ಬಿ.ಸಿ.ರೋಡಿನ ಸಂಚಯಗಿರಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದಲ್ಲಿ ಭಾನುವಾರ ಸಂಜೆ ವಚನದೀಪ್ತಿ ಕಾರ್ಯಕ್ರಮ ನಡೆಯಿತು.
ಈ ಸಂದರ್ಭ ವಚನ ಸಾಹಿತ್ಯದಲ್ಲಿ ಸಾಮಾಜಿಕ ಕಳಕಳಿ ವಿಷಯದ ಬಗ್ಗೆ ಮಂಗಳಗಂಗೋತ್ರಿಯ ಎಸ್.ವಿ.ಪಿ. ಕನ್ನಡ ಅಧ್ಯಯನ ವಿಭಾಗದ ಸಹಪ್ರಾಧ್ಯಾಪಕ ಡಾ. ನಾಗಪ್ಪ ಗೌಡ ಆರ್, ವಚನಗಳಲ್ಲಿ ನುಡಿ ನಡೆ ವಿಷಯದಲ್ಲಿ ಉಜಿರೆ ಎಸ್.ಡಿ.ಎಂ. ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ರಾಜಶೇಖರ ಹಳೆಮನೆ ಮಾತನಾಡಿದರು.
ಮಂಗಳೂರು ವಿವಿಯ ಡಾ.ಎಚ್.ಎಂ.ಸೋಮಶೇಖರಪ್ಪ ಅಧ್ಯಕ್ಷತೆ ವಹಿಸಿದ್ದರು. ಆಯೋಜಕರಾದ ಡಾ. ವಿಜಯನಾರಾಯಣ ತೋಳ್ಪಾಡಿ ಮತ್ತು ಡಾ.ವೀಣಾ ತೋಳ್ಪಾಡಿ, ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಡಾ. ತುಕಾರಾಮ ಪೂಜಾರಿ, ಡಾ. ಆಶಾಲತಾ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು. ರಾಧೇಶ ತೋಳ್ಪಾಡಿ ಕಾರ್ಯಕ್ರಮ ನಿರೂಪಿಸಿದರು. ಮಹಾಬಲೇಶ್ವರ ಹೆಬ್ಬಾರ ವಂದಿಸಿದರು.
ಬಳಿಕ ವಚನ ಗಾಯನ ನಡೆಯಿತು. ಸಹನಾ, ಮೇಘನಾ ಗಾಯನ, ಕೀಬೋರ್ಡ್ ನಲ್ಲಿ ಭಾಸ್ಕರ ರಾವ್, ಕೊಳಲಿನಲ್ಲಿ ವರುಣ್ ಎಂ.ರಾವ್ ಮತ್ತು ತಬಲಾದಲ್ಲಿ ನಚಿಕೇತ ದಾಮ್ಲೆ ಸಹಕರಿಸಿದರು.
Be the first to comment on "ಬಿ.ಸಿ.ರೋಡ್ ಸಂಚಯಗಿರಿಯಲ್ಲಿ ವಚನದೀಪ್ತಿ"