ಕಾಂಗ್ರೆಸ್ ಪಕ್ಷದ ನಾಯಕರು ಪುದು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸೋಲಿನ ಭೀತಿಯಿಂದ ಭ್ರಮನಿರಸರಾಗಿದ್ದಾರೆ. ಎಸ್ ಡಿ ಪಿ ಐ ಪಕ್ಷವು ಬಿಜೆಪಿ ಮತ್ತು ಸಂಘ ಪರಿವಾರ ಸೋಲಿಸಲು ಜನ್ಮತಾಳಿರುವಾಗ ನಾವು ಬಿಜೆಪಿಯ ಜೊತೆ ಮೈತ್ರಿ ಮಾಡಿಕೊಳ್ಳುವ ಪ್ರಶ್ನೆಯೇ ಬರುವುದಿಲ್ಲ ಎಂದು ಪಕ್ಷದ ಪ್ರಮುಖ ರಿಯಾಜ್ ಫರಂಗಿಪೇಟೆ ಹೇಳಿದ್ದಾರೆ.
ಮುಂಬೈಯ ಗೊಂಡಿಯಾ ಜಿಲ್ಲಾ ಪರಿಷತ್ ನಿಂದ ಇತ್ತೀಚೆಗೆ ಮೈಸೂರು ನಗರ ಪಾಲಿಕೆಯ ವರೆಗಿನ ಒಳ ಒಪ್ಪಂದಗಳನ್ನು ಮಾಡಿರುವ ಕಾಂಗ್ರೆಸ್ ಗೆ ಎಸ್.ಡಿ.ಪಿ.ಐ. ಕುರಿತು ಮಾತನಾಡುವ ಯಾವುದೇ ನೈತಿಕತೆ ಇಲ್ಲ. ನಾವು ಬಿಜೆಪಿ ಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಬಗ್ಗೆ ಸಾಬೀತು ಪಡಿಸಿದರೆ ನಾವು ಪುದು ಗ್ರಾಮ ಪಂಚಾಯತ್ ಚುನಾವಣೆಗೆ ಸಲ್ಲಿಸಿರುವ ಎಲ್ಲಾ ನಾಮಪತ್ರ ಗಳನ್ನು ಹಿಂಪಡೆಯುತ್ತೇವೆ ಇಲ್ಲವಾದಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ನಾಮಪತ್ರ ಹಿಂಪಡೆಯಲಿ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಬಿಜೆಪಿ ಜೊತೆ ಮೈತ್ರಿ ಸಾಬೀತುಪಡಿಸಿದರೆ ಎಲ್ಲ ನಾಮಪತ್ರ ಹಿಂತೆಗೆತ: ಎಸ್.ಡಿ.ಪಿ.ಐ."