ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಇದರ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ವತಿಯಿಂದ ನಗದು ಅನಾಣ್ಯೀಕರಣದ ವಿಫಲತೆಯ ಬಗ್ಗೆ ಉತ್ತರದಾಹಿತ್ವ ದಿನ ಹಾಗೂ ಕೇಂದ್ರ ಸರಕಾರದ ಜನವಿರೋಧಿ ಧೋರಣೆ ವಿರುದ್ಧ ಬಿ.ಸಿ.ರೋಡ್ ಕೈಕಂಬ ಜಂಕ್ಷನ್ ಬಳಿ ಪ್ರತಿಭಟನೆ ನಡೆಯಿತು.
ಪ್ರತಿಭಟನಕಾರರನ್ನು ಉದ್ದೇಶಿಸಿ ಎಸ್ಡಿಪಿಐ ಬಂಟ್ವಾಳ ಕ್ಷೇತ್ರಾಧ್ಯಕ್ಷ ಶಾಹುಲ್ ಎಸ್.ಎಚ್. ಮಾತನಾಡಿ, ನೋಟ್ ಬ್ಯಾನ್ ಆಗಿ ಒಂದು ವರ್ಷವಾಯಿತು. ನಿಮ್ಮ ಅಚ್ಚೇ ಎಲ್ಲಿ? ಎಂದು ಪ್ರಶ್ನಿಸಿದರು, ಪ್ರತಿಭನಟನೆಯಲ್ಲಿ ಬಂಟ್ವಾಳ ಪುರಸಭಾ ಸದಸ್ಯ ಮುನೀಶ್ ಅಲಿ, ಎಸ್ಡಿಪಿಐ ಸದಸ್ಯ ಅಕ್ಬರ್ ಅಲಿ ಮಾತನಾಡಿದರು.
ಈ ಸಂದರ್ಭ ಎಸ್ಡಿಪಿಐ ಮುಖಂಡರಾದ ಯೂಸುಫ್ ಆಲಡ್ಕ, ಯಾಕೂಬ್ ಮದ್ದಾ ಉಪಸ್ಥಿತರಿದ್ದರು. ಮಲಿಕ್ ಕೊಳಕೆ ಸ್ವಾಗತಿಸಿ, ನಿರೂಪಿಸಿದರು.
Be the first to comment on "ನೋಟ್ ಬ್ಯಾನ್ : ಎಸ್ಡಿಪಿಐ ಪ್ರತಿಭಟನೆ"