ಕೇಂದ್ರ ಸರಕಾರದ ಅಧೀನದಲ್ಲಿರುವ ಗ್ಯಾಸ್ ಕಂಪೆನಿಗಳ ಅಸಹಕಾರದಿಂದ ಅನಿಲಭಾಗ್ಯ ಯೋಜನೆ ಫಲಾನುಭವಿಗಳಿಗೆ ಸರಿಯಾಗಿ ತಲುಪುತ್ತಿಲ್ಲ. ಗ್ಯಾಸ್ ಕಂಪೆನಿಗಳಿಗೆ ರಾಜ್ಯ ಸರಕಾರ ಹಣ ಪಾವತಿ ಮಾಡಿದರೂ ಕಂಪೆನಿಗಳು ಗ್ಯಾಸ್ ವಿತರಕರಿಗೆ ಸಹಕಾರ ನೀಡುತ್ತಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಆರೋಪಿಸಿದರು.
ಬಿ.ಸಿ.ರೋಡಿನ ಸಚಿವರ ಕಚೇರಿಯ ಸಭಾಂಗಣದಲ್ಲಿ ಅರಣ್ಯ ಇಲಾಖೆಯ ವತಿಯಿಂದ ಪರಿಶಿಷ್ಠ ಪಂಗಡದ ಫಲಾನುಭವಿಗಳಿಗೆ ಜೇನಿನ ಪೆಟ್ಟಿಗೆ ಹಾಗೂ ಪರಿಶಿಷ್ಟ ಜಾತಿ ಹಾಗೂ ಪಂಗಡದ ಫಲಾನುಭವಿಗಳಿಗೆ ಉಚಿತ ಎಲ್‌ಪಿಜಿ ಗ್ಯಾಸ್ ಸ್ಟೌ ಹಾಗೂ ಸಿಲಿಂಡರ್ ವಿತರಿಸಿ ಅವರು ಮಾತನಾಡಿದರು.
ಕೇಂದ್ರ ಸರಕಾರ ಊರ್ಜ್ವ ಅನಿಲ ವಿತರಣೆಯಡಿ ಜನಪ್ರತಿನಿಗಳನ್ನು ಕಡೆಗಣಿಸಿ ಜನಪ್ರತಿನಿಗಳು ಅಲ್ಲದವರು ವಿತರಣೆ ಮಾಡುವ ಮೂಲಕ ಯೋಜನೆಯನ್ನು ರಾಜಕೀಯಗೊಳಿಸಲಾಗಿದೆ. ಗ್ರಾ.ಪಂ.ಗಳು ನೀಡುವ ಪಟ್ಟಿಯನುಸಾರ ಶಾಸಕರ ಉಪಸ್ಥಿತಿಯಲ್ಲಿ ಗ್ಯಾಸ್ ವಿತರಣೆ ನಡೆಯಬೇಕಿತ್ತು. ಸುಳ್ಳದಲ್ಲಿ ಶಾಸಕರ ಉಪಸ್ಥಿತಿಯಲ್ಲಿಯೇ ಗ್ಯಾಸ್ ವಿತರಿಸಲಾಗಿದೆ. ಇದನ್ನು ಜನರು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದರು. ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ಬದಲು ಮಾಡಬೇಕೆನ್ನುವ ಪಕ್ಷ ನಮ್ಮದಲ್ಲ, ದೇಶದಲ್ಲಿ ಪ.ಜಾತಿ ಮತ್ತು ಪಂಗಡದ ಅಭಿವೃದ್ದಿಗೆ ಅತೀ ಹೆಚ್ಚು ಅನುದಾನವನ್ನು ಬಿಡುಗಡೆ ಮಾಡಿದ ಸರಕಾರ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಎಂದರು.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಪಿಯೂಸ್ ರೊಡ್ರಿಗಸ್, ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ಕೊಳ್ನಾಡು ಗ್ರಾ.ಪಂ.ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ವೇದಿಕೆಯಲ್ಲಿದ್ದರು.
Be the first to comment on "ಅನಿಲಭಾಗ್ಯ ಯೋಜನೆ ತಲುಪಲು ಗ್ಯಾಸ್ ಕಂಪನಿಗಳ ಅಸಹಕಾರ: ರಮಾನಾಥ ರೈ"