ದುಬೈಯಲ್ಲಿ ಕನ್ನಡ ಕಲರವ : ಆದ್ಧೂರಿ ಕರ್ನಾಟಕ ರಾಜ್ಯೋತ್ಸವ

  • ವರದಿ :  ಅನುಪಮಾ ಮಹೇಶ್ , ಮಸ್ಕತ್

www.bantwalnews.com


 
ಮೊನ್ನೆ ನವೆಂಬರ್ 24 ಶುಕ್ರವಾರದಂದು ಜೆಎಸ್ಎಸ್ಅಂತರಾಷ್ಟ್ರೀಯ ಶಾಲೆಯ ಸಭಾಂಗಣದಲ್ಲಿ ಕನ್ನಡಿಗರು ದುಬೈ ಬಳಗದ ವತಿಯಿಂದ 62ನೆಕನ್ನಡ ರಾಜ್ಯೋತ್ಸವವನ್ನು ದುಬೈಯಲ್ಲಿಅದ್ದೂರಿಯಾಗಿ ಆಚರಿಸಲಾಯಿತುಪ್ರೇಕ್ಷಕರಿಂದ ತುಂಬಿ ತುಳುಕುತಿದ್ದ ಸಭಾಂಗಣದಲ್ಲಿ ಕನ್ನಡದ ಕಲರವಕೇಳಲು ಕಿವಿಗೆ ಇಂಪಾಗಿತ್ತು.
 
ಸುಂದರವಾಗಿ ಅಲಂಕೃತಗೊಂಡ ವೇದಿಕೆಯಲ್ಲಿ ನೆರೆದ  ಯು     ದೇಶದ “ಕನ್ಡಡ ಕಣ್ಮಣಿ ”  ಪದ್ಮಶ್ರಿ ಪ್ರಶಸ್ತಿ ಪುರಸ್ಕೃತರಾದ ಶ್ರೀಯುತ ಬಿಅರ್ ಶೆಟ್ಟಿಕನ್ನಡಿಗರು ದುಬೈ ಸದಸ್ಯರು ಹಾಗು ತಾಯಿನಾಡಿನಿಂದ  ಕಾರ್ಯಕ್ರಮಕ್ಕಾಗಿ ಆಗಮಿಸಿದ ವಿಶೇಷ ಅತಿಥಿಗಳು ದೀಪ ಬೆಳಗುವಕಾರ್ಯಕ್ರಮದಿಂದ ಶುಭಾರಂಭಗೊಂಡಿತು.
 
ನಂತರ ಮಾಧವಿ ಪ್ರಸಾದ ಅವರ ತಂಡದ ಮಕ್ಕಳು ನಮ್ಮ ಕನ್ನಡ ನಾಡು ನುಡಿಯ ಹಿರಿಮೆಯನ್ನು ಸಾರುವ ನಮ್ಮ ಸುಂದರ ನಾಡ ಗೀತೆ ಜಯಭಾರತ ಜನನಿಯ ತನುಜಾತೆಯನ್ನು ಸುಂದರವಾಗಿ ಪ್ರಸ್ತುತ ಪಡಿಸಿದರುಗೌರವ ಸೂಚಕವಾಗಿ ಹಾಗು ಅಭಿಮಾನಪೂರ್ವಕ ವಾಗಿ ಮಕ್ಕಳದನಿಯೊಂದಿಗೆ ಪ್ರೇಕ್ಷಕರೂ ದನಿಗೂಡಿಸಿದರು.
 
  ಕಾರ್ಯಕ್ರಮಕ್ಕೆ ನಮ್ಮ ತಾಯಿನಾಡಿನಿಂದ ಗೌರವವಾನ್ವಿತ ಅತಿಥಿಗಳಾಗಿ ಶ್ರೀ ಎಸ್ ಎಸ್ ಗಣೇಶ್ ಹಾಗು ರೇಖಾ ದಂಪತಿಗಳುತಮ್ಮ ನಟನಾಚಾತುರ್ಯದಿಂದ ಬಾಲ್ಯದಿಂದಲೆ ಪ್ರಸಿದ್ದಿ ಯಾದ ಜನಪ್ರಿಯ ನಟ ಮಾಸ್ಟರ್  ಆನಂದ್ ಅಷ್ಟೆ ಅಲ್ಲದೆ ಹಿಂದುಸ್ತಾನಿ  ಶಾಸ್ತ್ರೀಯ  ಗಾಯನದಸಾಮ್ರಾಜ್ಞಿ ಶ್ರೀಮತಿ ಗಂಗೂಬಾಯಿ ಹಾನಗಲ್ ಅವರ ಮೊಮ್ಮಗಳಾದ ಶ್ರೀಮತಿ ವೀಣಾ ಹಾನಗಲ್ ,ಹಾಗು ಬೆಂಗಳೂರಿನಿಂದ ಮಧುರ ಕಂಠದ  ಖ್ಯಾತಗಾಯಕಿ ಶ್ರೀಮತಿ  ಅಂಜಲಿ ಹಳಿಯಾಳ್ ಅಗಮಿಸಿದ್ದರು.
 
