ಗಾನ ಲೋಕದಲ್ಲಿ ಅಮೋಘ ವರ್ಷಧಾರೆ ಹರಿಸುತ್ತಿರುವ ಕನ್ನಡದ ಪೋರ ಅಮೋಘವರ್ಷ

ಬರಹ : ರಜನಿ ಭಟ್ ,ಅಬುಧಾಬಿ

 
ಕಲಾಸರಸ್ವತಿ ಎಲ್ಲರಿಗೂ ಒಲಿಯುವುದಿಲ್ಲ ಎಂಬ ಮಾತೊಂದಿದೆಅದಕ್ಕೆ ಅವಿರತ ಪರಿಶ್ರಮ,ಅವಿರಳ ಪ್ರೋತ್ಸಾಹಅರ್ಪಣಾಭಾವ ಅಂದರೆ ತನ್ನನ್ನುತಾನೇ ಕಲೆಗೆ ಅರ್ಪಿಸುವುದುಇತ್ಯಾದಿಗಳನ್ನು ಮೈಗೂಡಿಸಿಕೊಂಡು ಮುಂದುವರಿದರೆ ಕಲಾ ಮಾತೆ ಆಶೀರ್ವದಿಸಿ ಮುನ್ನಡೆಸುವುದರಲ್ಲಿ ಎರಡುಮಾತಿಲ್ಲಕೆಲವರಿಗೆ ಕಲೆಯು ಹುಟ್ಟಿನಲ್ಲಿಯೇ ಬಂದರೆ ಇನ್ನು ಕೆಲವರಿಗೆ ದೈವದತ್ತವಾಗಿರುತ್ತದೆಇನ್ನು ಕೆಲವರು ಏಕಲವ್ಯನಂತೆ ಕಂಡು ಕೇಳಿಇತರರ ಸಹಾಯ ಇಲ್ಲದೆ ಕಲಿತು ಮುಂದೆ ವರುವವರು ಇದ್ದಾರೆ.
 
 ಅಮ್ಮ ತೊಟ್ಟಿಲ್ಲಲ್ಲಿ ಮಗನನ್ನು ಮಲಗಿಸಿ  ಜೋಗುಳ ಹಾಡುತ್ತಿದ್ದಾರೆ.  ವಾತಾಪಿ ಗಣಪತಿಂಭಜೇಆಡಿಸಿದಳು ಯಶೋದೆ … ಅಮ್ಮನೂ  ಗಾಯಕಿಯೇಅಮ್ಮನ ಇಷ್ಟವಾದ ಹಾಡದು.ಎರಡೂವರೆ ವರುಷದ  ಮಗು ಸಹ ಅಮ್ಮನ ತುಟಿಯನ್ನೇ ನೋಡುತ್ತಾ ತೊದಲು ನುಡಿಯಲ್ಲಿಹಾಡಿಯೇ ಬಿಟ್ಟಿತು   ” ಮುಲಿ  ಪಲ ಪಾಪೂಜಿತಂ ” … ಅದೇ ಹಾಡು ಆಗಬೇಕು ನಿದ್ದೆ ಬರಬೇಕಿದ್ದರೆ
 
ಇದು ದುಬೈಯಲ್ಲಿ ಉದ್ಯೋಗದಲ್ಲಿರುವ ಬಂಟ್ವಾಳ ತಾಲೂಕಿನ ತೆಂಕಬೈಲಿನವರಾದ  ಪ್ರಸನ್ನ ಟಿಎನ್ ಹಾಗು ಸ್ಮಿತಾ ಭಟ್ ದಂಪತಿಗಳ ಮಗನಾದ10 ವರುಷ ವಯಸ್ಸಿನ  ಪೋರನು ಎಳೆವೆಯಲ್ಲಿಆಗತಾನೆ ಪುಟ್ಟ ಪುಟ್ಟ ಹೆಜ್ಜೆಗಳನ್ನಿಟ್ಟು ನಡೆಯುವ ಸಮಯದಲ್ಲಿ,ಆಟಿಕೆಗಳಲ್ಲಿ ಆಡುವಪ್ರಾಯದಲ್ಲಿ ಹೇಗೆ ಹಾಡಿನ  ಬಗ್ಗೆ ಒಲವು ತೋರಿಸುತ್ತಿದ್ದಹಾಡನ್ನು ಎಷ್ಟು ಇಷ್ಟ ಪಡುತ್ತಿದ್ದ ಎಂದು ಇದರಲ್ಲಿ ಅರ್ಥಮಾಡಿಕೊಳ್ಳಬಹುದುಇವನು ಬೇರಾರು ಅಲ್ಲ.  ಗಾಯನ ಲೋಕಕ್ಕೆ ಹೆಜ್ಜೆ ಇಟ್ಟಿರುವ ದುಬೈಯ ಡಿಪಿಎಸ್ ಶಾಲೆಯಲ್ಲಿ ಈಗ ನಾಲ್ಕನೆಯ ತರಗತಿಯಲ್ಲಿ ಕಲಿಯುತ್ತಿರುವಕನ್ನಡದ ಕುಡಿ   ಅಮೋಘ ವರ್ಷ ಭಟ್.
 
