ಸಹಕಾರ ಭಾರತಿಯಡಿ ಮುನ್ನಡೆಯುವ ಸಹಕಾರ ಸಂಘಗಳು ರೈತರಿಗೆ ಬೆನ್ನೆಲುಬಾಗಿ, ಅವರಿಗೆ ಬೇಕಾದ ಸವಲತ್ತುಗಳನ್ನು ಒದಗಿಸುವ ಪ್ರಾಮಾಣಿಕ ಪ್ರಯತ್ನಗಳನ್ನು ನಡೆಸುವ ಮೂಲಕ ರಾಷ್ಟ್ರಚಿಂತನೆ ಮೂಲಕ ಸಹಕಾರ ನೀಡುತ್ತಿವೆ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.
ಬಿ.ಸಿ.ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ಸಹಕಾರ ಭಾರತಿ ಬಂಟ್ವಾಳ ವತಿಯಿಂದ ಮಂಗಳವಾರ ಸಹಕಾರ ಭಾರತಿ ಸಂಸ್ಥಾಪಕ ಲಕ್ಷ್ಮಣ ರಾವ್ ಇನಾಂದಾರ್ ಜನ್ಮ ಶತಾಬ್ದಿನಿಮಿತ್ತ ಶತಾಬ್ದಿ ಸಹಕಾರಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾಜದ ಏಳಿಗೆಗಾಗಿ ಸಹಕಾರ ಕ್ಷೇತ್ರದ ಮೂಲಕ ಒಟ್ಟಾಗಿ ಕೆಲಸ ಮಾಡೊಣ ಕೃಷಿ ಕ್ಷೇತ್ರವನ್ನು ಲಾಭದಾಯಕವಾಗಿ ಮಾಡಲು ಸಹಕಾರಿ ಸಂಸ್ಥೆ ಅಗತ್ಯವಾಗಿದೆ ಎಂದು ಮುಖ್ಯ ಅತಿಥಿ ಪ್ರಗತಿಪರ ಕೃಷಿಕ ರಾಜೇಶ ನಾಯ್ಕ್ ಉಳಿಪಾಡಿ ಗುತ್ತು ಹೇಳಿದರು
ದ.ಕ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ಅಧ್ಯಕ್ಷತೆ ವಹಿಸಿ ಮಾತನಾಡಿ ಸಹಕಾರಿ ಕಾಯ್ದೆಗೆ ಅನುಗಣವಾಗಿ ಕಾರ್ಯನಿರ್ವಹಿಸುವುದು ಅಗತ್ಯವಾಗಿದೆ. ಸರಕಾರಿ ಅಧಿಕಾರಿಗಳನ್ನು ನೇಮಿಸುವ ಮೂಲಕ ಸರಕಾರ ಸಹಕಾರಿ ರಂಗದಲ್ಲಿಯೂ ಕೈಯಾಡಿಸುತ್ತಿರುವುದರಿಂದ ಸಹಕಾರಿ ಕ್ಷೇತ್ರದಲ್ಲಿ ಹಿನ್ನಡೆಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.
ಸಹಕಾರ ಭಾರತಿ ರಾಷ್ಟ್ರೀಯ ಉಪಾಧ್ಯಕ್ಷ ಕೊಂಕೋಡಿ ಪದ್ಮನಾಭ , ಮಂಗಳೂರು ಸ್ಕ್ಯಾಡ್ಸ್ ಅಧ್ಯಕ್ಷ ರವೀಂದ್ರ ಕಂಬಳಿ, ಶತಾಬ್ದಿ ಸಹಕಾರಿ ಸಮಾವೇಶ ಸಮಿತಿ ಅಧ್ಯಕ್ಷ ಜಿ.ಆನಂದ ಬಂಟ್ವಾಳ, ಉದಯ ರೈ ಮಾರೋಡಿ , ಕೃಷ್ಣ ಕುಂಪದವು ಬೆಳ್ಳೂರು , ಚಂದ್ರಶೇಖರ ತಾಳ್ತಾಜೆ, ಜಯಶಂಕರ ಬಾಸ್ರಿತ್ತಾಯ, ಪ್ರಮೋದ್ ಕುಮಾರ್ ರೈ ಉಪಸ್ಥಿತರಿದ್ದರು. ಶತಾಬ್ದಿ ಸಹಕಾರಿ ಸಮಾವೇಶ ಸಮಿತಿ ಅಧ್ಯಕ್ಷ ಜಿ.ಆನಂದ ಸಾಗತಿಸಿದರು. ಪ್ರಧಾನ ಕಾರ್ಯದರ್ಶಿ ದೇವಿಪ್ರಸಾದ್ ಕೆ. ವಂದಿಸಿದರು. ಬಂಟ್ವಾಳ ಕ್ಷೇತ್ರ ಬಿ.ಜೆ.ಪಿ ಅಧ್ಯಕ್ಷ ದೇವದಾಸ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ವಿಚಾರಗೋಷ್ಠಿಗಳು:
