www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಧರ್ಮಸ್ಥಳ ಸಮೀಪದ ಕನ್ಯಾಡಿಯ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನಮ್ ಮತ್ತು ಬಂಟ್ವಾಳ ತಾಲೂಕು ಶ್ರೀರಾಮ ಕ್ಷೇತ್ರ ಸೇವಾ ಸಮಿತಿ ವತಿಯಿಂದ ಲೋಕಕಲ್ಯಾಣಾರ್ಥವಾಗಿ ನಡೆಯುವ ಸೀತಾರಾಮ ಕಲ್ಯಾಣೋತ್ಸವ ಹಾಗೂ ಗುರುವಂದನಾ ಕಾರ್ಯಕ್ರಮ ಭಾನುವಾರ ಅದ್ದೂರಿಯಾಗಿ ನಡೆಯಿತು.
ಬಂಟ್ವಾಳ ಗಾಣದಪಡ್ಪು ಬ್ರಹ್ಮಶ್ರೀ ನಾರಾಯಣಗುರು ಮಂದಿರದ ಬಳಿಯ ಮೈದಾನದ ಆತ್ಮಾನಂದ ಸರಸ್ವತಿ ವೇದಿಕೆಯ ಬಳಿ ಅಲಂಕೃತ ವೇದಿಕೆಯಲ್ಲಿ ಸೀತಾರಾಮರ ಮೂರ್ತಿಯನ್ನು ಇರಿಸಿ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಪುರೋಹಿತರಾದ ವೇದಮೂರ್ತಿ ಲಕ್ಷ್ಮೀಪತಿ ಗೋಪಾಲಾಚಾರ್ಯ ನೇತೃತ್ವದಲ್ಲಿ ಕಲ್ಯಾಣೋತ್ಸವ ನಡೆಯಿತು. ಈ ಸಂದರ್ಭ ಸೇರಿದ್ದ ಸಹಸ್ರಾರು ಭಕ್ತರು ಭಕ್ತಿಭಾವದಿಂದ ಕಲ್ಯಾಣೋತ್ಸವವನ್ನು ಕಣ್ತುಂಬಿಕೊಂಡರು.
ಇದಕ್ಕೂ ಮುನ್ನ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಪುರಪ್ರವೇಶ ಸಂದರ್ಭ ಅದ್ದೂರಿಯಾಗಿ ಸ್ವಾಗತಿಸಲಾಯಿತು. ಬಳಿಕ ಸೀತಾರಾಮ ಕಲ್ಯಾಣೋತ್ಸವ ಪ್ರಾರಂಭಕ್ಕೆ ಜ್ಯೋತಿ ಬೆಳಗಿಸಿ ಚಾಲನೆ ನೀಡಲಾಯಿತು.
ಈ ಸಂದರ್ಭ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಶ್ರೀರಾಮ ಕ್ಷೇತ್ರ ಸೇವಾ ಸಮಿತಿ ಗೌರವಾಧ್ಯಕ್ಷ ಎ.ರುಕ್ಮಯ ಪೂಜಾರಿ, ಅಧ್ಯಕ್ಷ ಕೆ.ಸಂಜೀವ ಪೂಜಾರಿ ಬೊಳ್ಳಾಯಿ, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಸಾಲಿಯಾನ್ ನರಿಕೊಂಬು ಜಿಲ್ಲಾ ಸಂಚಾಲಕ ಟಿ.ಕೃಷ್ಣಪ್ಪ ಪೂಜಾರಿ, ಕಲ್ಲಡ್ಕ, ತಾಲೂಕು ಸಂಚಾಲಕ ಬಿ.ಮೋಹನ್, ಜತೆ ಕಾರ್ಯದರ್ಶಿ ಸಂತೋಷ್ ಕೋಟ್ಯಾನ್, ತುಂಬೆ, ಕೋಶಾಧಿಕಾರಿ ರಾಜೇಶ್ ಬಾಳೆಕಲ್ಲು, ಸ್ವಾಗತ ಸಮಿತಿ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ, ಸಂಚಾಲಕ ಬೇಬಿ ಕುಂದರ್, ಸಹಸಂಚಾಲಕರಾದ ಲೋಕೇಶ್ ಕೆ. ನರಹರಿನಗರ, ಚರಣ್ ಬಡಕಬೈಲು, ಗಣೇಶ್ (ಧನಲಕ್ಷ್ಮೀ), ಪ್ರಕಾಶ್ ಅಂಚನ್, ಬಿ.ವಿಶ್ವನಾಥ ಬಿ.ಸಿ.ರೋಡ್, ಬಂಟ್ವಾಳ ಪುರಸಭಾ ಶ್ರೀರಾಮ ಕ್ಷೇತ್ರ ಸೇವಾ ಸಮಿತಿ ಸಂಚಾಲಕ ರಾಮದಾಸ್ ಬಂಟ್ವಾಳ, ಗೌರವಾಧ್ಯಕ್ಷ ಗೋಪಾಲ ಸುವರ್ಣ, ಪ್ರಧಾನ ಕಾರ್ಯದರ್ಶಿ ರಾಜೇಶ್ ಸುವರ್ಣ, ಪ್ರಮುಖರಾದ ಸೇಸಪ್ಪ ಕೋಟ್ಯಾನ್, ಸೋಮಪ್ಪ ಕೋಟ್ಯಾನ್, ಜಿ.ಆನಂದ, ಮೋನಪ್ಪ ದೇವಸ್ಯ, ಮಂಗಳೂರಿನ ಚಿತ್ತರಂಜನ್ ಮೊದಲಾದವರು ಉಪಸ್ಥಿತರಿದ್ದರು. ಇದಾದ ಬಳಿಕ ಕೇಶವ ಶಾಂತಿ ನಾಟಿ, ನರಿಕೊಂಬು ಪೌರೋಹಿತ್ಯದಲ್ಲಿ ಗುರುವಂದನಾ ಕಾರ್ಯಕ್ರಮ ನಡೆಯಿತು.
ಅಲಂಕೃತ ವೇದಿಕೆ, ವ್ಯವಸ್ಥಿತ ಅನ್ನಛತ್ರ:
ಸೀತಾರಾಮ ಕಲ್ಯಾಣೋತ್ಸವಕ್ಕೆ ಆಗಮಿಸುವ ಭಕ್ತರಿಗೆ ಅನುಕೂಲವಾಗುವಂತೆ ಆಸನ ವ್ಯವಸ್ಥೆ, ಊಟ, ಉಪಾಹಾರಗಳಿಗೆ ಸಮೀಪದ ಸ್ಪರ್ಶ ಕಲಾಮಂದಿರದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಬಿಳಿ ದಿರಿಸಿನೊಂದಿಗೆ ಶಾಲು ಧರಿಸಿದ ಸ್ವಯಂಸೇವಕರು ಆಗಮಿಸಿದವರಿಗೆ ಮಾರ್ಗದರ್ಶನ ನೀಡುತ್ತಿದ್ದರೆ, ಎಲ್.ಇ.ಡಿ. ಪರದೆ ಮೂಲಕ ಕಲ್ಯಾಣೋತ್ಸವವನ್ನು ವೀಕ್ಷಿಸಲು ಅನುಕೂಲ ಕಲ್ಪಿಸಲಾಗಿತ್ತು.
Be the first to comment on "ಬಂಟ್ವಾಳದಲ್ಲಿ ಅದ್ದೂರಿಯಾಗಿ ನಡೆಯಿತು ಸೀತಾರಾಮ ಕಲ್ಯಾಣೋತ್ಸವ"