ಯುವಕಾರ್ಯ ಹಾಗೂ ಕ್ರೀಡಾ ಸಚಿವಾಲಯ ನೆಹರು ಯುವಕೇಂದ್ರ ಮಂಗಳೂರು ಮತ್ತು ಮಂಗಳಾ ಫ್ರೆಂಡ್ಸ್ ಸರ್ಕಲ್ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜು ಬಂಟ್ವಾಳ, ರೋಟರಿ ಕ್ಲಬ್ ಬಂಟ್ವಾಳ ಮತ್ತು ಹಿರಿಯ ವಿದ್ಯಾರ್ಥಿ ಸಂಘ ಸ.ಪ್ರ.ದ ಕಾಲೇಜು ಬಂಟ್ವಾಳ ಇದರ ಸಂಯುಕ್ತ ಆಶ್ರಯದಲ್ಲಿ ನೆರೆಹೊರೆ – ಯುವಸಂಸತ್ತು ಕಾರ್ಯಕ್ರಮ ನಡೆಯಿತು.
ಬಂಟ್ವಾಳ ರೋಟರಿ ಕ್ಲಬ್ ನ ಅಧ್ಯಕ್ಷ ಸಂಜೀವ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಿದರು. ಬಂಟ್ವಾಳ ಸ.ಪ್ರ.ದ.ಕಾಲೇಜಿನ ಪ್ರಾಂಶುಪಾಲ ಅಜಕ್ಕಳ ಗಿರೀಶ ಭಟ್ ಅಧ್ಯಕ್ಷತೆ ವಹಿಸಿದ್ದರು.
ನಿವೃತ್ತ ಬ್ಯಾಂಕ್ ಅಧಿಕಾರಿ ನಾರಾಯಣ ಹೆಗ್ಡೆ , ಅರ್ಥಶಾಸ್ತ್ರ ಉಪಾನ್ಯಾಸಕ ಹೈದರಾಲಿ, ರಾಮಕೃಷ್ಣ ಮಠದ ಜಿತಕಾಮನಂದಜೀ ಮಹರಾಜ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.
ಈ ಮಾಹಿತಿ ಕಾರ್ಯಗಾರದಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳ ಅನುಷ್ಠಾನದಲ್ಲಿ ಯುವಜನತೆಯ ಪಾತ್ರ, ಪ್ರಧಾನಮಂತ್ರಿ ಜನಧನ ಯೋಜನೆ, ಭಾರತ ಮಾಲಾ ಯೋಜನೆ, ಸ್ವಚ್ಛಭಾರತ, ಸುಕನ್ಯಾ ಸಮೃದ್ಧಿ ಯೋಜನೆಯ ಕುರಿತಾಗಿ ಉಪಾನ್ಯಾಸ ನೀಡಲಾಗಿತ್ತು. ಆಂಗ್ಲ ಪ್ರಾಧ್ಯಾಪಕ ನಂದಕೀಶೋರ್ ಎಸ್. ಸ್ವಾಗತಿಸಿ, ಶಶಿಕಲಾ ವಂದಿಸಿದರು. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೀರ್ತಿರಾಜ್ ಕರಂದಾಡಿ ಕಾರ್ಯಕ್ರಮ ನಿರ್ವಹಿಸಿದರು.
Be the first to comment on "ಬಂಟ್ವಾಳ ಸರ್ಕಾರಿ ಪ್ರ.ದರ್ಜೆ ಕಾಲೇಜಲ್ಲಿ ನೆರೆಹೊರೆ – ಯುವಸಂಸತ್ತು"