ಬಿ.ಸಿ.ರೋಡಿನಲ್ಲಿ ನ.11 ರಂದು ನಡೆಯುವ ಬಿಜೆಪಿಯ ನವಕರ್ನಾಟಕ ಪರಿವರ್ತನಾ ಯಾತ್ರೆಯ ಪೂರ್ವತಯಾರಿ ಸಭೆ ಶನಿವಾರ ಬ್ರಹ್ಮಶ್ರೀ ನಾರಾಯಣಗುರು ವೃತ್ತದ ಬಳಿ ಇರುವ ಮೈದಾನದಲ್ಲಿ ನಡೆಯಿತು.
ರಾಜ್ಯದಲ್ಲಿ ಸಾಗುತ್ತಿರುವ ಈ ಯಾತ್ರೆಗೆ ಅಭೂತಪೂರ್ವ ಬೆಂಬಲ ದೊರಕುತ್ತಿದೆ. ನವಂಬರ್ 11ರಂದು ಬೆಳಿಗ್ಗೆ 9ಗಂಟೆಗೆ ಪುಂಜಾಲಕಟ್ಟೆಯಲ್ಲಿ ಯಾತ್ರೆಗೆ ಬಂಟ್ವಾಳ ಕ್ಷೇತ್ರದ ವತಿಯಿಂದ ಸ್ವಾಗತಿಸಿ ಬಳಿಕ ಬಂಟ್ವಾಳದಲ್ಲಿ ಬೃಹತ್ ಸಮಾವೇಶ ನಡೆಯಲಿರುವುದು ಸಂಸದ ನಳಿನ್ ಕುಮಾರ್ ಕಟೀಲ್ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು
ಈ ಸಂಧರ್ಭ ಬಿಜೆಪಿ ಮುಖಂಡರಾಜೇಶ್ ನಾಯಕ್ ಉಳಿಪ್ಪಾಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಉಮಾನಾಥ ಕೋಟ್ಯಾನ್, ಬ್ರಿಜೇಶ್ ಚೌಟ, ಸುದರ್ಶನ್, ಕ್ಷೇತ್ರ ಅಧ್ಯಕ್ಷರಾದ ಬಿ.ದೇವದಾಸ ಶೆಟ್ಟಿ, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಜಿಲ್ಲಾ ಉಪಾಧ್ಯಕ್ಷರಾದ ಜಿ.ಆನಂದ, ಜಿಲ್ಲಾ ಹಿಂದುಳಿದ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಕೃಷ್ಣಪ್ಪ ಪೂಜಾರಿ, ಕ್ಷೇತ್ರ ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ, ಕ್ಷೇತ್ರ ಕಾರ್ಯದರ್ಶಿಗಳಾದ ಸೀತಾರಾಮ ಪೂಜಾರಿ, ರಮನಾಥ ರಾಯಿ, ಗೋವಿಂದ ಪ್ರಭು, ದಿನೇಶ್ ಭಂಡಾರಿ, ಮಹಾಬಲ ಶೆಟ್ಟಿ, ರೋನಾಲ್ಡ್ ಡಿಸೋಜ, ವಜ್ರನಾಥಕಲ್ಲಡ್ಕ, ಸಂತೋಷ್ ರಾಯಿ, ಪುರುಷೋತ್ತಮ ಶೆಟ್ಟಿ, ವಿಜಯರೈ, ನೇಮಿರಾಜ್ ರೈ, ಮಚ್ಚೇಂದ್ರ ಸಾಲಿಯಾನ್, ಆನಂದ ಶಂಭೂರು, ಬಾಲಕೃಷ್ಣ ಸೆರ್ಕಳ, ಯಶೋಧರ ಕರ್ಬೆಟ್ಟು, ಭಾರತಿ ಎಸ್ ಚೌಟ, ರಂಜಿತ್ ಮೈರ, ಜನಾರ್ಧನ ಬೊಂಡಾಲ, ಜಿನೇಂದ್ರ ಜೈನ್, ತನಿಯಪ್ಪ ಗೌಡ, ಕಿಶೋರ್ ಶೆಟ್ಟಿ, ಶಶಿಕಾಂತ್ ಶೆಟ್ಟಿ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.
Be the first to comment on "ನವಕರ್ನಾಟಕ ಪರಿವರ್ತನಾ ಯಾತ್ರೆ: ಪೂರ್ವತಯಾರಿ ಸಭೆ"