ವಿಟ್ಲ ಕಾಶೀಮಠ ಎಂಬಲ್ಲಿ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಕನ್ಯಾನ ನಿವಾಸಿ ನಿವೃತ್ತ ಯೋಧ ಕನ್ಯಾನ ಪೊಯ್ಯಗದ್ದೆ ನಿವಾಸಿ ವೆಂಕಪ್ಪ ಮೂಲ್ಯ ಮೃತಪಟ್ಟಿದ್ದಾರೆ.
ಜಾಹೀರಾತು
ಅವರು ಬೆಳಗ್ಗೆ ಸುಮಾರು 10ರ ವೇಳೆ ಉಕ್ಕುಡ ಕಡೆಯಿಂದ ವಿಟ್ಲ ಕಡೆಗೆ ಬೈಕಿನಲ್ಲಿ ತೆರಳುತ್ತಿದ್ದಾಗ ಘಟನೆ ನಡೆದಿದ್ದು, ಶರೀರದ ಮೇಲೆ ಲಾರಿ ಹಾದು ಹೋಗಿದೆ.
ಬುಧವಾರ ಬೆಳಗ್ಗೆ ಸಂಭವಿಸಿದ ಅಪಘಾತ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಸಂಚಾರ ಅಸ್ತವಸ್ತಗೊಂಡಿತು. ಸ್ಥಳಕ್ಕೆ ಸಮಯಕ್ಕೆ ಸರಿಯಾಗಿ ಪೊಲೀಸರು ಬಾರದ ಕಾರಣ, ಪರಿಸ್ಥಿತಿಯನ್ನು ಹತೋಟಿಗೆ ತರಲು ಜನರು ಹರಸಾಹಸಪಟ್ಟರು. ವೆಂಕಪ್ಪ ಮೂಲ್ಯ ಅವರು ನಿವೃತ್ತ ಯೋಧ.ನಾಲ್ಕು ವರ್ಷಗಳ ಹಿಂದೆ ಸೇವಾ ನಿವೃತ್ತಿ ಹೊಂದಿದ್ದರು. ಇನ್ ಫೋಸಿಸ್ ನಲ್ಲಿ ಸೆಕ್ಯೂರಿಟಿ ವಿಭಾಗದಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದ ವೆಂಕಪ್ಪ ಅವರ ಪತ್ನಿ ಬಾಯಾರು ಶಾಲೆಯಲ್ಲಿ ಟೀಚರ್ ಆಗಿದ್ದಾರೆ.
ಅಪಘಾತ ನಡೆದ ತಕ್ಷಣ ಅವರನ್ನು ಕೂಡಲೇ ಫ್ರೆಂಡ್ಸ್ ವಿಟ್ಲ ಸಹಾಯದಿಂದ ಆಂಬುಲೆನ್ಸ್ ನಲ್ಲಿ ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಅಲ್ಲಿ ಮೃತಪಟ್ಟಿರುವುದಾಗಿ ಘೋಷಿಸಲಾಯಿತು.
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.
Be the first to commenton "ವಿಟ್ಲದಲ್ಲಿ ಲಾರಿ ಡಿಕ್ಕಿ, ನಿವೃತ್ತ ಯೋಧ ಮೃತ್ಯು"
Be the first to comment on "ವಿಟ್ಲದಲ್ಲಿ ಲಾರಿ ಡಿಕ್ಕಿ, ನಿವೃತ್ತ ಯೋಧ ಮೃತ್ಯು"