ಮಲ್ಲಿಗೆಪ್ರಿಯ ಬಂಟ್ವಾಳದ ಶ್ರೀ ತಿರುಮಲ ವೆಂಕಟರಮಣ ದೇವಳದಲ್ಲಿ ವೈಕುಂಠ ಏಕಾದಶಿಯ ಪ್ರಯುಕ್ತ ವಿಶೇಷ ಪೂಜೆಗಳು ನಡೆಯಿತು. ಬೆಳಗ್ಗಿನ ಜಾವ 6 ಗಂಟೆಗೆ ವಿಶೇಷ ಅಲಂಕಾರದೊಂದಿಗೆ ಸಪ್ತದ್ವಾರದ ಮೂಲಕ ಭಜಕರಿಗೆ ಶ್ರೀದೇವರ ದಿವ್ಯದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಈ ಪ್ರಯುಕ್ತವಾಗಿ ದೇವಳದ ಹೊರಾಂಗಣ,ಒಳಾಂಗಣದಲ್ಲಿ ವಿಶೇಷವಾಗಿ ಹೂವಿನಿಂದ ಅಲಂಕೃತಗೊಳಿಸಲಾಗಿತ್ತು. ನೂರಾರು ಸಂಖ್ಯೆಯಲ್ಲಿ ಭಗವದ್ಬಕ್ತರು ಅಗಮಿಸಿ ದೇವರ ದರ್ಶನ ಪಡೆದು ಪುನೀತರಾದರು.

ಸಂಜೆ ವೇಳೆ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಬಿಜೆಪಿ ಮುಖಂಡ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು ದೇವಳಕ್ಕೆ ಆಗಮಿಸಿದರು. ಪ್ರಮುಖರಾದ ಎ.ಗೋವಿಂದ ಪ್ರಭು, ಬಿ.ದೇವದಾಸ ಶೆಟ್ಟಿ ಸಹಿತ ಹಲವರು ಈ ಸಂದರ್ಭ ಉಪಸ್ಥಿತರಿದ್ದರು.

Pic: Kartik Studio
Be the first to comment on "ಶ್ರೀ ತಿರುಮಲ ವೆಂಕಟರಮಣ ದೇವಳದಲ್ಲಿ ವೈಕುಂಠ ಏಕಾದಶಿಯ ಪ್ರಯುಕ್ತ ವಿಶೇಷ ಪೂಜೆ"