ಪ್ರತಿದಿನ ಕೈಯಲ್ಲಿ ಸ್ಪಾನರ್, ಸ್ಕ್ರೂ ಡ್ರೈವರ್ ಹಿಡಿದುಕೊಂಡು ವಾಹನ ರಿಪೇರಿ ಮಾಡುವ ಗ್ಯಾರೇಜು ಸಿಬ್ಬಂದಿಗಳು ತಮ್ಮ ಎಲ್ಲಾ ಕೆಲಸದ ಒತ್ತಡಗಳನ್ನು ಬದಿಗಿರಿಸಿ ಆಟೋಟದಲ್ಲಿ ಸಂಭ್ರಮಿಸಿದರು. ಓಟ, ಮಡಿಕೆ ಒಡೆತ, ಸಂಗೀತ ಕುರ್ಚಿ, ಲಕ್ಕಿಗೇಮ್ ಮೊದಲಾದ ಆಟಗಳನ್ನು ಆಡಿ ಖುಷಿಪಟ್ಟರು.
ದಕ್ಷಿಣ ಕನ್ನಡ ಗ್ಯಾರೇಜು ಮಾಲಕರ ಸಂಘ ಇದರ ಬಂಟ್ವಾಳ ವಲಯದ ಆಶ್ರಯದಲ್ಲಿ ಭಾನುವಾರ ಬಂಟ್ವಾಳದ ಎಸ್‌ವಿಎಸ್ ಕ್ರೀಡಾಂಗಣದಲ್ಲಿ ಗ್ಯಾರೇಜು ಮಾಲಕರಿಗೆ ಮತ್ತು ವೃತ್ತಿ ಬಾಂದವರಿಗಾಗಿ ಗ್ರಾಮೀಣ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು. ಸಂಘದ ಅಧ್ಯಕ್ಷ ರಾಜೇಶ್ ಸಾಲ್ಯಾನ್ ಕ್ರೀಡಾಕೂಟವನ್ನು ಉದ್ಘಾಟಿಸಿದರು. ಬಳಿಕ ನಡೆದ ವಿವಿಧ ಮನೋರಂಜನಾ ಆಟಗಳಲ್ಲಿ ಗ್ಯಾರೇಜು ಸಿಬ್ಬಂದಿಗಳು ಭಾಗವಹಿಸಿ ಸಂತಸ ಪಟ್ಟರು.
ಈ ಸಂದರ್ಭ ಸಂಘದ ಗೌರವ ಸಲಹೆಗಾರ ಸುಧಾಕರ ಸಾಲ್ಯಾನ್ ಮಾತನಾಡಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ಗ್ಯಾರೇಜು ಮಾಲಕರು ಹಾಗೂ ವೃತ್ತಿ ಬಾಂದವರ ಕ್ರೀಡಾಕೂಟ ಆಯೋಜಿಸಲಾಗಿದೆಎಂದರು.
ಜಗದೀಶ್ ರೈ, ಪ್ರಶಾಂತ್ ಭಂಡಾರ್‌ಕಾರ್, ರಾಜಾ ಬೈಪಾಸ್, ರಮೇಶ್ ಭಂಡಾರಿ, ಸುಧೀರ್ ಬೈಪಾಸ್ , ಕ್ರೀಡಾಕೂಟದ ನೇತೃತ್ವ ವಹಿಸಿದ್ದರು.
Be the first to comment on "ಒತ್ತಡ ಬದಿಗಿರಿಸಿ ಆಟೋಟ ಸ್ಪರ್ಧಾ ಕಣಕ್ಕಿಳಿದ ಗ್ಯಾರೇಜು ಸಿಬ್ಬಂದಿ"