 ಇಷ್ಟು ಸಣ್ಣ ವಯಸ್ಸಿನಲ್ಲಿ ಅಮೋಘ ಮಾಡಿದ ಸಾಧನೆಗಳು ಹಲವು.   ಭಾರತದಂತೆ ಇಲ್ಲಿ ಅವಕಾಶಗಳು ಹೆಚ್ಚುಇರದಿದ್ದರೂ , ಸಿಗುವಅವಕಾಶಗಳನ್ನು ಕೈ ಬಿಡವುದಿಲ್ಲಇವನು ಹಾಡಿದ ಪ್ರ ಮುಖ ವೇದಿಕೆಗಳು “ಗ್ಲೋಬಲ್ ವಿಲೇಜ್  2017″, ಶಾರ್ಜಾ ಕರ್ನಾಟಕ ಸಂಘ,ಓಶಿಯಾನ್ಕಿಡ್ಸ್ ಎಕ್ಸ್ಟ್ರಾವೆಗಾನ್ಸ 2017, ದುಬೈ ಕನ್ನಡಿಗರು ಕಾರ್ಯಕ್ರಮದ ವೇದಿಕೆ ,ಧ್ವನಿ  ಪ್ರತಿಷ್ಠಾನದ “2ನೆಯ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ, 20ನೆಯ ಹವ್ಯಕ ವಾರ್ಷಿಕೋತ್ಸವ , ಬಸವ ಜಯಂತಿ ಕಾರ್ಯಕ್ರಮದೇವಾಡಿಗ ಸಂಘದ ಕದಂ ವಾರ್ಷಿಕ ಸಮ್ಮೇಳನ ಇತ್ಯಾದಿಗಳಲ್ಲಿ ತನ್ನ ಕಂಠ ಸಿರಿಯನ್ನುಪ್ರದರ್ಶಿಸಿ ಪಾತ್ರನಾಗಿ ತನ್ನ ಹೆಸರಿಗೆ ಒಂದು ತನ್ನದೇ ಆದ ಮೊಹರನ್ನು ಮೂಡಿಸಿದ್ದಾನೆ.
 
ಅಮೋಘನ ಸಂದರ್ಶನವು ಯುಎಇ  ಪ್ರಮುಖ ಬಾನುಲಿ ಕೇಂದ್ರ  ಸ್ಪೈಸ್ 105.4ನಲ್ಲಿ ಪ್ರಸಾರವಾಗಿದೆಅವನು ಹಾಡಿದ ಹಾಡುಗಳುಅಮೇರಿಕಾದ ಚಾನೆಲ್ 1170  ಎಮ್  ” ಹಾಡು  ಸಂತೋಷಕ್ಕೆ” ಹಾಗು “ಗಾಥಾ ರಹೇ ಮೇರಾ ದಿಲ್ ” ಕಾರ್ಯಕ್ರಮಗಳಲ್ಲಿ ಪ್ರಸಾರವಾಗಿದೆ.
 
ಮಂಗಳೂರಿನ ಪಾವಂಜೆ ದೇವಸ್ಥಾನದಲ್ಲಿ ಹಾಗು ಪುತ್ತೂರಿನಲ್ಲಿ ಕಚೇರಿಗಳನ್ನು ಕೊಟ್ಟಿರುವುದು ಇವನ ಹಾಡಿನ ರೆಕ್ಕೆಗೆ ಮೂಡಿದ ಗರಿಗಳು .
 
ಅಮೋಘನ ಸಾಧನೆಯ ಹಿಂದೆ ಅಮ್ಮ ಸ್ಮಿತಾ ಮತ್ತು ಅಪ್ಪ ಪ್ರಸನ್ನ ಅವರ ಪರಿಶ್ರಮವಿದ್ದೇ ಇದೆಅಮ್ಮನೇ ಮೊದಲ ಗುರು ಎಂಬ ನಾಣ್ನುಡಿ ಗೆಸರಿತೂಗುವಂತೆ ತನ್ನ  5ನೆಯ ವರ್ಷದಲ್ಲಿ ಅಮ್ಮನ ಬಳಿ ಕರ್ನಾಟಕ ಸಂಗೀತವನ್ನು ಅಭ್ಯಾಸ ಮಾಡತೊಡಗಿದನುಸದ್ಯ ಶ್ರೀಮತಿ  ದಿವ್ಯ ಶಂಕರಿಇವರ ಬಳಿ ಅಭ್ಯಸಿಸುತ್ತಿದ್ದಾನೆ.  ಇದರ ಜತೆ ಮೃದಂಗ ಹಾಗು ಗಿಟಾರ್ ಸಹ ಕಲಿಯುತ್ತಿದ್ದಾನೆ.
 
