ವಿದ್ಯಾರ್ಥಿಗಳಲ್ಲಿ ವಿಜ್ಞಾನ – ತಂತ್ರಜ್ಞಾನದಲ್ಲಿ ಆಸಕ್ತಿಯನ್ನು ಬೆಳೆಸುವ ಸಲುವಾಗಿ ಆಯ್ದ ಶಾಲೆಗಳಿಗೆ ರಾಷ್ಟೀಯ ಆವಿಷ್ಕಾರ ಅಭಿಯಾನ ಅನುದಾನವನ್ನು ನೀಡಲಾಗಿದ್ದು ಅದರ ಅಂಗವಾಗಿ ದ.ಕ.ಜಿ.ಪ.ಹಿ ಪ್ರಾ ಶಾಲೆ ಇರಾ ತಾಳಿತ್ತಬೆಟ್ಟು ಇಲ್ಲಿ ವಿಜ್ಞಾನ- ವಸ್ತು ಪರ್ದರ್ಶನವನ್ನು ಏರ್ಪಡಿಸಲಾಯಿತು.
ಇರಾ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಬ್ದುಲ್ ರಝಾಕ್ ಕುಕ್ಕಾಜೆ ಕ್ಯಾಂಡಲ್ ಮೂಲಕ ವಿದ್ಯುತ್ ದೀಪವನ್ನು ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಶಿವಪ್ರಸಾದ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಪ್ರಸ್ತುತ ಸನ್ನಿವೇಶದಲ್ಲಿ ವಿಜ್ಞಾನದ ಮಹತ್ವ, ವೈಜ್ಞಾನಿಕ ಕ್ಷೇತ್ರದಲ್ಲಿ ಭಾರತೀಯರ ಸಾಧನೆ ಬಗ್ಗೆ ಮಾತನಾಡಿದರು.
ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿ ಪ್ರದೀಪ್ ರಾಷ್ಟೀಯ ಆವಿಷ್ಕಾರ ಅಭಿಯಾನದ ಉದ್ದೇಶ ಮತ್ತು ಗುರಿಗಳ ಬಗ್ಗೆ ತಿಳಿಸಿದರು. ಮಂಚಿ ವಲಯದ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಗಣೇಶ್, ಇರಾ ಮತ್ತು ಹೂಹಾಕುವಕಲ್ಲು ಕ್ಲಸ್ಟರ್ ನ ಸಂಪನ್ಮೂಲ ವ್ಯಕ್ತಿ ಆಶಾ, ಶಾಲಾ ಮುಖ್ಯ ಶಿಕ್ಷಕಿ ಸುಜಾತ.ಟಿ.ಎಸ್, ಎಸ್ ಡಿ ಎಮ್ ಸಿ ಮತ್ತು ಗ್ರಾಮದ ಪಂಚಾಯತ್ ಸದಸ್ಯ ಲೆನ್ನಿ ಡಿ ಸೋಜ ಉಪಸ್ತಿತರಿದ್ದರು.
ಅಧ್ಯಕ್ಷತೆಯನ್ನು ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಮುರಳಿಧರ ಭಂಡಾರಿ ವಹಿಸಿದ್ದರು. ಮುಖ್ಯ ಶಿಕ್ಷಕಿ ಸುಜಾತ ಟಿ ಎಸ್ ಸ್ವಾಗತಿಸಿದರು. ವಿಜ್ಞಾನ ಪದವೀದರ ಶಿಕ್ಷಕಿ ಸೌಮ್ಯ ಹೆಚ್ ವಂದಿಸಿದರು, ಪದವೀದರ ಶಿಕ್ಷಕ ಶಂಕರ ಕಾರ್ಯಕ್ರಮ ನಿರ್ವಹಿಸಿದರು.
Be the first to comment on "ಇರಾ ತಾಳಿತ್ತಬೆಟ್ಟು ಶಾಲೆಯಲ್ಲಿ ವಿಜ್ಞಾನ- ವಸ್ತು ಪರ್ದರ್ಶನ"