನಾಮಸಂಕೀರ್ತನ ಸಪ್ತಾಹ ಸಮಾಪ್ತಿ, ಶ್ರೀ ಮದ್ರಾಮಾಯಣ ಮಹಾಯಜ್ಞ ಆರಂಭ, ವಿಟ್ಲ ಸೀಮೆ ದೇವಸ್ಥಾನದಿಂದ ಪಾದಯಾತ್ರೆ. 9ರಿಂದ ನಾಗದೇವರಿಗೆ ಪಂಚಾಮೃತ ಅಭಿಷೇಕ, ನಾಗತಂಬಿಲ. ೧೧.೩೦ರಿಂದ ಶ್ರೀಗಳಿಂದ ಧರ್ಮಸಂದೇಶ, ೧೨ರಿಂದ ಶ್ರೀಮದ್ರಾಮಾಯಣ ಮಹಾಯಜ್ಞದ ಪೂರ್ಣಾಹುತಿ. ಮಧ್ಯಾಹ್ನ ೩ರಿಂದ ಯಕ್ಷಗಾನ ತಾಳಮದ್ದಳೆ, ರಾತ್ರಿ ೭ರಿಂದ ಶ್ರೀ ಹನುಮದ್ವ್ರತ ಪೂಜೆ, ವಿಶೇಷ ಬೆಳ್ಳಿ ರಥೋತ್ಸವ, ಉಯ್ಯಾಲೆ ಸೇವೆ.
Be the first to comment on "ಒಡಿಯೂರಿನಲ್ಲಿ 31ರಂದು ಶ್ರೀಮದ್ರಾಮಾಯಣ ಮಹಾಯಜ್ಞ, ಶ್ರೀಹನುಮೋತ್ಸವ"