ಶ್ರೀರಾಮಚಂದ್ರಾಪುರ ಮಠದ ಅಂಗ ಸಂಸ್ಥೆಯಾದ ಕಲ್ಲಡ್ಕ ಗೇರುಕಟ್ಟೆ ಶ್ರೀ ಉಮಾಶಿವ ಕ್ಷೇತ್ರದಲ್ಲಿ ನಡೆದ ಧರ್ಮಸಭೆಯಲ್ಲಿ ಮುಕ್ತಿಧಾಮ ನಿರ್ಮಾಣದ ಕುರಿತಾದ ವಿಜ್ಞಾಪನೆ ಪತ್ರವನ್ನು ಶ್ರೀರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಬಿಡುಗಡೆಗೊಳಿಸಿದರು.
ನಿಟ್ಟೆ ವಿದ್ಯಾ ಸಂಸ್ಥೆಯ ಚೇರ್‌ಮೆನ್ ವಿನಯ ಹೆಗ್ಡೆ, ಮಾಜಿ ಶಾಸಕರಾದ ಎ.ರುಕ್ಮಯ್ಯ ಪೂಜಾರಿ, ಕೆ.ಪದ್ಮನಾಭ ಕೊಟ್ಟಾರಿ, ಶುಭ ಬೀಡಿ ಮಾಲಕ ಸೇಸಪ್ಪ ಕೋಟ್ಯಾನ್ ಪಚ್ಚಿನಡ್ಕ, ಮಹಾಮಂಡಲದ ಪ್ರಧಾನ ಕಾರ್ಯದರ್ಶಿ ಹರಿಪ್ರಸಾದ್ ಪೆರಿಯಾಪ್ಪು, ಮುಷ್ಟಿಭಿಕ್ಷೆ ಪ್ರಧಾನ ಮಲ್ಲಿಕಾ ಜಿ.ಭಟ್, ಮಂಗಳೂರು ಹವ್ಯಕ ಮಂಡಲದ ಅಧ್ಯಕ್ಷ ಸೇರಾಜೆ ಸುಬ್ರಹ್ಮಣ್ಯ ಭಟ್, ಉಪಾಧ್ಯಕ್ಷ ಗಣೇಶ್‌ಮೋಹನ ಕಾಶಿಮಠ, ಪ್ರಧಾನ ಕಾರ್ಯದರ್ಶಿ ನಾಗರಾಜ ಭಟ್ ಪೆದಮಲೆ, ಸೇವಾ ಸಮಿತಿ ಗೌರವಾಧ್ಯಕ್ಷ ಸಿ.ವಿ.ಗೋಪಾಲಕೃಷ್ಣ, ಉಪಾಧ್ಯಕ್ಷೆ ಆಲಂಗಾರು ಮೂಕಾಂಬಿಕಾ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಪದ್ಮಿನಿ ರಾಮ ಭಟ್ ವರ್ಮುಡಿ, ಸೇವಾ ಸಮಿತಿ ಕೋಶಾಽಕಾರಿ ಎಸ್.ಎನ್.ಶ್ರೀಕಾಂತ್, ಗೌರವಸಲಹೆಗಾರರಾದ ಎ.ಎಸ್.ಭಟ್ ಚನಿಲ ಮತ್ತು ಯು.ಎಸ್.ಚಂದ್ರಶೇಖರ ಭಟ್, ಕಲ್ಲಡ್ಕ, ವಿಟ್ಲ, ಕೇಪು ವಲಯಗಳ ಪ್ರಮುಖರು ಉಪಸ್ಥಿತರಿದ್ದರು.
ಮಂಗಳೂರು ಹವ್ಯಕ ಮಂಡಲದ ವತಿಯಿಂದ ಸೇವಾ ಸಮಿತಿ ಅಧ್ಯಕ್ಷ ರಾಕೋಡಿ ಈಶ್ವರ ಭಟ್ ದಂಪತಿ ಮತ್ತು ಸುಬ್ರಹ್ಮಣ್ಯ ಆರ್.ಕೆ. ದಂಪತಿಯನ್ನು ಶ್ರೀಗಳು ಗೌರವಿಸಿದರು. ಇದೇ ಸಂದರ್ಭ ಉಮಾಶಿವ ಸ್ವಸಹಾಯ ಸಂಘ ಮತ್ತು ಉಮಾಶಿವ ಸೇವಾ ಸಮಿತಿ ಆಶ್ರಯದಲ್ಲಿ ೨೫ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಚಿತ್ರಬಿಡಿಸುವ ಸ್ಪರ್ಧೆಯಲ್ಲಿ ವಿಜೇತರಾದ ಕಲ್ಲಡ್ಕ ವಸುಧಾರಾ ಶಾಲೆಯ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯದರ್ಶಿ ಕೆ.ಟಿ.ಗಣೇಶ್ ವರದಿ ಮಂಡಿಸಿದರು. ಶ್ರೀಸವಾರಿ ಕಾರ್ಯದರ್ಶಿ ರಾಘವೇಂದ್ರ ಮಧ್ಯಸ್ಥ ಕಾರ್ಯಕ್ರಮ ನಿರ್ವಹಿಸಿದರು.
ಇದೇ ಸೌಂದರ್ಯಲಹರಿ ಪಾರಾಯಣ, ರುದ್ರಪಾರಾಯಣ, ಶ್ರೀಕರಾರ್ಚಿತ ಶ್ರೀ ಸೀತಾರಾಮಚಂದ್ರ, ಚಂದ್ರಮೌಳೀಶ್ವರ ರಾಜರಾಜೇಶ್ವರೀ ದೇವರುಗಳ ಪೂಜೆ, ಸಂಜೆ ಶ್ರೀಗಳ ನಿರ್ಗಮನ, ಬಳಿಕ ಶ್ರೀ ಶನೈಶ್ಚರ ಕಲ್ಪೋಕ್ತ ಪೂಜೆ ನೆರವೇರಿತು.
Be the first to comment on "ಕಲಡ್ಕ ಶ್ರೀ ಉಮಾಶಿವ ಸಾನಿಧ್ಯದಲ್ಲಿ ಧಾರ್ಮಿಕ ಕಾರ್ಯಕ್ರಮ, ರಾಘವೇಶ್ವರ ಶ್ರೀ ಉಪಸ್ಥಿತಿ"