ಅರಬ್ ಸಂಯುಕ್ತ ಸಂಸ್ತಾನದಲ್ಲಿ ಕನ್ನಡದ ಶೇಖ್ ಎಂದೆ  ಪರಿಚಿತರಾದ  ಪ್ರಸಿದ್ದ ಉದ್ಯಮಿ ಶ್ರೀ ಬಿಅರ್ ಶೆಟ್ಟಿ ಅವರು ಸಭೆಯನ್ನು ಉದ್ದೇಶಿಸಿಮಾತನಾಡಿದರುಹೊರ ದೇಶದಲ್ಲಿ ಕನ್ನಡಿಗರಿಗಾಗಿ ಅನೇಕ ಸಮಾಜಮುಖಿ ಕಾರ್ಯ ಗಳಲ್ಲಿ ತೊಡಗಿ ಕೊಂಡಿರುವ ಹಾಗು  ಮೂಲಕ ಅನೇಕಗೌರವ ಪ್ರಶಸ್ತಿಗಳಿಗೆ ಭಾಜನರಾಗಿರುವ ಶ್ರಿ ಬಿಅರ್ ಶೆಟ್ಟಿಯವರು ಕನ್ನಡಿಗರು ಮುಂಚೂಣಿಯಲ್ಲಿದ್ದು ಹೊರ ದೇಶದಲ್ಲಿ ಒಗ್ಗಟ್ಟಿನಿಂದ ಒಂದಾಗಿಬಾಳಬೇಕು‌. ಕನ್ನಡದ ಭಾಷಾಭಿಮಾನ  ಮುಂದಿನ ಪೀಳಿಗೆಯವರು ಉಳಿಸಿಕೊಳ್ಳುವಂತಾಗಬೇಕು ಎಂಬ ಕಳಕಳಿಯ ಕರೆ ನೀಡಿದರು.
 
ಈಗಾಗಲೆ ಅನೇಕ ಪ್ರಶಸ್ತಿಗಳ ಜೊತೆಗೆ ಭಾರತದ ಸರ್ಕಾರದಿಂದ ಪದ್ಮಶ್ರಿ ಪ್ರಶಸ್ತಿಗೂ ಭಾಜನರಾಗಿರುವ ಶ್ರಿಯುತ ಬಿಅರ್ ಶೆಟ್ಟಿಯವರಿಗೆ ಕನ್ನಡಿಗರುದುಬೈ ಬಳಗವು “ಯು    ಕರ್ನಾಟಕದ ಕಣ್ಮಣಿ ” ಎಂಬ ಬಿರುದನ್ನು ನೀಡಿ ಸನ್ಮಾನಿಸಲಾಯಿತು.
 
 ದಾವಣಗೆರೆ ಜಿಲ್ಲೆಯಲ್ಲಿ ಸಾಮಾಜಿಕ ಹಾಗು ಸಾಂಸ್ಕೃತಿಕ ಕಾರ್ಯಕಲಾಪದಲ್ಲಿ ತೊಡಗಿಸಿಕೊಂಡ,ನೆಚ್ಚಿನ ಜನನಾಯಕ ಮಾಜಿ ಸಂಸದರಾದ  ಶ್ರೀಶ್ಯಾಮನೂರು ಶಿವಶಂಕರಪ್ಪ ಅವರಿಗೆ “ಕರ್ನಾಟಕ  ರತ್ನ ” ಎಂಬ ಪ್ರಶಸ್ತಿಯನ್ನು ನೀಡಲಾಯಿತುಆದರೆ   ಕಾರಣಾಂತರಗಳಿಂದ ಅವರು  ಸಮಾರಂಭದಲ್ಲಿ ಉಪಸ್ಥಿತರಾಗದ ಕಾರಣ ಅವರ ದ್ವಿತೀಯ ಪುತ್ರ ಶ್ರೀ ಎಸ್ಎಸ್ ಗಣೇಶ್ ಹಾಗು ರೇಖಾ ದಂಪತಿಗಳು ಅವರ ಪರವಾಗಿ  ಗೌರವಾನ್ವಿತಪ್ರಶಸ್ತಿ ಯನ್ನು ಸ್ವೀಕರಿಸಿದರು.
 
