- ಡಾ.ಎ.ಜಿ.ರವಿಶಂಕರ್
ಕಾಯಿ ತುರಿದ ನಂತರ ಗೆರಟೆಯನ್ನು ಬಿಸಾಡುತ್ತೇವೆ ಅಥವಾ ಒಲೆಗೆ ಹಾಕುತ್ತೇವೆ. ಆದರೆ ನಿತ್ಯ ಜೀವನದಲ್ಲಿ ಹಲವಾರು ಸಂದರ್ಭಗಳಲ್ಲಿ ಗೆರಟೆಯು ಸದುಪಯೋಗವಾಗುತ್ತದೆ.
- ಗೆರಟೆಯು ಘನವಾದ ವಸ್ತುಗಳು ಸುಲಭವಾಗಿ ಬೇಯಲು ಸಹಕರಿಸುತ್ತದೆ .ಮಾಂಸ,ಮುಂಡಿ ,ಕೇನೆ ಇತ್ಯಾದಿಗಳನ್ನು ಬೇಯಿಸುವಾಗೆ ಇವುಗಳ ಜೊತೆ 2 ರಿಂದ 3 ತುಂಡು ಗೆರಟೆ ಸೇರಿಸಿದರೆ ಅವುಗಳು ಚೆನ್ನಾಗಿ ಬೆಂದು ಸುಲಭವಾಗಿ ಶರೀರದಲ್ಲಿ ಜೀರ್ಣವಾಗಲು ಸಹಕರಿಸುತ್ತದೆ.
- ಗೆರಟೆ ಸಾರು – ಗೆರಟೆಯನ್ನು ಹಾಕಿ ಸಾರು ಮಾಡಿ ಉಪಯೋಗಿಸುವುದರಿಂದ ಜಠರದ ಅಗ್ನಿಬಲ ಮತ್ತು ಜೀರ್ಣಶಕ್ತಿ ಅಧಿಕವಾಗುತ್ತದೆ.
- ಗೆರಟೆಯನ್ನು ಪುಡಿಮಾಡಿ ನೀರಿಗೆ ಹಾಕಿ ಕಷಾಯಮಾಡಿ ಬಾಯಿ ಮುಕ್ಕಳಿಸುವುದರಿಂದ ಹಲ್ಲು ನೋವು ಹಾಗು ನಾಲಿಗೆಯಲ್ಲಿನ ಅಗ್ರ ಕಡಿಮೆಯಾಗುತ್ತದೆ.
- ಗೆರಟೆಯ ಕಷಾಯದಲ್ಲಿ ಬಾಯಿ ಮುಕ್ಕಲಿಸುವುದರಿಂದ ಅಥವಾ ಗೆರಟೆಯ ಮಸಿಯನ್ನು ಜೇನುತುಪ್ಪದಲ್ಲಿ ಕಲಸಿ ಹಚ್ಚುವುದರಿಂದ ವಸಡಿನ ರಕ್ತಸ್ರಾವ ಕಡಿಮೆಯಾಗುತ್ತದೆ.
- ಗೆರಟೆಯನ್ನು ಉರಿಸಿ ಮಸಿಮಾಡಿ ತೆಂಗಿನ ಎಣ್ಣೆಯಲ್ಲಿ ಕಲಸಿ ಹಚ್ಚುವುದರಿಂದ ತುರಿಕೆ ಇರುವ ಕಜ್ಜಿ (Eczema) ಸೋರಿಯಸಿಸ್ ಇತ್ಯಾದಿ ಚರ್ಮ ರೋಗಗಳು ಕಡಿಮೆಯಾಗುತ್ತದೆ.
- ಗೆರಟೆಯ ಮಸಿಯನ್ನು ತೆಂಗಿನ ಎಣ್ಣೆಯಲ್ಲಿ ಕಲಸಿ ಬಿಸಿಮಾಡಿ ಕುರದ ಮೇಲೆ ಹಚ್ಚಿದರೆ ಕುರ ಬೇಗನೆ ಸೊರುತ್ತದೆ.
- ಗೆರಟೆಯ ಮಸಿಯನ್ನು ತೆಂಗಿನ ಎಣ್ಣೆಯಲ್ಲಿ ಕಲಸಿ ಹುಣ್ಣಿನ ಮೇಲೆ ಹಚ್ಚುವುದರಿಂದ ಹುಣ್ಣು ಶುದ್ಧವಾಗಿ ಬೇಗನೆ ವಾಸಿಯಾಗುತ್ತದೆ.
- ಗೆರಟೆಯ ಮಸಿಯನ್ನು ತೆಂಗಿನ ಎಣ್ಣೆ ಅಥವಾ ಸಾಸಿವೆ ಎಣ್ಣೆಯಲ್ಲಿ ಕಲಸಿ ಹಚ್ಚುವುದರಿಂದ ಚರ್ಮದ ಮೇಲಿನ ಸಿಬ್ಬವು ಕಡಿಮೆಯಾಗುತ್ತದೆ.
- ಗೆರಟೆಯನ್ನು ಶ್ರೀಗಂಧದಂತೆ ನೀರಿನಲ್ಲಿ ತೇದು ಮುಖಕ್ಕೆ ಹಚ್ಚುವುದರಿಂದ ಮೊಡವೆಗಳು ವಾಸಿಯಾಗುತ್ತವೆ.
- ಗೆರಟೆಯನ್ನು ನೀರಿಗೆ ಹಾಕಿ ಕುದಿಸಿ ತಲೆಗೆ ಸ್ನಾನ ಮಾಡುವುದರಿಂದ ತಲೆ ಹೊಟ್ಟು ನಿವಾರಣೆಯಾಗುತ್ತದೆ.
Be the first to comment on "ತೆಂಗಿನ ಗೆರಟೆ ಬಿಸಾಡುವ ಮುನ್ನ…"