ಬಿಐಟಿ ಹಾಗೂ ಬೀಡ್ಸ್ ಎಂಜಿನಿಯರಿಂಗ್ ಕಾಲೇಜು ವತಿಯಿಂದ ಸಿ.ಇ.ಟಿ ಅಣುಕು ಪರೀಕ್ಷೆ ಹಾಗೂ ವೃತ್ತಿಪರ ಕೋರ್ಸ್ ಮಾರ್ಗದರ್ಶನ ಕಾರ್ಯಾಗಾರ ವಿಟ್ಲದ ವಿಠಲ ಪದವಿಪೂರ್ವ ಕಾಲೇಜಿನಲ್ಲಿ ಮಂಗಳವಾರ ನಡೆಯಿತು.
ಈ ಕಾರ್ಯಾಗಾರದಲ್ಲಿ ಸುಮಾರು ನೂರಕ್ಕಿಂತಲೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಸಿ.ಇ.ಟಿ ಹಾಗೂ ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಮಾರ್ಗದರ್ಶನ ನೀಡಲಾಯಿತು. ಬಳಿಕ ಸಿ.ಇ.ಟಿ ಅಣುಕು ಪರೀಕ್ಷೆ ನಡೆಸಲಾಯಿತು.
ಬಿಐಟಿ ಕಾಲೇಜಿನ ಪ್ರಾಂಶುಪಾಲ ಡಾ ಎ.ಜೆ ಆಂತೋನಿ, ಪ್ರಾಧ್ಯಾಪಕರಾದ ಇಮ್ರಾನ್ ಯು.ಎ, ಮುಸ್ತಫಾ ಖಲೀಲ್ ವಿಟ್ಲ, ಸುಶಾಂತ್ ಕೆ.ಜೆ ಹಾಗೂ ನಿತಿನ್ ಅವರು ಕಾರ್ಯಕ್ರಮ ನಡೆಸಿಕೊಟ್ಟರು.
ವಿಜೇತ ವಿದ್ಯಾರ್ಥಿಗಳಾದ ನವ್ಯಾ, ಮಂಜುಶ್ರೀ, ಮಹಮ್ಮದ್ ಹಫೀಲ್ ಅವರಿಗೆ ಪ್ರಮಾಣ ಪತ್ರ ಹಾಗೂ ಪ್ರಶಸ್ತಿಯನ್ನು ವಿತರಿಸಲಾಯಿತು.
ವಿಠಲ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಆದರ್ಶ ಚೊಕ್ಕಾಡಿ, ಉಪನ್ಯಾಸಕ ಪ್ರಕಾಶ್ ಉಪಸ್ಥಿತರಿದ್ದರು.
Be the first to comment on "ಸಿ.ಇ.ಟಿ ಅಣುಕು ಪರೀಕ್ಷೆ, ವೃತ್ತಿಪರ ಕೋರ್ಸ್ ಮಾರ್ಗದರ್ಶನ"