ಶ್ರೀ ಎಸ್ಎಸ್ ಗಣೇಶ್  ಸಭೆಯನ್ನು ಉದ್ದೇಶಿಸಿ  ಕನ್ನಡ ನಾಡು ನುಡಿಗಳ ಹಿರಿಮೆಯ ಕುರಿತು ಮಾತನಾಡುತ್ತಾ ರಾಜ್ಯೋತ್ಸವ . ನಿತ್ಯೋತ್ಸವವಾಗಬೇಕು  ,ಅನಿವಾಸಿ ಕನ್ನಡಿಗರು ದುಬೈ ಶ್ರೀಮಂತ ದೇಶದಲ್ಲೂ ಕನ್ನಡದ ತೇರನ್ನು ಎಳೆಯಬೇಕು ಎಂದು ಪ್ರೇಕ್ಷಕರಲ್ಲಿ ಉತ್ಸಾಹತುಂಬುವ ಸಂದೇಶ ನೀಡಿದರು‌.
 
ತಾಯಿನಾಡಿನಿಂದ ಆಗಮಿಸಿದ ಜನಪ್ರಿಯ ಚಲನ ಚಿತ್ರನಟಬಾಲ ಕಲಾವಿದನಾಗಿಯೂ ಜನ ಮನ್ನಣೆ ಗಳಿಸಿದ ಮಾಸ್ಟರ್ ಅನಂದ್ ಅವರಿಗೆ ಅವರಕಲಾ ಸೇವೆಯನ್ನು ಗುರುತಿಸಿ ಕನ್ನಡಿಗರು ದುಬೈ  ಬಳಗದ ವತಿಯಂದ “ಸಕಲ ವಲ್ಲಭ ಮಾಸ್ಟರ್ ಆನಂದ್ ” ಗೌರವ ಪ್ರಶಸ್ತಿ ಯನ್ನು ನೀಡಿಪುರಸ್ಕರಿಸಿತು.
 
 ಗೌರವಾನ್ವಿತ  ಗಣ್ಯರಿಗೆ  ಶಾಲು ಹೊದೆಸಿ ಹೂಗುಚ್ಛಗಳುಸ್ಮರಣಿಕೆಗಳು , ಕರ್ನಾಟಕದ ಹೆಮ್ಮೆಯ ಕಿರೀಟವಾದ ಮೈಸೂರು ಪೇಟವನ್ನು ತೊಡಿಸಿಅದ್ದೂರಿಯಾಗಿ ಸನ್ಮಾನಿಸಲಾಯಿತು.
 
ದುಬೈ ನಗರದ ವಿವಿಧ ಕಲಾ ಕೇಂದ್ರದ ಮಕ್ಕಳಿಂದ ಸಮೂಹ ಗಾಯನವಾದ್ಯ ಗೋಷ್ಠಿ ಹಾಗು ಮನ ಸೂರೆಗೊಳ್ಳುವ ಸಾಮೂಹಿಕ ನೃತ್ಯಪ್ರದರ್ಶನಗಳು ಪ್ರೇಕ್ಷರನ್ನು ಮನರಂಜಿಸುತ್ತಾ ಅಮೋಘವಾದ ರಸಸಂಜೆಗೆ  ಕಾರ್ಯಕ್ರಮ ಸಾಕ್ಷಿಯಾಯಿತು.
 
