ಡಿಸೆಂಬರ್ 6 ರಂದು ಹೊನ್ನಾವರದ ಕೋಮುಗಲಭೆಯಲ್ಲಿ 18 ವರ್ಷದ ಯುವಕ ಪರೇಶ ಮೇಸ್ತ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ ಎಂದು ಆಪಾದಿಸಿರುವ ಹಿಂದು ಜನಜಾಗೃತಿ ಸಮಿತಿ, ಇದರ ಹಿಂದಿರುವ ಜಾಲವನ್ನು ಪತ್ತೆಹಚ್ಚಿ, ಸಂಬಂಧಿತರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ.
ಮಡಿಕೇರಿಯ ಕುಟ್ಟಪ್ಪ, ಬೆಂಗಳೂರಿನ ರುದ್ರೇಶ್ ಸಹಿತ 20ಕ್ಕೂ ಅಧಿಕ ಹಿಂದು ನಾಯಕರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದ್ದು, ಇದಕ್ಕೆ ಹಿಂದು ವಿರೋಧಿ ಧೋರಣೆ ಕಾರಣವಾಗಿದೆ ಎಂದು ರಾಜ್ಯಪಾಲರಿಗೆ ತಹಶೀಲ್ದಾರ್ ಪುರಂದರ ಹೆಗ್ಡೆ ಮೂಲಕ ಸಲ್ಲಿಸಿದ ಮನವಿಯಲ್ಲಿ ವೇದಿಕೆ ಒತ್ತಾಯಿಸಿದೆ.
ಇದು ವರೆಗೆ ನಡೆದ ಹಿಂದೂ ನಾಯಕರ ಹತ್ಯೆಗೆ ವಿಶೇಷ ತನಿಖಾ ದಳ ನೇಮಿಸಬೇಕು. ತನಿಖೆಗಳ ಆಧಾರದಲ್ಲಿ ಹಿಂದು ನಾಯಕರಿಗೆ ಸೂಕ್ತ ಭದ್ರತೆಯನ್ನು ಪೊಲೀಸ್ ಇಲಾಖೆಯು ಕೂಡಲೇ ಕಲ್ಪಿಸಬೇಕು. ತನಿಖೆಗೆ ಸಂಬಂಧಿಸಿದಂತೆ ಪೊಲೀಸರ ಹೇಳಿಕೆ ಮತ್ತು ಅವರ ಮೇಲೆ ಯಾರು ಒತ್ತಡ ಹೇರುತ್ತಿದ್ದಾರೆ ಎಂಬುವುದರ ಬಗ್ಗೆಯೂ ತನಿಖೆಯಾಗಬೇಕು ಎಂದು ಒತ್ತಾಯಿಸಲಾಯಿತು.
ಮನವಿ ನೀಡುವ ವೇಳೆ ಹಿಂದೂ ಜನಜಾಗೃತಿ ಸಮಿತಿಯ ಕಿರಣ್ ಕುಮಾರ್, ಪ್ರಮುಖರಾದ ಅಶೋಕ್ ಶೆಟ್ಟಿ ಸರಪಾಡಿ, ಗುರುರಾಜ್ ಬಂಟ್ವಾಳ, ಪ್ರದೀಪ್ ಅಜ್ಜಿಬೆಟ್ಟು, ಲೋಹಿತ್ ಪಣೋಲಿಬೈಲು, ದಕ್ಷಣ್ ಮಿತ್ತಮಜಲು, ಗಣೇಶ್ ಕಾರಾಜೆ, ಗಿರೀಶ್ ಸರಪಾಡಿ, ಅಮೃತ್ ಶಾಂತಿನಗರ, ರಾಮ ನಂದಾವರ ಮೊದಲಾದವರು ಉಪಸ್ಥಿತರಿದ್ದರು.
Be the first to comment on "ಹತ್ಯೆಗಳ ಹಿಂದಿನ ಜಾಲ ಪತ್ತೆಹಚ್ಚಲು ಮನವಿ"