- ಪರಿವರ್ತನೆಗೆ ಬಿಜೆಪಿ ನಡಿಗೆ ಕಾರ್ಯಕ್ರಮಕ್ಕೆ ಚಾಲನೆ
ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರನ್ನು ಸೋಲಿಸಿ, ರಾಜೇಶ್ ನಾಯ್ಕ್ ಅವರನ್ನು ಗೆಲ್ಲಿಸುವ ಮೂಲಕ ಬಂಟ್ವಾಳದಲ್ಲಿ ಸಾಮರಸ್ಯದ ವಾತಾವರಣ ನಿರ್ಮಿಸಲು ಸಹಕರಿಸಿ.
ಇದು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಮಾಡಿದ ಮನವಿ.
ಬಿಜೆಪಿ ಬಂಟ್ವಾಳ ಕ್ಷೇತ್ರ ಸಮಿತಿ ವತಿಯಿಂದ ರಾಜೇಶ್ ನಾಯ್ಕ್ ಉಳಿಪ್ಪಾಡಿ ನೇತೃತ್ವದಲ್ಲಿ ಪರಿವರ್ತನೆಗೆ ನಮ್ಮ ನಡಿಗೆ ಪಾದಯಾತ್ರೆ ಉದ್ಘಾಟನಾ ಸಮಾರಂಭ ಅರಳ ಶ್ರೀ ಗರುಡಮಹಾಕಾಳಿ ದೇವಸ್ಥಾನದ ಬಳಿ ಭಾನುವಾರ ನಡೆಯಿತು. ಸಂಸದ ನಳಿನ್ ಕುಮಾರ್ ಕಟೀಲು ಪಾದಯಾತ್ರೆಗೆ ಪಕ್ಷದ ಧ್ವಜ ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು.
ಸಿದ್ದರಾಮಯ್ಯ ಸರ್ಕಾರದ ಕೆಟ್ಟ ಆಡಳಿತಕ್ಕೆ ಜನ ಬೇಸತ್ತಿದ್ದಾರೆ, ಮುಖ್ಯಮಂತ್ರಿ ಯಾಗಿ ಪ್ರತಿಜ್ಞೆ ಸ್ವೀಕರಿಸಿದ ಕ್ಷಣದಿಂದಲೇ ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದಾರೆ, ಅಹಿಂದದ ಹೆಸರಿನಲ್ಲಿ ಹಿಂದೂ ಸಮಾಜವನ್ನು ಪಡೆಯುತ್ತಿದ್ದಾರೆ. ಒಡೆದು ಆಳುವ ನೀತಿಯ ಮೂಲಕ ಸರ್ವಾಧಿಕಾರಿ ಧೋರಣೆ ತೋರುತ್ತಿದ್ದಾರೆ ಎಂದು ಆರೋಪಿಸಿದ ನಳಿನ್, ರಾಜ್ಯ ಸರಕಾರದಿಂದ ಹತ್ಯಾಭಾಗ್ಯವಷ್ಟೇ ದೊರೆತಿದೆ ಎಂದರು.
ಉದ್ಘಾಟನಾ ಸಮಾರಂಭದಲ್ಲಿ ಯಾರು ಏನು ಹೇಳಿದರು? ವಿವರ www.bantwalnews.com ಬಂಟ್ವಾಳನ್ಯೂಸ್ ನಲ್ಲಿ.
ಸಂಸದ ನಳಿನ್ ಕುಮಾರ್ ಕಟೀಲ್ –
ರೈ ಅರಣ್ಯ ಸಚಿವರಾಗಿ ತಮ್ಮ ಪದವಿಗೂ ನ್ಯಾಯ ಕೊಡಲಿಲ್ಲ. ಶಾಸಕರಾಗಿಯೂ ಏನೂ ಮಾಡಲಿಲ್ಲ ಕೇಂದ್ರದ ಯೋಜನೆಗಳಿಗೆ ತೆಂಗಿನಕಾಯಿ ಒಡೆದದ್ದು ಮಾತ್ರ ರೈ ಸಾಧನೆ ಹೀಗಾಗಿ ಮುಂದಿನ ಚುನಾವಣೆಯಲ್ಲಿ ರೈ ಯವರನ್ನು ಸೋಲಿಸಲು ಬಂಟ್ವಾಳದ ಜನತೆ ನಿಶ್ಚಯಿಸಿದ್ದಾರೆ, ಬೇರೆ ಬೇರೆ ಸಂಸ್ಥೆಗಳು ನಡೆಸಿದ ಸಮೀಕ್ಷೆಯಲ್ಲೂ ಇದು ಪ್ರಕಟವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಅವಧಿಯಲ್ಲಿ ಹೆಚ್ಚು ಕೋಮು ಗಲಭೆಗಳಾಗಿವೆ. ಕೆಪಿಟಿ, ಬಸ್ ನಿಲ್ದಾಣ, ಅಗ್ನಿ ಶಾಮಕ ಠಾಣೆ, ಡಿಗ್ರಿ ಕಾಲೇಜು ಎಲ್ಲವನ್ನೂ ಮಂಜೂರು ಮಾಡಿದ್ದು ನಾವು ಬಿಜೆಪಿಯವರು, ಆದರೆ ಮುಖ್ಯಮಂತ್ರಿ ಉದ್ಘಾಟಿಸಿದ್ದಾರೆ. ನಾವು ಶಂಕುಸ್ಥಾಪನೆ ಮಾಡಿದ್ದನ್ನು ಅವರು ಉದ್ಘಾಟಿಸಿದ್ದಾರೆ.
