ಮನೆಯೊಂದರಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿ ಎಸ್.ಡಿ.ಪಿ.ಐ. ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.
ಫರಂಗಿಪೇಟೆ ರಾಷ್ಟ್ರೀಯ ಹೆದ್ದಾರಿಯ 100 ಮೀ ಅಂತರದಲ್ಲಿರುವ ಮನೆಯೊಂದರಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುವ ಕುರಿತು ಆರೋಪಿಸಿರುವ ಎಸ್.ಡಿ.ಪಿ.ಐ,ಇದರಿಮದ ಸಾರ್ವಜನಿಕರಿಗೆ ನೆಮ್ಮದಿಯ ಜೀವನ ನಡೆಸಲು ಕಷ್ಟವಾಗುತ್ತಿದೆ ಎಂದು ದೂರಿದೆ. ಸೋಶಿಯಲ್ ಡೆಮೋಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ರಾಜ್ಯ ಕಾರ್ಯದರ್ಶಿ ರಿಯಾಝ್ ಪರಂಗಿಪೇಟೆ ಯವರ ನೇತ್ರತ್ವದಲ್ಲಿ ನಿಯೋಗವೂ ಜಿಲ್ಲಾದಿಕಾರಿಗೆ ದೂರು ನೀಡಲಾಯಿತು. ನಿಯೋಗದಲ್ಲಿ ಪುದು ಗ್ರಾಮ ಪಂಚಾಯತ್ ಸದಸ್ಯ ಸುಲೈಮಾನ್ ಉಸ್ತಾದ್, ಮಾಜಿ ಸದಸ್ಯ ಇಕ್ಬಾಲ್ ಅಮೆಮಾರ್, ಎಸ್.ಡಿ ಪಿ.ಐ ಪುದು ಗ್ರಾಮ ಸಮಿತಿ ಕಾರ್ಯದರ್ಶಿ ಶಾಫಿ ಅಮೆಮಾರ್, ಸಿದ್ದೀಕ್ ಸುಜೀರ್, ಶೆರೀಫ್ ಅಮೆಮಾರ್ ಉಪಸ್ಥಿತರಿದ್ದರು
Be the first to comment on "ಮದ್ಯ ಅಕ್ರಮ ಮಾರಾಟ: ಎಸ್.ಡಿ.ಪಿ.ಐ.ಯಿಂದ ಡಿಸಿಗೆ ದೂರು"