- ಡಾ.ಎ.ಜಿ.ರವಿಶಂಕರ್
ಕಲ್ಲು ಸಕ್ಕರೆ ಸಾಧಾರಣವಾಗಿ ಎಲ್ಲರ ಮನೆಯಲ್ಲೂ ಇರುತ್ತದೆ. ಯಾವುದಕ್ಕೆ ಅಲ್ಲದಿದ್ದರೂ ಮಕ್ಕಳು ಹಟ ಮಾಡಿದಾಗ ಕೊಡಲಿಕ್ಕಾದೀತು ಎಂದು ಇಟ್ಟುಕೊಳ್ಳುವವರೂ ಇರುತ್ತಾರೆ. ಆದರೆ ಹಲವಾರು ಸಂದರ್ಭಗಳಲ್ಲಿ ಇದು ಬಹು ಸರಳ ಹಾಗು ಉತ್ತಮ ಫಲದಾಯಕ ಔಷಧವಾಗಿ ಕೆಲಸ ಮಾಡುತ್ತದೆ .
- ಬಿಸಿಲಿನಲ್ಲಿ ಬಂದು ಅತಿಯಾದ ಬಾಯಾರಿಕೆ ಹಾಗು ದಣಿವು ಆದಾಗ ಒಂದು ತುಂಡು ಕಲ್ಲು ಸಕ್ಕರೆಯನ್ನು ಬಾಯಲ್ಲಿ ಹಾಕಿ ಚಪ್ಪರಿಸಬೇಕು.
- ಮಧುಮೇಹದ ರೋಗಿಗಳಲ್ಲಿ ಅಕಸ್ಮಾತ್ತಾಗಿ ಸಕ್ಕರೆಯ ಅಂಶ ಕಡಿಮೆಯಾದಾಗ ಕಲ್ಲುಸಕ್ಕರೆಯನ್ನು ಜಗಿಯಬೇಕು ಅಥವಾ ಹುಡಿಮಾಡಿ ನೀರಿನಲ್ಲಿ ಕರಗಿಸಿ ಕುಡಿಸಬೇಕು
- ಗಂಟಲು ಒಣಗಿ ಸ್ವರದ ಇಂಪು ಹೋದಾಗ ಕಲ್ಲುಸಕ್ಕರೆಯನ್ನು ಚಪ್ಪರಿಸಬೇಕು.
- ಹಾಗೆಯೇ ಗಂಟಲು ತುರಿಸಿ ಒಣಕೆಮ್ಮು ಬರುತ್ತಿದ್ದರೆ ಕೂಡಾ ಕಲ್ಲುಸಕ್ಕರೆಯನ್ನು ಚಪ್ಪರಿಸಿದರೆ ಕೆಮ್ಮು ವಾಸಿಯಾಗುತ್ತದೆ.
- ಗಾಯ ಅಥವಾ ಹುಣ್ಣಿನ ಮೇಲೆ ಕಲ್ಲುಸಕ್ಕರೆ ಪುಡಿಯನ್ನು ಹಾಕಿ ಬ್ಯಾಂಡೇಜ್ ಮಾಡಿದರೆ ಗಾಯ ಸೋಂಕು ರಹಿತವಾಗಿ ಬೇಗನೆ ವಾಸಿಯಾಗುತ್ತದೆ.
- ಗಾಯದಿಂದ ರಕ್ತ ಸೋರುತ್ತಿದ್ದರೆ ಕಲ್ಲುಸಕ್ಕರೆ ಹುಡಿಯನ್ನು ಚಿಮುಕಿಸಬೇಕು ಆಟವಾ ತೆಳ್ಳಗಿನ ಬಟ್ಟೆಯಲ್ಲಿ ಇಟ್ಟು ಗಾಯದ ಮೇಲೆ ಕಟ್ಟಬೇಕು.
- ಅತಿಯಾದ ಬಿಸಿ ಪದಾರ್ಥ ಅಥವಾ ಅತಿಯಾದ ಖಾರ ಪದಾರ್ಥಗಳನ್ನು ತಿಂದು ಬಾಯಿ ಹಾಗು ನಾಲಿಗೆ ಉರಿ ಬರುತ್ತಿದ್ದರೆ ಕಲ್ಲುಸಕ್ಕರೆಯನ್ನು ಚಪ್ಪರಿಸಬೇಕು.
- ಕಲ್ಲುಸಕ್ಕರೆ ಮತ್ತು ಈರುಳ್ಳಿ ರಸದ ಮಿಶ್ರಣವನ್ನು ಸೇವಿಸುವುದರಿಂದ ಮೂತ್ರಕೋಶದ ಕಲ್ಲು ನಿವಾರಣೆಯಾಗುತ್ತದೆ.
- ಕಲ್ಲು ಸಕ್ಕರೆಯನ್ನು ತಣ್ಣಗಿನ ನೀರಿನಲ್ಲಿ ಕರಗಿಸಿ ಕುಡಿಯುವುದರಿಂದ ಮೂಗಿನಿಂದ ಬರುವ ರಕ್ತಸ್ರಾವ ಕಡಿಮೆಯಾಗುತ್ತದೆ.
- ಮಿತವಾದ ಕಲ್ಲು ಸಕ್ಕರೆಯ ಬಳಕೆಯು ಮೆದುಳಿಗೆ ಉತ್ತಮ ಶಕ್ತಿದಾಯಕವಾಗಿದೆ.
- ಕಲ್ಲುಸಕ್ಕರೆಯನ್ನು ಹುಡಿಮಾಡಿ ಬಾದಾಮಿ ಎಣ್ಣೆಯಲ್ಲಿ ಕಲಸಿ ಶರೀರಕ್ಕೆ ಹಚ್ಚುವುದರಿಂದ ಶರೀರದ ಸತ್ತ ಚರ್ಮವು ತೊಲಗಿ ಚರ್ಮ ನುಣುಪಾಗಿ ಕಾಂತಿಯುತವಾಗುತ್ತದೆ.
- ಕಾಲಿನ ಹಿಮ್ಮಡಿ ಸೀಳಿ ನೋವಿನಿಂದ ಕೂಡಿದ್ದರೆ ಕಲ್ಲುಸಕ್ಕರೆಯ ಪಾಕ ಮಾಡಿ ಆರಿದ ನಂತರ ಹಿಮ್ಮಡಿಗೆ ಹಚ್ಚಬೇಕು.
Be the first to comment on "ಕಲ್ಲು ಸಕ್ಕರೆ ಚಪ್ಪರಿಸಿರೋ…"