- ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಕಚೇರಿ ಉದ್ಘಾಟನೆ
- ಬಿ.ಸಿ.ರೋಡಿನಲ್ಲಿ ಬಂಟ್ವಾಳ, ಪಾಣೆಮಂಗಳೂರು ಬ್ಲಾಕ್ ಸಮಾವೇಶ
- ಬಿಲ್ಲವ ಪ್ರಮುಖರು, ಬಿಜೆಪಿ ಕಾರ್ಯಕರ್ತರು ಸೇರಿದಂತೆ ಹಲವರ ಸೇರ್ಪಡೆ
ಬಿ.ಸಿ.ರೋಡಿನಲ್ಲಿ ನಿರ್ಮಾಣಗೊಂಡ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ನ ನೂತನ ಕಚೇರಿಯನ್ನು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಭಾನುವಾರ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವೆಂಕಟೇಶ್, ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಸಮಕ್ಷಮ ಲೋಕಾರ್ಪಣೆಗೊಳಿಸಿದರು.
ಬಳಿಕ ಬಿ.ಸಿ.ರೋಡಿನ ಗಾಣದಪಡ್ಪು ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಯಿತು.
ಸಭೆಯಲ್ಲಿ ಹಲವು ಬಿಲ್ಲವ ಪ್ರಮುಖರು ಸೇರಿದಂತೆ ಬಿಜೆಪಿ ಮತ್ತು ಇತರ ಪಕ್ಷಗಳ ಕಾರ್ಯಕರ್ತರು ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು. ಅವರಿಗೆ ವೇದಿಕೆಯಲ್ಲಿ ಶಾಲು ಹೊದಿಸಿ ಗುಲಾಬಿ ನೀಡಿ, ಕಾಂಗ್ರೆಸ್ ಧ್ವಜ ನೀಡಿ ಸ್ವಾಗತಿಸಲಾಯಿತು. ಕಾವಳಪಡೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಬಿಜೆಪಿಯ ಮಾಣಿಕ್ಯರಾಜ ಜೈನ್, ಕೊಳ್ನಾಡು ಗ್ರಾಮದ ಬಿಜೆಪಿ ಪ್ರಮುಖ ರಾಜು ಕಾಡುಮಠ, ಪಾಣೆಮಂಗಳೂರಿನ ಸತೀಶ್ ಪೂಜಾರಿ ಮೇಲ್ಕಾರ್, ಗೋಳ್ತಮಜಲಿನ ಜಗದೀಶ ಪೂಜಾರಿ, ಕಿರಣ್ ಪೂಜಾರಿ, ಬಡಬೆಳ್ಳೂರಿನ ಪ್ರದೀಪ್ ಅಜಿಲ, ರವಿ ಪೂಜಾರಿ, ಉಮೇಶ್ ಪೂಜಾರಿ, ಚಂದ್ರಶೇಖರ ಪೂಜಾರಿ, ತಾರಾನಾಥ ಪೂಜಾರಿ, ಸುಂದರ ಪೂಜಾರಿ, ಸತೀಶ ಪೂಜಾರಿ, ಸುದರ್ಶನ ಪೂಜಾರಿ, ತೆಂಕಬೆಳ್ಳೂರಿನ ಪ್ರಭಾಕರ, ಪ್ರೇಮಲತಾ, ಬಿ.