ನೇತಾಜಿ ಸುಭಾಷ್ ಚಂದ್ರ ಬೋಸ್ ಪ್ರೌಢಶಾಲೆ ಕೊಡಂಗೆಯಲ್ಲಿ ರೋಟರಿ ಕ್ಲಬ್ ಬಂಟ್ವಾಳ ಟೌನ್, ಜೇಸೀ ಜೋಡುಮಾರ್ಗ ನೇತ್ರಾವತಿ ಹಾಗೂ ಜವಾನ್ ಪ್ರೆಂಡ್ಸ್ ಇದರ ವತಿಯಿಂದ ಅಧ್ಯಯನ ತಂತ್ರ ಗಳು ಹಾಗೂ ಪರೀಕ್ಷಾ ತಯಾರಿ ಕಾರ್ಯಾಗಾರ ನಡೆಯಿತು.
ರೋಟರಿ ಕ್ಲಬ್ ಬಂಟ್ವಾಳ ಟೌನ್ ಇದರ ಅಧ್ಯಕ್ಷ ರಾದ ಚಂದ್ರಹಾಸ ಶೆಟ್ಟಿ ಕಾರ್ಯಾಗಾರ ವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಹತ್ತನೇ ತರಗತಿ ವಾರ್ಷಿಕ ಪರೀಕ್ಷೆ ಯಲ್ಲಿ ಈ ಬಾರಿ ನೂರು ಶೇಕಡಾ ಫಲಿತಾಂಶ ತರುವ ಬಗ್ಗೆ ರೋಟರಿ ಹಾಗೂ ಇತರೆ ಸಂಘ ಸಂಸ್ಥೆಗಳ ಜೊತೆ ಸೇರಿ ಕೆಲಸ ಮಾಡುವ ಪ್ರಯತ್ನ ನಡೆದಿದೆ. ತಾವೆಲ್ಲರೂ ತರಬೇತಿ ಪ್ರಯೋಜನ ಪಡೆಯಬೇಕು ಎಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆ ಯನ್ನು ಜೇಸೀ ಜೋಡುಮಾರ್ಗ ನೇತ್ರಾವತಿ ಅಧ್ಯಕ್ಷರಾದ ಸವಿತಾ ನಿರ್ಮಲ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಬಂಟ್ವಾಳ ಪುರಸಭೆಯ ಉಪಾಧ್ಯಕ್ಷರಾದ ಮಹಮ್ಮದ್ ನಂದರಬೆಟ್ಟು , ಶಾಲಾ ಮುಖ್ಯ ಶಿಕ್ಷಕರು ಹಾಗೂ ರೋಟರಿಯ ಟೀಚ್ ವಿಭಾಗದ ಮುಖ್ಯಸ್ಥ ರಾದ ಸರ್ವೋತ್ತಮ ಬಾಳಿಗ, ಯುವ ವಿಭಾಗದ ಮುಖ್ಯಸ್ಥ ರಾದ ಶನ್ ಪತ್ ಷರೀಪ್, ಜವಾನ್ ಪ್ರೆಂಡ್ಸ್ ಬಿಸಿರೋಡ್ ಇದರ ಅಧ್ಯಕ್ಷ ರಾದ ರಿಯಾಜ್ ಜವಾನ್. ಉಪಾಧ್ಯಕ್ಷ ರಾದ ಸತ್ತಾರ್ ನಂದರಬೆಟ್ಟು, ಕಾರ್ಯದರ್ಶಿ ಆಶಿಕ್ ಕುಕ್ಕಾಜೆ , ನವಾಜ್ ಕೈಕಂಬ ಮೊದಲಾದವರು ಹಾಜರಿದ್ದರು.
ಜೇಸಿ ವಲಯ ತರಬೇತುದಾರರಾದ ಉಮೇಶ್ ನಿರ್ಮಲ್ ತರಬೇತಿ ಕಾರ್ಯಾಗಾರ ನಡೆಸಿ ಕೊಟ್ಟರು. ಬಳಿಕ ವಿದ್ಯಾರ್ಥಿ ಗಳಿಗೆ ಹಳೇಯ ಪ್ರಶ್ನೆ ಪತ್ರಿಕೆ ಮುದ್ರಿಸಿ ವಿತರಣೆ ಮಾಡಲಾಯಿತು.
Be the first to comment on "ನೇತಾಜಿ ಪ್ರೌಢಶಾಲೆಯಲ್ಲಿ ಪರೀಕ್ಷಾ ತಯಾರಿ ಕಾರ್ಯಾಗಾರ"