ದ.ಕ.ಜಿಲ್ಲೆಯ ಮೂಡಬಿದ್ರೆಯ ಸಿವಿಲ್ ನ್ಯಾಯಾಲಯದ ಆದೇಶದಂತೆ ನೇಮಕವಾದ ಕೋರ್ಟ್ ಕಮೀಷನರ್ ನ್ಯಾಯವಾದಿ ವಿಶಾಲ್ ಕುಮಾರ್ ರವರ ಸಮಕ್ಷಮ ದಾವಾ ಸ್ಥಳದ ಪರಿವೀಕ್ಷಣೆ ನಡೆಸುತ್ತಿರುವ ಸಂದರ್ಭ ದಾವಾ ಪಕ್ಷಗಾರರ ವಕೀಲರು ಹಾಗೂ ಕಾರ್ಕಳ ವಕೀಲರ ಸಂಘದ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿಯವರ ಮೇಲೆ ಮಾರಾಯುಧಗಳಿಂದ ಹಲ್ಲೆ ನಡೆಸಿದ ಕೃತ್ಯವನ್ನು ಖಂಡಿಸಿ ಬಂಟ್ವಾಳ ವಕೀಲರ ಸಂಘದ ವತಿಯಿಂದ ತಹಶೀಲ್ದಾರ್ ರವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭ ವಕೀಲರ ಸಂಘದ ಅಧ್ಯಕ್ಷ ವೆಂಕಟರಮಣ ಶೆಣೈ, ಉಪಾಧ್ಯಕ್ಷ ಸುರೇಶ್ ಕುಮಾರ್ ನಾವೂರು, ಪ್ರಧಾನ ಕಾರ್ಯದರ್ಶಿ ರಾಜಾರಾಮ ನಾಯಕ್, ಜತೆ ಕಾರ್ಯದರ್ಶಿ ವಿನೋದ ಎಸ್, ಕೋಶಾಧಿಕಾರಿ ವೀರೇಂದ್ರ, ವಕೀಲರುಗ ಳಾದ ಚಂದ್ರಶೇಖರ ಪುಂಚಮೆ, ಸತೀಶ್ ಬಿ., ಶೋಭಲತಾ ಸುವರ್ಣ, ಮಹಮ್ಮದ್ ಕಬೀರ್, ದೀಪಕ ಕುಮಾರ್ ಜೈನ್, ಮಮತಾ ನಾಯಕ್, ಶೈಲಜಾ ರಾಜೇಶ್, ತುಳಸೀದಾಸ್, ಚಂದ್ರಶೇಖರ್ ಬೈರಿಕಟ್ಟೆ, ಉಮಾಕರ್,ಸುರೇಶ್ ಶೆಟ್ಟಿ ಉಪಸ್ಥಿತರಿದ್ದರು.
ವಕೀಲರ ಪರಿಷತ್ತು ಖಂಡನೆ:
ಹಲ್ಲೆ ಯತ್ನವು ನಾಗರಿಕ ಸಮಾಜದಲ್ಲಿ ಘಟಿಸಿದ ಅಮಾನುಷ ಕೃತ್ಯ ವನ್ನು ರಾಜ್ಯ ವಕೀಲರ ಪರಿಷತ್ ತೀವ್ರ ವಾಗಿ ಖಂಡಿಸುತ್ತದೆ.ಸಮಾಜದಲ್ಲಿ ಇಂತಹ ಘಟನೆಗಳು ನಡದಾಗ ಇದರ ವಿರುದ್ಧ ಎಲ್ಲಾ ನಾಗರಿಕರು, ವಕೀಲರುಗಳು ಇಂತಹ ಅಮಾನುಷ ಕೃತ್ಯವನ್ನು ವಿರೋಧಿ ಸುವ ನಿಟ್ಟಿನಲ್ಲಿ ಒಂದಾಗಬೇಕೆಂದು ರಾಜ್ಯ ವಕೀಲರ ಪರಿಷತ್ತಿನ ಮಾಜಿ ಉಪಾಧ್ಯಕ್ಷ ಸುಭಾಶ್ ಕೌಡಿಚ್ಚಾರ್ ತಿಳಿಸಿದ್ದಾರೆ.
ಈ ಘಟನೆಯ ಆರೋಪಿಗಳನ್ನು ಮತ್ತು ಸಂಬಂದ ಪಟ್ಟ ವ್ಯಕ್ತಿಗಳನ್ನು ತೀವ್ರ ವಾಗಿ ವಿಚಾರಣೆಗೊಳಪಡಿಸಿ ಈ ಘಟನೆಯ ಸತ್ಯಾಸತ್ಯತೆಯನ್ನು ಬಹಿರಂಗ ಪಡಿಸಲು ರಾಜ್ಯ ಸರಕಾರವನ್ನು ಮತ್ತು ಕಾನೂನು ಸಚಿವರನ್ನು ಒತ್ತಾಯಿಸಿದ್ದಾರೆ.
Be the first to comment on "ವಕೀಲರ ಮೇಲೆ ಹಲ್ಲೆ: ಬಾರ್ ಅಸೋಸಿಯೇಶನ್ ಮನವಿಯರ್ಪಣೆ"