ಶ್ರೀ ಕೃಷ್ಣಮಂದಿರ, ನವಜ್ಯೋತಿ ಮಿತ್ರ ಮಂಡಳಿ, ಜ್ಯೋತಿ ಮಹಿಳಾ ಮಂಡಳಿ ಅಮ್ಟೂರು ಆಶ್ರಯದಲ್ಲಿ ಶುಕ್ರವಾರ ಡಿ.29ರಂದು ಮಂದಿರ ವಠಾರದಲ್ಲಿ ಶ್ರೀಕೃಷ್ಣ ಮಂದಿರದ 18ನೇ ವಾರ್ಷಿಕೋತ್ಸವ ನಡೆಯಲಿದೆ.
ಜಾಹೀರಾತು
ಮಧ್ಯಾಹ್ನ 11.30ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ರಾಮಕೃಷ್ಣ ಮಠದ ಅಧ್ಯಕ್ಷ ಶ್ರೀ ಸ್ವಾಮಿ ಜಿತಕಾಮಾನಂದ ಭಾಗವಹಿಸುವರು. ಅಧ್ಯಕ್ಷತೆಯನ್ನು ಬಿಜೆಪಿ ಮುಖಂಡರಾದ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು ವಹಿಸುವರು. ಕುಂಟಾರು ರವೀಶ ತಂತ್ರಿ ಧಾರ್ಮಿಕ ಉಪನ್ಯಾಸ ನೀಡುವರು. ಅತಿಥಿಗಳಾಗಿ ಚಿತ್ರನಟಿ ಸ್ವಾತಿ ಬಂಗೇರ ಭಾಗವಹಿಸುವರು. ಬೆಳಗ್ಗೆ ೮ರಿಂದ ಗಣಹೋಮ, ಸಾಮೂಹಿಕ ಸತ್ಯನಾರಾಯಣ ಪೂಜೆ, ಧಾರ್ಮಿಕ ಸಭೆ, ಅನ್ನಸಂತರ್ಪಣೆ, ರಾತ್ರಿ 7ರಿಂದ ಭಜನಾ ಕಾರ್ಯಕ್ರಮ, 9 ಗಂಟೆಗೆ ಕಟೀಲು ಮೇಳದ ಶ್ರೀದೇವಿ ಲಲಿತೋಪಾಖ್ಯಾನ ಯಕ್ಷಗಾನ ನಡೆಯಲಿದೆ ಎಂದು ಮಂದಿರ ಅಧ್ಯಕ್ಷ ಮಹಾಬಲ ಕುಲಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ಶ್ರೀಕೃಷ್ಣ ಮಂದಿರ ಅಮ್ಟೂರು 18ನೇ ವಾರ್ಷಿಕೋತ್ಸವ"