 ಹುಬ್ಬಳ್ಳಿ ಯಿಂದ ಆಗಮಿಸಿದ ಶಾಸ್ರೀಯ ಸಂಗೀತ ಗಾಯಕಿ ಶ್ರೀಮತಿ ವೀಣಾ ಹಾನಗಲ್ ಅವರಿಂದ ಸುಶ್ರಾವ್ಯ ಶಾಸ್ತ್ರೀಯ ಗಾಯನವಿತ್ತುಸಭಾ  ಕಾರ್ಯಕ್ರಮದಲ್ಲಿ ಶ್ರೀಮತಿ ವೀಣಾ ಹಾನಗಲ್ ಅವರ ಗಾಯನ ಸಿ.ಡಿ.ಯನ್ನು ಮಾಸ್ಟರ್  ಆನಂದಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ ರಾದ  ಶ್ರೀ ಸರ್ವೋತ್ತಮ್ ಶೆಟ್ಟಿ  ಯವರ ಹಸ್ತದಿಂದ  ಬಿಡುಗಡೆ ಮಾಡಲಾಯಿತು‌.
 
ತಾಯಿನಾಡಿನಿಂದ ಎಷ್ಟೆ ದೂರದಲ್ಲಿದ್ದರೂ ಚಿಣ್ಣರ ತಂಡ ಕನ್ನಡದ ಕಂಪನ್ನು ಸಾರುವ  ಸಾಂಸ್ಕೃತಿಕ ನೃತ್ಯ ರೂಪಕಗಳನ್ನು ಅಮೋಘವಾಗಿಪ್ರದರ್ಶಿಸಿ ಪ್ರೇಕ್ಷಕರ ಮೈ ರೋಮಾಂಚನಗೊಳಿಸಿದವುಮಾಸ್ಟರ್ ಆನಂದ್ ಅವರು ಹಾಸ್ಯ ಚಟಾಕಿಗಳನ್ನು ಹೇಳುತ್ತಾ ಪ್ರೇಕ್ಷಕರನ್ನು ನಗೆಗಡಲಿನಲ್ಲಿತೇಲಿಸಿದರು‌.ಅಷ್ಟೆ ಅಲ್ಲದೆ ಜನಪ್ರಿಯ ಕನ್ನಡ ಚಲನಚಿತ್ರ ಗಳ ಹಾಡಿನ ತುಣುಕುಗಳಿಗೆ ಅಮೋಘವಾಗಿ ಅಭಿನಯಿಸಿ ಜನರನ್ನು ರಂಜಿಸಿದರು.
 
ಬೆಂಗಳೂರಿನಿಂದ  ಆಗಮಿಸಿದ ಖ್ಯಾತ ಗಾಯಕಿ ಶ್ರೀಮತಿ ಅಂಜಲಿ ಹಳಿಯಾಳ್ ಅವರು ಮೊದಲಿಗೆ  ಹಾಡಿದ ಹಳೆ ಜನಪ್ರಿಯ ಗೀತೆ  ಘಿಲ್ ಘಿಲ್ಘಿಲಕ್ ಕಾಲು ಗೆಜ್ಜೆ ಝಣಕ್  ಹಾಡು ಸಭಿಕರನ್ನು ಕುಣಿಯುವಂತೆ ಮಾಡಿತು‌. ಸಭಿಕರು ಅಮೋಘವಾದ  ಮೆಚ್ಚುಗೆಯ ಕರತಾಡನ ಹೊಡೆಯತ್ತಾ    ಅವರ  ಸುಶ್ರಾವ್ಯ ಹಾಡುಗಳನ್ನು ಆನಂದಿಸಿದರು‌.  ದುಬೈ ನಲ್ಲಿ ನೆಲೆಸಿರವ ಸುಮಧುರ ಕಂಠದ ಗಾಯಕ ಉದಯ್ ನಂಜಪ್ಪ ಹಾಗು ಅಂಜಲಿಹಳಿಯಾಳ್ ಅವರ ದನಿಯಲ್ಲಿ ಇಂಪಾಗಿ ಮೂಡಿ ಬಂದ ಎಲ್ಲಲ್ಲಿ ನೋಡಲಿ..ಮೆಲ್ಲುಸಿರೆ ಸವಿಗಾನ ಹಾಗು ಒಂದೆ ಒಂದು ಆಸೆಯೂ ” ಹಾಡುಗಳುನಿಜಕ್ಕೂ ಪ್ರೇಕ್ಷಕರನ್ನು  ಸುಂದರವಾದ ಸಂಗೀತ ಲೋಕಕ್ಕೆ ಕರೆದೊಯ್ದು  ತೇಲಾಡುವಂತೆ ಮಾಡಿತು‌.
 