ಸ್ಮಿತಾ ಭಟ್ ತಮ್ಮ ಮಗನ ಬಗ್ಗೆ ಹೆಮ್ಮೆಯಿಂದ ಹೇಳುತ್ತಾರೆ” ಅವನು ಚಿಕ್ಕವನಿದ್ದಾಗ  ತಿರುಗುತ್ತಿರುವ ಫ್ಯಾನ್  ಲಯಕ್ಕೆ ಹಾಡುತ್ತಿದ್ದನಲ್ಲಿಯನೀರಿನಲ್ಲಿ ಹೊರಹೊಮ್ಮುವ ಶ್ರುತಿಗೆ ಹಾಡುತ್ತಿದ್ದಆಗಲೇ ನಾನು ಇದನ್ನೇ ಗಮನಿಸಿದ್ದೆನಾಲ್ಕನೇ ವರುಷದಲ್ಲಿ ಬಾಲಿವುಡ್ ಡ್ಯಾನ್ಸ್ ಕ್ಲಾಸಿಗೆಸೇರಿಸಬೇಕೆಂದು ಹೋದಾಗ ಪಿಯಾನೋ ಬಾರಿಸುತ್ತಿದ್ದ ಮಕ್ಕಳನ್ನು ಕಂಡು ಅದಕ್ಕೆ ಸೇರಬೇಕಾಗಿ ಬಂತುಇದೆಲ್ಲ ಅಮೋಘನ ಗಾಯನದಲ್ಲಿದ್ದಉತ್ಸಾಹ ತೋರಿಸುತ್ತದೆ” .ಒಂದೆರಡು ಕಡೆ ತನ್ನ ಪ್ರೀತಿಯ ತಂಗಿ 5 ವರುಷದ ನಿನಾದಳ ಜತೆ ವೇದಿಕೆ ಹಂಚಿಕೊ0ಡು ಹಾಡಿದ್ದು ತನ್ನ ಅಮೂಲ್ಯಕ್ಷಣವೆಂದು ನೆನಪಿಸುವ ಅಮೋಘನಿಗೆ ಅರ್ಜಿತ್ ಸಿಂಗ್ ಹಾಗು ಶ್ರೇಯ ಘೋಷಾಲ್  ಅಂದರೆ ತುಂಬಾ ಇಷ್ಟ.
 
 ಯು   ಮಟ್ಟದ ಕನ್ನಡ ಚಿತ್ರ ಗೀತೆಗಳ ಸ್ಪರ್ಧೆಯಲ್ಲಿ 2ನೆಯ ಪ್ರಶಸ್ತಿ “ವಾಫಿ ಸೂಪರ್ಸ್ಟಾರ್ 2017″ ಹಾಗು “ಕಿಡ್ಸ್ ಸೂಪರ್ ಸ್ಟಾರ್  2017″ ಸ್ಪರ್ಧೆಗಳಲ್ಲಿ ಸೆಮಿಫೈನಲಿಸ್ಟ್  ಆಗಿ ಹೊರಬಂದರೆಇಲ್ಲಿಯ ಬಿಗ್  ಡಿಇ  ಗ್ರೂಪ್ ನಡೆಸಿದ ಅಮೆಜಿಂಗ್ ಸ್ಟಾರ್ಸ್ 2015  ಮಕ್ಕಳ ಅಭೂತಕೌಶಲ ಗುರುತಿಸುವ ಕಾರ್ಯಕ್ರಮದಲ್ಲಿ “ಎಮರ್ಜಿಂಗ್ ಟ್ಯಾಲೆಂಟ್ ” ಬಿರುದನ್ನ ತನ್ನ ಮುಡಿಗಾಗಿಸಿಕೊಂಡಿದ್ದಾನೆ. 2015   ಮಕ್ಕಳ ರೆಡ್ ಇಂಟರ್ನ್ಯಾಷನಲ್  ಯುವಜನೋತ್ಸವದಲ್ಲಿ ಹಿಂದಿ ಸುಗಮ ಸಂಗೀತದಲ್ಲಿ ಎರಡೆನೇ ಸ್ಥಾನಇಂಟರ್  ಜೂನಿಯರ್ ಶಾಲೆಯ ಉತ್ಸವ “ಕ್ರಿಸಾಲೀಸ್ “ನಲ್ಲಿತನ್ನ ಶಾಲೆಯ ವಿಜೇತ ಕ್ಯಾಡೆನ್ಸ್ –ಕೊರಲ್ ತಂಡದ ಸದಸ್ಯನಾಗಿದ್ದಾನೆ. ಕಲಿಯುವಿಕೆಯಲ್ಲೂ ಮುಂದಿರುವ ಅಮೋಘವರ್ಷನು ಶಾಲೆಯಲ್ಲಿ   ನೀಡಲ್ಪಡುವ ಬಿರುದು “ಟಿಎಂಎಸ್ ಐಡಲ್ ” “ಸಾಂಗ್ ಬರ್ಡ್” ಹಾಗುಗೋಲ್ಡನ್  ಸ್ಟಾರ್ ಪ್ರಶಸ್ತಿಗಳನ್ನು ಪಡೆದಿರುತ್ತಾನೆ.
 