ಮಂಗಳೂರು ಎಸ್.ಡಿ.ಸಿ.ಸಿ ಬ್ಯಾಂಖ್ ನಿರ್ದೇಶಕ ಟಿ.ಜಿ ರಾಜಾರಾಮ ಭಟ್ ಸಹಕಾರಿ ಕಾಯ್ದೆ ಸಾಧಕ – ಬಾಧಕಗಳ ಕುರಿತು ಮಾತನಾಡಿದರು. ದ.ಕ ತೋಟಗಾರಿಕಾ ಬೆಳೆಗಳ ಸಂಸ್ಕರಣೆ ಮತ್ತು ಮಾರಾಟ ಸಂಘದ ಅಧ್ಯಕ್ಷ ಲಕ್ಷ್ಮೀ ನಾರಾಯಣ ಉಡುಪ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿ ಊರಿನ ಅಭಿವೃದ್ಧಿ ಆಗಬೇಕಾದರೆ ಪ್ರಾಥಮಿಕ ಸಹಕಾರಿ ಸಂಘಗಳು ಜನರೊಡನೆ ಬೆರೆತು ಕಾರ್ಯ ನಿರ್ವಹಿಸಬೇಕು ಎಂದರು. ದ.ಕ ಜಿಲಾ ಸಹಕಾರ ಯೂನಿಯನ್ ನಿರ್ದೇಶಕ ಶ್ಯಾಮ್‌ಪ್ರಸಾದ್ ಪೂಂಜ , ಪೊಳಲಿ ಸೇವಾ ಸಹಕಾರಿ ಸಂಘದ ಸಧ್ಯಕ್ಷ ಸಂಪತ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಸಹಕಾರ ಭಾರತಿ ರಾಜ್ಯ ಸಂಘಟನಾ ಪ್ರಮುಖ್ ಎಸ್. ಆರ್ ಸತೀಶ್ಚಂದ್ರ ಗ್ರಾಮೀಣಾಭಿವೃದ್ಧಿಯಲ್ಲಿ ಸಹಕಾರಿಗಳ ಪಾತ್ರ ಕುರಿತು ವಿಷಯ ಮಂಡಿಸಿದರು. ಅಧ್ಯಕ್ಷತೆ ವಹಸಿದ್ದ ಜಿಲ್ಲಾ ಸಹಕಾರಿ ಹಾಲು ಒಕ್ಕೂಟ ನಿರ್ದೇಶಕ ಡಾ. ಕೆ.ಎಮ್. ಕೃಷ್ಣ ಭಟ್ ಮಾತನಾಡಿದರು. ಹಿರಿಯ ಸಹಕಾರಿ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿಯವರು ಸಹಕಾರಿಗಳ ಜವಾಬ್ದಾರಿಯನ್ನು ತಿಳಿಸುತ್ತಾ ಜಿಲ್ಲಾ ಸಹಕಾರಿ ಯೂನಿಯನ್ ನಿರ್ಧೆಶಕ ಸಂತೋಷ್ ಕುಮಾರ್ ಶೆಟ್ಟಿ, ವಿಟ್ಲ ಸಹಕಾರ ಬ್ಯಾಂಕ್‌ನ ಉಪಾಧ್ಯಕ್ಷ ದಯಾನಂದ ಉಜಿರೆಮಾರ್, ಮಹಿಳಾ ಪ್ರಕೋಷ್ಠದ ಉಪಾಧ್ಯಕ್ಷೆ ಸುಮನಾ ಶರಣ್, ಸಹಕಾರ ಭಾರತಿ ರಾಷ್ಟ್ರೀಯ ಕಾರ್ಯದರ್ಶಿ ಭಾರತಿ ಭಟ್ ಉಪಸ್ಥಿತರಿದ್ದರು.
ಸಮಾರೋಪ:
ಸಹಕಾರಿ ಸಂಸ್ಥೆಗಳು ಗ್ರಾಮೀಣ ಅಭಿವೃದ್ಧಿ ಕೇಂದ್ರವಾಗಿ ಬೆಳೆಯಲು ಕೈಜೋಡಿಸಬೇಕು ಎಂದು ಸಹಕಾರಿ ಭಾರತಿ ರಾಜ್ಯ ಸಂಘಟನಾ ಪ್ರಮುಖ್ ಹರೀಶ್ ಕುಮಾರ್ ಹೇಳಿದರು. ಶತಾಬ್ದಿ ಸಹಕಾರಿ ಸಮಾವೇಶದ ಸಮಾರೋಪ ಭಾಷಣ ಮಾಡಿ ಮಾತನಾಡಿದರು. ಸಹಕಾರ ಭಾರತಿ ಬಂಟ್ವಾಳ ಅಧ್ಯಕ್ಷ ಜಯಶಂಕರ ಬಾಸ್ರಿತ್ತಾಯ ಅಧ್ಯಕ್ಷತೆ ವಹಿಸಿದ್ದರು. ಸಮಾವೇಶ ಸಮಿತಿ ಅಧ್ಯಕ್ಷ ಜಿ.ಆನಂದ ಬಂಟ್ವಾಳ ,ದೇವಿಪ್ರಸಾದ್ ಕೆ. ಪ್ರಮೋದ್ ಕುಮಾರ್ ರೈ ಕಾಡಬೆಟ್ಟು ವಂದಿಸಿದರು. ಬಿ.ಜೆ.ಪಿ ಕ್ಷೇತ್ರಾಧ್ಯಕ್ಷ ದೇವದಾಸ ಶೆಟ್ಟಿ ನಿರೂಪಿಸಿದರು.
Be the first to comment on "ರೈತರಿಗೆ ಬೆನ್ನೆಲುಬಾಗಿ ಸಹಕಾರ ಭಾರತಿಯ ಸಂಘಗಳು: ಡಾ. ಕಲ್ಲಡ್ಕ ಪ್ರಭಾಕರ ಭಟ್"