 ಶ್ರೀಮತಿ ಅಂಜಲಿ ಹಳಿಯಾಳ್ ಹಾಗು ಉದಯ್ ನಂಜಪ್ಪ ಅವರಿಗೆ ಕನ್ನಡಿಗರು ದುಬೈ ಸದಸ್ಯರು ,ಮಾಸ್ಟರ್ ಆನಂದ್ ಹಾಗು ಅಬುಧಾಬಿ ಕರ್ನಾಟಕಸಂಘದ ಅದ್ಯಕ್ಷರಾದ ಸರ್ವೊತ್ತಮ್ ಶಟ್ಟಿ ಅವರು ಸ್ಮರಣಿಕೆಗಳನ್ನು  ನೀಡಿ ಗೌರವಿಸಿತು.
 
 ಸುಂದರವಾದ ಸಾಂಸೃತಿಕ ಕಲಾಮೇಳಕ್ಕೆ ಜೆ ಎಸ್ ಎಸ್ ಶಾಲೆಯ  ಸಭಾಂಗಣ ಸಾಕ್ಷಿಯಾಯಿತು‌. ಕಾರ್ಯಕ್ರಮಕ್ಕೆ ತೆರೆ ಎಳೆಯುತ್ತಾ  ಕನ್ನಡಿಗರುದುಬೈ ಸಂಘದ ಮಾಜಿ ಅಧ್ಯಕ್ಷ ಮಲ್ಲಿ ಕಾರ್ಜುನ್ ಗೌಡ ಅವರು ವಂದನಾರ್ಪಣೆ ಮಾಡಿದರು.
 
ಮರುದಿನ  , ನವಂಬರ್  25  ಶನಿವಾರದಂದು ಸಮಾರಂಭವನ್ನು ಯಶಸ್ವಿಯಾಗಿಸಲು ತೆರೆಮರೆಯಲ್ಲಿ ದುಡಿದ ಕಾರ್ಯಕರ್ತರನ್ನು ಅಭಿನಂದಿಸಲುಹಾಗು ಬೆಂಗಳೂರಿನಿಂದ ಆಗಮಿಸಿದ ಕಲಾವಿದರಿಗೆ ಕೃತಜ್ಞತೆಗಳನ್ನು ಸಲ್ಲಿಸುವ ನಿಟ್ಟಿನಲ್ಲಿ ದುಬೈ ನಲ್ಲಿರುವ  ಪೊರ್ಚುನ್ ಗ್ರಾಂಡ್  ಹೋಟಲ್  ನಲ್ಲಿ  ಸಂತೋಷಕೂಟವನ್ನು ಏರ್ಪಡಿಸಿದ್ದರು ‌‌.ಇದರಲ್ಲಿ ಅಂಜಲಿ ಹಳಿಯಾಳ್  ಹಾಗು ಉದಯ್ ನಂಜಪ್ಪ ಅವರ ಇಂಪಾದ ಗಾನ ಲಹರಿ ಮತ್ತೆನೆರೆದ ಜನರನ್ನು ಮೋಡಿ ಗೊಳಿಸುವಲ್ಲಿ ಯಶಸ್ವಿಯಾಯಿತು ‌‌‌.  ದುಬೈನಲ್ಲಿ ನೆಲೆಸಿರುವ ಅನಿವಾಸಿ ಕನ್ನಡತಿ ,ಹಾಸ್ಯ ಲೇಖಕಿ ಹಾಗು ಬರಹಗಾರ್ತಿಆರತಿ ಘಟಿಕಾರ್ ಅವರು ಹಾಸ್ಯದ ಚುಟುಕು ವಾಚನ ವನ್ನು ಮಾಡಿ ಸಭಿಕರನ್ನು ರಂಜಿಸಿದರು‌.  ದುಬೈನ ಕಾರ್ಯಕಾರಿ ಮಂಡಲಿ ಹಾಗುಕುಟುಂಬದವರು  ಸಂತೋಷ ಕೂಟದಲ್ಲಿ ಭಾಗವಹಿಸಿದ್ದರು ‌.
 

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ದುಬೈಯಲ್ಲಿ ಕನ್ನಡ ಕಲರವ : ಆದ್ಧೂರಿ ಕರ್ನಾಟಕ ರಾಜ್ಯೋತ್ಸವ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*