- ಡಾ.ಎ.ಜಿ.ರವಿಶಂಕರ್
ಹಾಲಿನ ಕೆನೆ ಎಂದಾಕ್ಷಣ ಗಟ್ಟಿ ಮೊಸರಿನ ತಯಾರಿ ಅಥವಾ ಬೆಣ್ಣೆ ನೆನಪಾಗುತ್ತದೆ. ಆದರೆ ಇದು ಕೆನೆ ರೂಪದಲ್ಲಿರುವಾಗಲೇ ಹಲವಾರು ಸಂದರ್ಭಗಳಲ್ಲಿ ಔಷಧವಾಗಿ ಉಪಯೋಗಕ್ಕೆ ಬರುತ್ತದೆ.
- ಹಾಲಿನ ಕೆನೆಯು ಅತ್ಯಂತ ಸತ್ವಭರಿತವಾಗಿದ್ದು ವ್ಯಕ್ತಿಯ ಶರೀರ ತೂಕವನ್ನು ಹೆಚ್ಚಿಸಲು ಸಹಕರಿಸುತ್ತದೆ. ಪ್ರತಿನಿತ್ಯ ಹಾಲಿನ ಕೆನೆಗೆ ಸಕ್ಕರೆ ಸೇರಿಸಿ ತಿಂದರೆ ಶರೀರದ ತೂಕ ಅಧಿಕವಾಗುತ್ತದೆ.
- ಹಾಲಿನ ಕೆನೆಯನ್ನು ಸಕ್ಕರೆಯೊಂದಿಗೆ ಸೇರಿಸಿ ತಿಂದರೆ ಎಸಿಡಿತಿ ಸಮಸ್ಯೆಯು ಕಡಿಮೆಯಾಗುತ್ತದೆ.
- ಹಾಲಿನ ಕೆನೆಯನ್ನು ಸೇವಿಸುವುದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ.
- ಹಾಲಿನ ಕೆನೆಯನ್ನು ಸೇವಿಸುವುದರಿಂದ ದೇಹದ ಮೂಳೆಗಳು ದ್ರುಢವಾಗುತ್ತವೆ.
- ಕಣ್ಣಿನ ರೆಪ್ಪೆಯಲ್ಲಿ ಕುರ ಮೂಡಿದಾಗ ಹಾಲಿನ ಕೆನೆಯನ್ನು ಕುರದ ಮೇಲೆ ಲೇಪಿಸಬೇಕು
- ಸುಟ್ಟ ಗಾಯದ ಮೇಲೆ ಹಾಲಿನ ಕೆನೆಯನ್ನು ಲೇಪಿಸಿದರೆ ಉರಿ ಹಾಗು ನೋವು ಕಡಿಮೆಯಾಗುತ್ತದೆ.
- ಚೇಳು,ಶತಪದಿ ಇತ್ಯಾದಿಗಳು ಕಡಿದಾಗ ಹಾಲಿನೆ ಕೆನೆಗೆ ಸ್ವಲ್ಪ ಅರಸಿನ ಪುಡಿ ಸೇರಿಸಿ ಲೇಪಿಸಬೇಕು.
- ಮುಖದ ಮೇಲೆ ಹಾಲಿನ ಕೆನೆಯನ್ನು ಲೇಪಿಸುವುದರಿಂದ ಮುಖದ ಕಾಂತಿ ಅಧಿಕವಾಗುತ್ತದೆ.
- ಒಣ ಚರ್ಮದಿಂದಾಗಿ ಚರ್ಮವು ಬಿರಿಯುವುದಿದ್ದರೆ ಹಾಲಿನ ಕೆನೆಯನ್ನು ಮೈ ಮೇಲೆ ಹಚ್ಚಬೇಕು.
- ಬಿಸಿ ಪದಾರ್ಥಗಳನ್ನು ಕುಡಿದು ತುಟಿ ಸುಟ್ಟರೆ ,ತುಟಿಯಮೇಲೆ ಹಾಲಿನ ಕೆನೆಯನ್ನು ಹಚ್ಚಬೇಕು.
Be the first to comment on "ಎಸಿಡಿಟಿಯೇ? ಸಕ್ಕರೆ ಸೇರಿಸಿ ಹಾಲಿನ ಕೆನೆ ಸೇವಿಸಿ"