ಮಾಜಿ ಶಾಸಕ ರುಕ್ಮಯ ಪೂಜಾರಿ –
ಮುಂದಿನ ಚುನಾವಣೆಯಲ್ಲಿ ಬಂಟ್ವಾಳವನ್ನು ಕಾಂಗ್ರೇಸ್ ಮುಕ್ತವಾಗಿಸಬೇಕು. ಬಿಜೆಪಿ ಸಾಧನೆಗಳನ್ನು ಜನರಿಗೆ ತಲುಪಿಸುವ ಕಾರ್ಯ ಕಾರ್ಯಕರ್ತರಿಂದ ಆಗಬೇಕು.
ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ –
೧೮ ವರ್ಷ ತುಂಬಿದ ಯುವಕ ಯುವತಿಯರ ಹೆಸರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವ ಕಾರ್ಯದಲ್ಲಿ ಪ್ರತಿಯೊಬ್ಬ ಕಾರ್ಯಕರ್ತರೂ ತೊಡಗಿಸಿಕೊಳ್ಳಬೇಕು.
ಮಾಜಿ ವಿಧಾನಪರಿಷತ್ ಸದಸ್ಯ ಮೋನಪ್ಪ ಭಂಡಾರಿ
ತಾಕತ್ತಿದ್ದರೆ ಅರೆಸ್ಸೆಸ್ ಪರಿವಾರ ಸಂಘಟನೆಗಳನ್ನು ಮುಖ್ಯಮಂತ್ರಿ ಸಿದ್ಧರಾಮ ಯ್ಯ ನಿಷೇಧಿಸಲಿ
ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ್
ರಮಾನಾಥ ರೈ ಸ್ವಯಂಘೋಷಿತ ಜಾತ್ಯಾತೀತ ನಾಯಕ. ರೈ ಸೋತರೆ ಮಾತ್ರ ಜಿಲ್ಲೆಯಲ್ಲಿ ಸಾಮರಸ್ಯ . ಬಿಜೆಪಿಗೆ ಕಾರ್ಯಕರ್ತರೇ ಆಸ್ತಿ. ಅವರೇ ಚಾಲಕರು.
ಉಳಿಪಾಡಿಗುತ್ತು ರಾಜೇಶ್ ನಾಯ್ಕ್
ಕಳೆದ ಚುನಾವಣೆ ವೇಳೆ ನನಗೆ ಚುನಾವಣೆ ಹೊಸದಾಗಿತ್ತು, ಆದರೆ ಈ ಬಾರಿ ಕ್ಷೇತ್ರದ ಕಾರ್ಯಕರ್ತರು ನನ್ನ ಜೊತೆಗಿದ್ದಾರೆ. ಬಂಟ್ವಾಳದಲ್ಲಿಯೂ ಜನ ಪರಿವರ್ತನೆಯನ್ನು ಬಯಸಿದ್ದಾರೆ. ಹೀಗಾಗಿ ಬಂಟ್ವಾಳ ಕಾಂಗ್ರೇಸ್ ಮುಕ್ತವಾಗಲಿದೆ.
ಉಪಸ್ಥಿತರಿದ್ದ ಪ್ರಮುಖರು:
ಸುಲೋಚನಾ ಜಿ.ಕೆ.ಭಟ್, ಪದ್ಮನಾಭ ಕೊಟ್ಟಾರಿ, ಉಮಾನಾಥ ಕೋಟ್ಯಾನ್, ಬಿ.ದೇವದಾಸ ಶೆಟ್ಟಿ, ಪದ್ಮನಾಭ ಕೊಟ್ಟಾರಿ, ಜಿ.ಆನಂದ, ಚೆನ್ನಪ್ಪ ಕೋಟ್ಯಾನ್, ಮೋನಪ್ಪ ದೇವಸ್ಯ, ಜಿತೇಂದ್ರ ಕೊಟ್ಟಾರಿ, ಜಿ.ಪಂ.ಸದಸ್ಯರಾದ ರವೀಂದ್ರ ಕಂಬಳಿ, ಕಮಲಾಕ್ಷಿ ಪೂಜಾರಿ,ತುಂಗಪ್ಪ ಬಂಗೇರ, ಜಿ.ಆನಂದ, ಉಮಾನಾಥ ಕೋಟ್ಯಾನ್, ಬೃಜೇಶ್ ಚೌಟ, ರತ್ನಕುಮಾರ್ ಚೌಟ, ನಾಗೇಶ್, ಬಿ.ದಿನೇಶ ಭಂಡಾರಿ,ಸುಗುಣಾ ಕಿಣಿ, ತಂಗಮ್ಮ, ರಾಮದಾಸ ಬಂಟ್ವಾಳ ದೇವದಾಸ ಶೆಟ್ಟಿ ಡೊಂಬಯ್ಯ ಪೂಜಾರಿ.
Be the first to comment on "ಪರಿವರ್ತನೆ ಬಂಟ್ವಾಳ ಕ್ಷೇತ್ರದಿಂದಲೇ ಆರಂಭಗೊಳ್ಳಲಿ – ನಳಿನ್"