ಮೂಡದ ಗಣೇಶ ಪೂಜಾರಿ ಪುಂಜರಕೋಡಿ, ಪೃಥ್ವೀರಾಜ್ ಪೂಜಾರಿ, ಯೋಗೀಶ್ ಪೂಜಾರಿ, ಸಜೀಪಮುನ್ನೂರಿನ ಪ್ರಕಾಶ್ ಮರ್ತಾಜೆ, ವಿಶ್ವನಾಥ ಬಂಗೇರ ಮರ್ತಾಜೆ, ಸುರೇಶ್ ಶಾಂತಿನಗರ, ವಿಶ್ವನಾಥ ಶಾಂತಿನಗರ, ಸರಪಾಡಿ ಪಂಚಾಯತ್ ನ ಪುರುಷೋತ್ತಮ ಬಂಗೇರ ಅಲ್ಲಿಪಾದೆ, ಮಣಿನಾಲ್ಕೂರಿನ ಬಾಲಕೃಷ್ಣ ಪೂಜಾರಿ, ಯೋಗೀಶ್ ಆರ್‍ಮುಡಿ, ಡೀಕಯ್ಯ ಪೂಜಾರಿ ಸರಪಾಡಿ, ಪಿಲಾತಬೆಟ್ಟಿನ ಪ್ರಮೋದ್ ಆಚಾರ್, ಚಂದ್ರ ಪೂಜಾರಿ, ಬಡಗಕಜೆಕಾರಿನ ರಾಕೇಶ್ ಪೂಜಾರಿ ಸಹಿತ ಹಲವರು ಸೇರ್ಪಡೆಗೊಂಡರು. ಸಚಿವ ಬಿ.ರಮಾನಾಥ ರೈ, ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್ ಸಹಿತ ಪ್ರಮುಖರು ಅವರಿಗೆ ಪಕ್ಷದ ಧ್ವಜ ನೀಡಿ ಬರಮಾಡಿಕೊಂಡರು.
ಈ ಸಂದರ್ಭ ಮಾತನಾಡಿದ ಸಚಿವ ಬಿ.ರಮಾನಾಥ ರೈ, ನಾನು ಜಾತಿವಾದಿ, ಮತೀಯವಾದಿ ಎಂದು ಗುರುತಿಸಿಕೊಂಡಿಲ್ಲ. ಜಾತ್ಯತೀತವಾದಿ ಎಂದು ಪ್ರತಿಪಕ್ಷದವರೂ ಹೇಳುತ್ತಾರೆ. ಇದಕ್ಕೆ ನಾನು ಸಂತೋಷಪಡುತ್ತೇನೆ ಎಂದರು.
ಪ್ರತೀ ಚುನಾವಣೆ ಬಂದಾಗಲೂ ಬಿಜೆಪಿ ಅಪಪ್ರಚಾರದ ಕೆಲಸ ಮಾಡುತ್ತದೆ. ಈಗಲೂ ಅದು ನಡೆಯುತ್ತಿದೆ. ಕಾಂಗ್ರೆಸ್ ಕಾರ್ಯಕರ್ತರು ಮನೆಮನೆ ಭೇಟಿ ಕಾರ್ಯಕ್ರಮವನ್ನು ನಿರಂತರ ನಡೆಸಬೇಕು. ಮುಂದಿನ ದಿನಗಳಲ್ಲಿ ನಾನೇ ಬೂತ್ ಮಟ್ಟದಲ್ಲಿ ಕೆಲಸ ಮಾಡುತ್ತೇನೆ ಎಂದರು.
ಬಂಟ್ವಾಳ ವಿಧಾನ ಸಭಾ ಕ್ಷೇತ್ರದಲ್ಲಿ ಗರಿಷ್ಟ ಸಂಖ್ಯೆಯ ಜಿ.ಪಂ. ಸ್ಥಾನಗಳು ಬಂದಿದೆ. ಪುರಸಭೆ, ತಾ.ಪಂ.ಗಳಲ್ಲಿ ಕಾಂಗ್ರೆಸ್ ಆಡಳಿತ ಪಡೆದಿದೆ. ಗ್ರಾ.ಪಂ.ಗಳಲ್ಲಿ ಬಹುತೇಕ ಕಾಂಗ್ರೆಸ್ ಸುಪರ್ದಿಯಲ್ಲಿದೆ.ಇದು ಜನರು ಕಾಂಗ್ರೆಸ್ ಬಗ್ಗೆ ತೋರಿದ ಜಾತ್ಯಾತೀತ ನೆಲೆಯ ಪ್ರೀತಿಯಿಂದ ಆಗಿದೆ ಎಂದರು.
