ಇರಾ ಗ್ರಾಮ ಪಂಚಾಯತ್ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಿಸಿದ ಬಪ್ಪರಕಂಬಳ ಕಿಂಡಿ ಅಣೆಕಟ್ಟಿನಲ್ಲಿ ಮೀನು ಕೃಷಿ ಸಾಕಣೆಗೆ ಇಂದು ಅಣೆಕಟ್ಟಿಗೆ ಮೀನು ಬಿಡುವ ಮೂಲಕ ಚಾಲನೆ ನೀಡಲಾಯಿತು..ಈ ಸಂಧರ್ಭದಲ್ಲಿ ಕುರ್ನಾಡ್ ಜಿಲ್ಲಾ ಪಂಚಯಾತ್ ಸದಸ್ಯರಾದ ಮಮತಾ ಡಿ ಎಸ್ ಗಟ್ಟಿ, ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷರಾದ ಚಂದ್ರಹಾಸ ಕರ್ಕೇರ, ಇರಾ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಬ್ದುಲ್ ರಝಾಕ್ ಕುಕ್ಕಾಜೆ, ಪಂಚಾಯತ್ ಸದಸ್ಯರಾದ ಮೊಯಿದಿನ್ ಕುಂಞ, ಎಂ ಬಿ ಉಮ್ಮರ್ ರಮೇಶ್ ಇದ್ದರು.
ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ.ಶಿವಕುಮಾರ್ ಲಾಭದಾಯಕ,ಮೀನು ಕೃಷಿಯ ಬಗ್ಗೆ ರೈತರಿಗೆ ಮಾಹಿತಿ ನೀಡಿದರು. ಕಾರ್‍ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ನ ಮೀನುಗಾರಿಕೆ ನಿರ್ದೇಶಕರಾದ ಸುಶ್ಮಿತಾ ರಾವ್,ಕೃಷಿ ವಿಜ್ಞಾನಿ ಡಾ.ಗಣೇಶ್ ಹಾಗೂ ಸ್ಥಳೀಯ ಕೃಷಿಕರಾದ ಸಂತೋಷ್ ಕುಮಾರ್, ಪಿ ಯಂ ಅಬ್ದುಲ್ಲ, ಇಬ್ರಾಹಿಂ, ಮೌರೀಸ್ ಡಿ ಸೋಜ ,ಅಬ್ದುಲ್ ಖದರ್ ,ವೈ ಬಿ ಜಯ, ಜಗನ್ನಾಥ ಶೆಟ್ಟಿ ,ಗುಲಾಬಿ ಶೆಟ್ಟಿ ಹಾಗೂ ಉದ್ಯೋಗ ಖಾತರಿ ಯೋಜನೆ ತಾಂತ್ರಿಕ ಸಹಾಯಕರಾದ ಗುರುಕಿರಣ್ ಶೆಟ್ಟಿ ಉಪಸ್ಥಿತರಿದ್ದರು. ಗೋಪಾಲ ಅಶ್ವತ್ತಡಿ ಸ್ವಾಗತಿಸಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಳಿನಿ ಎ ಕೆ ವಂದಿಸಿದರು.
Be the first to comment on "ಕಿಂಡಿ ಅಣೆಕಟ್ಟಿನಲ್ಲಿ ಮೀನು ಕೃಷಿ ಸಾಕಣೆಗೆ ಚಾಲನೆ"