ಪುದು ಗ್ರಾಮ ಪಂಚಾಯತ್ ಚುನಾವಣಾ ಫಲಿತಾಂಶದಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗರಿಷ್ಠ ಸಂಖ್ಯೆಯಲ್ಲಿ ಗೆಲುವು ಸಾಧಿಸಿದ್ದಾರೆ. ಒಟ್ಟು 34 ಸ್ಥಾನಗಳ ಪಯಕಿ ಕಾಂಗ್ರೆಸ್ ಬೆಂಬಲಿತ 27, ಬಿಜೆಪಿ ಬೆಂಬಲಿತ 6 ಮತ್ತು ಎಸ್.ಡಿ.ಪಿ.ಐ. ಬೆಂಬಲಿತ 1 ಅಭ್ಯರ್ಥಿಗಳು ವಿಜಯಿಯಾಗಿದ್ದಾರೆ.
ಚುನಾವಣಾದಿಕಾರಿಯಾಗಿ ಎನ್ ಶಿವಪ್ರಕಾಶ್, ಉಪ ಚುನಾವಣಾಕಾರಿಯಾಗಿ ಶಿವಾನಂದ ಪೂಜಾರಿ, ರಾಜ್ಯ ಮಟ್ಟದ ಇವಿಎಮ್ ಮತ ಯಂತ್ರದ ಮಾಸ್ಟರ್ ಟ್ರೈನರ್ ಪ್ರಕಾಶ್ ಉಪಸ್ಥಿತರಿದ್ದರು.
10 ವಾರ್ಡುಗಳ 34 ಸ್ಥಾನಗಳಿಗೆ ಭಾನುವಾರ ಚುನಾವಣೆ ನಡೆದು, ಶೇ.72.5 ಮತದಾನವಾಗಿತ್ತು. ಒಟ್ಟು 10,111ಮತದಾರರ ಪೈಕಿ 3583 ಷುರುಷರು ಹಾಗೂ 3747 ಮಂದಿ ಮಹಿಳೆಯರು ಸೇರಿದಂತೆ 7330 ಮಂದಿ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು. ವಾಡ್೯3 ಪುದು ಪಂಚಾಯತ್ ಕಚೇರಿ ಮತಗಟ್ಟೆಯಲ್ಲಿ ಶೇ.65.54 ರಷ್ಟು ಕನಿಷ್ಠ ಪ್ರಮಾಣದ ಮತ ಚಲಾವಣೆಯಾದರೆ,ವಾಡ್೯5 ಸುಜೀರ್ ಫ್ರೌಢ ಶಾಲಾ ಮತಗಟ್ಟೆಯಲ್ಲಿ ಶೇ. 78.16ರಷ್ಟು ಗರಿಷ್ಠ ಪ್ರಮಾಣದಲ್ಲಿ ಮತ ಚಲಾವಣೆಯಾಗಿತ್ತು.
Be the first to comment on "ಪುದು ಪಂಚಾಯತ್ ‘ಕೈ’ ವಶ"