- Dr. A.G.Ravishankar
ಕಾಯಿ ಹಾಲು ದನದ ಹಾಲಿನಂತೆಯೇ ಸತ್ವಭಾರಿತವಾಗಿದ್ದು ಹಲವಾರು ಸಂದರ್ಭಗಳಲ್ಲಿ ಹಾಲಿನಂತೆಯೇ ಕಾರ್ಯ ನಿರ್ವಹಿಸುತ್ತದೆ ಮತ್ತು ಹಾಲಿನ ಬದಲಿಗೆ ಇದನ್ನೇ ಬಳಸುತ್ತಾರೆ.
- ಕಾಯಿ ಹಾಲು ಜೀರ್ಣ ಕ್ರಿಯೆಯನ್ನು ಉತ್ತೇಜಿಸುತ್ತದೆ ಮತ್ತು ಮಲ ಬದ್ಧತೆಯನ್ನು ನಿವಾರಿಸುತ್ತದೆ.
- ಇದು ಶರೀರದಲ್ಲಿ ರಕ್ತ ಪರಿಚಲನೆಯನ್ನು ಉತ್ತೆಜಿಸುವುದರ ಮೂಲಕ ಶರೀರದ ಅಂಗಗಳಿಗೆ ಪೋಷಕಾಂಶಗಳನ್ನು ಒದಗಿಸಲು ಸಹಕರಿಸುತ್ತದೆ ಮತ್ತು ಶಕ್ತಿಯನ್ನು ನೀಡುತ್ತದೆ .
- ಹೊಟ್ಟೆ ಹಾಗು ಕರುಳಿನಲ್ಲಿ ಹುಣ್ಣು ಆಗಿದ್ದರೆ ಕಾಯಿ ಹಾಲು ಕುಡಿಯುವುದರಿಂದ ಹುಣ್ಣು ವಾಸಿಯಾಗುತ್ತದೆ.
- ಕಾಯಿ ಹಾಲಿನಲ್ಲಿ ಯಥೇಷ್ಟವಾಗಿ ಕ್ಯಾಲ್ಸಿಯಂ ಹಾಗು ಫಾಸ್ಫರಸ್ ಇರುವುದರಿಂದ ಇದು ಮೂಳೆಗಳನ್ನು ದೃಢಗೊಳಿಸುತ್ತದೆ.
- ಕಾಯಿ ಹಾಲು ಶರೀರದಲ್ಲಿ ರಕ್ತ ಹೀನತೆಯನ್ನು ಕಡಿಮೆಗೊಳಿಸುತ್ತದೆ.
- ಕಾಯಿ ಹಾಲಿನಲ್ಲಿರುವ ಲಾರಿಕ್ ಆಮ್ಲವು ಹೃದಯಕ್ಕೆ ಬಲವನ್ನು ನೀಡುತ್ತದೆ ಮತ್ತು ಕೆಟ್ಟ ಕೊಬ್ಬನ್ನು ನಿವಾಆರಿಸುತ್ತದೆ.
- ಇದು ಶರೀರದಲ್ಲಿ ಇನ್ಸುಲಿನ್ ಉತ್ಪತ್ತಿಯನ್ನು ಪ್ರಚೋದಿಸುವುದರ ಮೂಲಕ ಮಧುಮೇಹವನ್ನು ಹತೋಟಿಯಲ್ಲಿಡಲು ಸಹಕರಿಸುತ್ತದೆ.
- ಕಾಯಿ ಹಾಲು ವಯಸ್ಕರಲ್ಲಿ ಕಾಣುವ ಮರೆಗುಳಿ ರೋಗವನ್ನು ಹತೋಟಿಗೆ ತರಲು ಸಹಕರಿಸುತ್ತದೆ.
- ಕಾಯಿ ಹಾಲನ್ನು ಶರೀರದ ಮೇಲೆ ಹಚ್ಚುವುದರಿಂದ ಮತ್ತು ಕುಡಿಯುವುದರಿಂದ ಚರ್ಮಕ್ಕೆ ಸ್ನಿಗ್ಧತೆ ಮತ್ತು ಕಾಂತಿಯನ್ನು ನೀಡುತ್ತದೆ.
- ಕಾಯಿಹಾಲು ಹಚ್ಚುವುದರಿಂದ ಸೂರ್ಯನ ಕಿರಣದಿಂದಾದ ಚರ್ಮದ ತೊಂದರೆಯನ್ನು (sun burn ) ಹೋಗಲಾಡಿಸಬಹುದು.
- ಕಾಯಿಹಾಲನ್ನು ತಲೆಗೆ ಹಚ್ಚುವುದರಿಂದ ಕೂದಲು ನುಣುಪಾಗುತ್ತದೆ ಮತ್ತು ಕಾಂತಿಯುತವಾಗುತ್ತದೆ.
- ಮುಖದಲ್ಲಿ ಮೊಡವೆಗಳು ಮೂಡಿದಾಗ ಕಾಯಿಹಾಳನ್ನು ಮುಖಕ್ಕೆ ಹಚ್ಚಬೇಕು.
- ಕಾಯಿಹಾಲು ಪುರುಷರಲ್ಲಿ ಇರುವ ಪೌರುಷ ಗ್ರಂಥಿಯ ಆರೋಗ್ಯವನ್ನು ಕಾಪಾಡುತ್ತದೆ ಮತ್ತು ಅದರ ಕ್ಯಾನ್ಸರ್ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.
- ಸಂಧುಗಳು ಶಬ್ದ ಭರಿತವಾಗಿ ನೋವಿನಿಂದ ಕೂಡಿದ್ದರೆ ಕಾಯಿಹಾಲನ್ನು ಹಚ್ಚಬೇಕು. ಇದರಿಂದ ನೋವು ಕಡಿಮೆಯಾಗುತ್ತದೆ.
- ನಿಯಮಿತವಾಗಿ ಕಾಯಿಹಾಲನ್ನು ಕುಡಿಯುವುದರಿಂದ ವ್ಯಾಧಿ ಕ್ಷಮತ್ವವು ಅಧಿಕವಾಗುತ್ತದೆ.
Be the first to comment on "ಸತ್ವಭರಿತ ತೆಂಗಿನಕಾಯಿ ಹಾಲು"