ವಾಯ್ಸ್ ಆಫ್ ಯು . “:
ಎಸ್ ಕೆ ಎಸ್ ಇವೆಂಟ್ಸ್ ಅರ್ಪಿಸುವ ಯು    ಮಟ್ಟದ  ಗಾಯನ ಸ್ಪರ್ಧೆಯಲ್ಲಿ” ವಾಯ್ಸ್ ಆಫ್ ಯುಎಈ ” ಕಾರ್ಯಕ್ರಮದ 200 ಕ್ಕೂ ಅಧಿಕಮಂದಿ ಸ್ಪರ್ಧಾಳುಗಳಿದ್ದ ಇದರಲ್ಲಿ ಅಮೋಘನು ಫೈನಲ್ ತಲಪಿರುವ ಏಕಮಾತ್ರ ಕನ್ನಡಕುವರಅದಕ್ಕಾಗಿ ಭರಪೂರ ಸಿಧ್ಧತೆಯಲ್ಲಿರುವ ಈತನುಡಿಸೇಂಬರ್ 1 2017ರಂದು ಶೇಖ್ ರಶೀದ್ ಆಡಿಟೋರಿಯಂ ನಲ್ಲಿ  ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾನೆಕಾರ್ಯಕ್ರಮಕ್ಕೆ ಪ್ರಸಿದ್ಧ ಹಿಂದಿಗಾಯಕಿ ದಕ್ಷಿಣ ಭಾರತದ ಗಾನ ಕೋಗಿಲೆ ಕವಿತಾ ಕೃಷ್ಣಮೂರ್ತಿಯವರ ಉಪಸ್ಥಿತಿ ಇನ್ನು ಮೆರುಗು ಕೊಡಲಿದೆಕವಿತಾಜಿ ಯವರೊಂದಿಗೆ  ತೀರ್ಪುಗಾರರಾಗಿ ಮಿಥುನ್ ಡೇ ಸರ್ಕಾರ್ ಅವರು ಜತೆ ಸೇರಲಿದ್ದಾರೆ. . ಅಂದು ಅಮೋಘ ಹಾಡುಗಳ ವರ್ಷಧಾರೆಯನ್ನೇ ಸುರಿಸಲಿರುವಅಮೋಘವರ್ಷ ಕಾರ್ಯಕ್ರಮದಲ್ಲಿ ಜಯಶಾಲಿಯಾಗಿ ಬರಲಿ ಎಂದು ನಾವೆಲ್ಲರೂ ಆಶಿಸುವ ನಮ್ಮೆಲ್ಲರ ಹರಕೆ ಹಾರೈಕೆಗಳು  ಪುಟ್ಟ ಪೋರನಮೇಲಿರಲಿ.
 
 ಭರವಸೆಯ ಗಾಯಕನಾಗಿರುವ ಈತನು  ಮುಂಬರುವ ದಿನಗಳಲ್ಲಿ ಪ್ರಬುದ್ಧ ಗಾಯಕನಾಗಿ ಹೊರಬರಲಿ ಹಾಗು ನಮ್ಮೆಲ್ಲರ ಮನದಲ್ಲಿ  ಅವನಹಾಡುಗಳು  ಮನೆ ಮಾಡಲಿ..

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಗಾನ ಲೋಕದಲ್ಲಿ ಅಮೋಘ ವರ್ಷಧಾರೆ ಹರಿಸುತ್ತಿರುವ ಕನ್ನಡದ ಪೋರ ಅಮೋಘವರ್ಷ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*