ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ 2017-20ರ ಸಾಲಿಗೆ ನೂತನ ಪದಾಧಿಕಾರಿಗಳನ್ನು ಮಂಗಳವಾರ ಆಯ್ಕೆ ಮಾಡಲಾಗಿದ್ದು, ಉದಯವಾಣಿ ಹಿರಿಯ ಉಪಸಂಪಾದಕ ಗಣೇಶ ಪ್ರಸಾದ ಪಾಂಡೇಲು ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಗೊಂಡರು.
ಗಣೇಶ ಪ್ರಸಾದ ಪಾಂಡೇಲು ಅವರು ಬಂಟ್ವಾಳ ತಾಲೂಕಿನ ಕುಳ ಗ್ರಾಮದ ಪಾಂಡೇಲಿನವರಾಗಿದ್ದು, ವಿವಿಧ ಪತ್ರಿಕೆಗಳ ಸಿನಿಮಾ, ಕ್ರೀಡಾ, ಮ್ಯಾಗಸೀನ್, ಕ್ರೈಮ್ ಸಹಿತ ಹಲವು ವಿಭಾಗಗಳಲ್ಲಿ ಬೆಂಗಳೂರು, ಮಂಗಳೂರು, ಶಿವಮೊಗ್ಗ ಮತ್ತು ಮಣಿಪಾಲಗಳಲ್ಲಿ ಸುದೀರ್ಘ ಅವಧಿಯಲ್ಲಿ ಪತ್ರಕರ್ತರಾಗಿ ಕಾರ್ಯನಿರ್ವಹಿಸಿದ್ದಾರೆ. ಕವಿಯೂ ಆಗಿರುವ ಅವರ ಕವನಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು, ಪುಸ್ತಕರೂಪವಾಗಿಯೂ ಹೊರಬಂದಿವೆ. ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಚುಟುಕು ಸಾಹಿತ್ಯ ಜಿಲ್ಲಾ ಸಮ್ಮೇಳನವನ್ನು ಯಶಸ್ವಿಯಾಗಿ ಅವರು ಸಂಘಟಿಸಿದ್ದರು. ಸದ್ಯ ಮಣಿಪಾಲ ಉದಯವಾಣಿಯ ಸಂಪಾದಕೀಯ ವಿಭಾಗದಲ್ಲಿ ಹಿರಿಯ ಉಪಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಉಡುಪಿ ಬ್ರಹ್ಮಗಿರಿಯ ಐಎಂಎ ಭವನದಲ್ಲಿ ನಡೆದ ಮಹಾಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.
ಪದಾಧಿಕಾರಿಗಳ ವಿವರ ಹೀಗಿದೆ.
ಅದ್ಯಕ್ಷ: ಗಣೇಶ ಪ್ರಸಾದ ಪಾಂಡೇಲು., ಪ್ರದಾನ ಕಾರ್ಯದರ್ಶಿ: ಸಂತೋಷ್ ಸರಳೇಬೆಟ್ಟು., ಉಪಾದ್ಯಕ್ಷರು: ಉದಯ್ ಕುಮಾರ್ ಹೆಬ್ರಿ., ಕೆ.ಸಿ ರಾಜೇಶ್., ರಾಮಚಂದ್ರ ಆಚಾರ್., ಕೋಶಾಧಿಕಾರಿ: ದಿವಾಕರ್ ಹಿರಿಯಡಕ, ಜತೆ ಕಾರ್ಯದರ್ಶಿ: ಮೈಕಲ್ ರೋಡ್ರಿಗಸ್., ಕ್ರೀಡಾ ಕಾರ್ಯದರ್ಶಿ: ಹರೀಶ್ ಪಾಲೆಚಾರು., ಕಾರ್ಯಕಾರಿ ಸಮಿತಿ ಸದಸ್ಯರು -ನವ್ಯಜ್ಯೋತಿ ನೆಲ್ಲಿಜೆ, ಪುಂಡಲೀಕ ಮರಾಠೆ., ಗಣೇಶ್ ಸಾಯಿಬರ್ ಕಟ್ಟೆ., ಎಸ್. ಎ. ಮಝರ್, ನಾಗರಾಜ ರಾಯಪ್ಪನಮಠ., ಕೆ.ಎಂ ಖಲೀಲ್., ಮೊಹಮ್ಮದ್ ಶರೀಫ಼್.
ನಿಕಟಪೂರ್ವ ಅಧ್ಯಕ್ಷ ಜಯಕರ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಚುನಾವಣಾಧಿಕಾರಿಯಾಗಿ ಎ.ದಿನೇಶ್ ಕಿಣಿ, ಸಹಾಯಕ ಚುನಾವಣಾಧಿಕಾರಿಯಾಗಿ ಶಶಿಧರ ಮಾಸ್ತಬೈಲುಜ ಸಹಕರಿಸಿದರು. ರಾಜೇಶ್ ಶೆಟ್ಟಿ ಲೆಕ್ಕಪತ್ರ ಮಂಡಿಸಿದರು. ಕೆ.ಸಿ.ರಾಜೇಶ್ ಕಾರ್ಯಕ್ರಮ ನಿರೂಪಿಸಿದರು.
Be the first to comment on "ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಗಣೇಶ ಪ್ರಸಾದ ಪಾಂಡೇಲು ಆಯ್ಕೆ"