ಕಾಂಗ್ರೆಸ್ ಪಕ್ಷ ಜಾತ್ಯಾತೀತ ಸಿದ್ಧಾಂತಗಳಿಂದ ಬೆಳೆದುಬಂದ ಪಕ್ಷ. ಯಾವುದೇ ಕಾರಣಕ್ಕೂ ಮತೀಯವಾದ ಚಟುವಟಿಕೆಗಳಲ್ಲಿ ಕಾಂಗ್ರೆಸ್ ತೊಡಗಿಸಿಕೊಂಡಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್ ಹೇಳಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಯು.ಬಿ. ವೆಂಕಟೇಶ್, ದ.ಕ.ಜಿಲ್ಲಾ ಕೆಪಿಸಿಸಿ ಉಸ್ತುವಾರಿ ಸವಿತಾ ರಮೇಶ್, ಎಂ.ಎಲ್ .ಮೂರ್ತಿ ಸಭೆಯನ್ನು ಉದ್ದೇಶಿಸಿ ಮಾತನಾಡಿ ಮುಂದಿನ ದಿನಗಳಲ್ಲಿ ಬರುವ ಚುನಾವಣೆಯನ್ನು ಎದುರಿಸಲು ಸಾಕಷ್ಟು ತಯಾರಿಗಳು ಆಗಬೇಕು. ಕಾರ್ಯಕರ್ತರು ಪೂರ್ಣ ಮನಸ್ಸಿನಿಂದ ತೊಡಗಬೇಕು ಎಂದು ಕರೆ ನೀಡಿದರು.
ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷ ಬಿ.ಎಚ್.ಖಾದರ್, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಪಿಯೂಸ್ ಎಲ್. ರೋಡ್ರಿಗಸ್, ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಮಂಜುಳಾ ಮಾಧವ ಮಾವೆ, ಮಮತಾ ಡಿ.ಎಸ್. ಗಟ್ಟಿ, ಬಿ.ಪದ್ಮಶೇಖರ ಜೈನ್, ಎಂ.ಎಸ್.ಮಹಮ್ಮದ್, ಪಕ್ಷ ಪ್ರಮುಖರಾದ ಮಲ್ಲಿಕಾ ಶೆಟ್ಟಿ, ಜಯಂತಿ, ಮಾಯಿಲಪ್ಪ ಸಾಲ್ಯಾನ್, ಪ್ರಶಾಂತ್ ಕುಲಾಲ್, ಚಂದ್ರಹಾಸ ಕರ್ಕೇರ, ಪಿ. ರಾಮಕೃಷ್ಣ ಆಳ್ವ, ಮಹಮ್ಮದ್ ನಂದರಬೆಟ್ಟು, ವೆಂಕಪ್ಪ ಪೂಜಾರಿ, ಬಿ. ಕೆ.ಇದಿನಬ್ಬ, ಸದಾಶಿವ ಬಂಗೇರ, ಪದ್ಮನಾಭ ರೈ, ಚಂದ್ರಶೇಖರ ಪೂಜಾರಿ, ಐಡಾ ಸುರೇಶ್, ಡಿ.ಕೆ.ಶಾಹುಲ್ ಹಮೀದ್, ವಾಸು ಪೂಜಾರಿ, ಮಲ್ಲಿಕಾ ಪಕ್ಕಳ, ರಾಜಶೇಖರ ನಾಯಕ್, ಅಲ್ಬರ್ಟ್ ಮಿನೇಜಸ್, ವಲಯ, ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ಬಾಸ್ ಅಲಿ ಸ್ವಾಗತಿಸಿ, ಬಾಲಕೃಷ್ಣ ಆಳ್ವ ಕೊಡಾಜೆ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
Be the first to comment on "ಕಾಂಗ್ರೆಸ್ ಸಮಾವೇಶದಲ್ಲಿ ಹಲವರ ಸೇರ್ಪಡೆ, ಬೂತ್ ಮಟ್ಟದಲ್ಲಿ ಕಾರ್ಯನಿರ್ವಹಿಸಲು ಕರೆ"