ವಿಟ್ಲ ಪೇಟೆಯ ಆಡಳಿತ, ಪೊಲೀಸ್ ಮತ್ತು ಜನಸಾಮಾನ್ಯರಿಗೆ ತಲೆನೋವಾಗಿರುವ ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಕೆಲವೊಂದು ನಿರ್ಧಾರಗಳನ್ನು ಪ್ರಕಟಿಸಲಾಗಿದೆ.
ಅಧ್ಯಕ್ಷ ಅರುಣ್ ವಿಟ್ಲ ಅಧ್ಯಕ್ಷತೆಯಲ್ಲಿ ವಿಟ್ಲ ಪ.ಪಂ. ಸಭಾಭವನದಲ್ಲಿ ಪ.ಪಂ.ಆಡಳಿತ ಮತ್ತು ಪೊಲೀಸ್ ಠಾಣಾಧಿಕಾರಿಗಳ ಸಮ್ಮುಖ ರಿಕ್ಷಾ, ಕಾರು, ಬಸ್ ಸಂಬಂಧಪಟ್ಟ ವಿವಿಧ ಸಂಘಟನೆಗಳ ಸಭೆ ನಡೆಯಿತು.ವಿಟ್ಲ ಠಾಣಾಧಿಕಾರಿ ನಾಗರಾಜ್, ಪ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷ ವಿ.ರಾಮದಾಸ ಶೆಣೈ, ಮುಖ್ಯಾಧಿಕಾರಿ ಮಾಲಿನಿ ಉಪಸ್ಥಿತರಿದ್ದರು. ಸಂಘಟನೆ ಪ್ರಮುಖರು ಮತ್ತು ವ್ಯಾಪಾರಿಗಳು ಭಾಗವಹಿಸಿ ಅಭಿಪ್ರಾಯಗಳನ್ನು ತಿಳಿಸಿದರು.
ಸಭೆಯ ಮುಖ್ಯಾಂಶಗಳು ಇವು.
- ವಿಟ್ಲ-ಪುತ್ತೂರು ರಸ್ತೆಯ ಬಲಬದಿಯಲ್ಲಿ ಯಾವುದೇ ವಾಹನಗಳನ್ನು ನಿಲ್ಲಿಸಬಾರದು.
- ವಿಟ್ಲ ಸಾಲೆತ್ತೂರು ರಸ್ತೆಯ ಬೆನಕ ಕ್ಲಿನಿಕ್ ಆಸ್ಪತ್ರೆ ತನಕ ಯಾವುದೇ ವಾಹನ ನಿಲ್ಲಿಸಬಾರದು.
- ವಿಟ್ಲ ಮಂಗಳೂರು ರಸ್ತೆಯ ಪಂಚಲಿಂಗೇಶ್ವರ ದೇವಸ್ಥಾನದ ಹಿಂಬದಿಯ ವರೆಗೆ ಹಾಗೂ ಕಾಸರಗೋಡು ರಸ್ತೆಯ ವಿಜಯಲಕ್ಷ್ಮೀ ಟ್ರೇಡರ್‍ಸ್ ಅಂಗಡಿ ವರೆಗೆ ವಾಹನ ನಿಲುಗಡೆಗೆ ಅವಕಾಶವಿಲ್ಲ.
- ವಿಟ್ಲ ಪುತ್ತೂರು ರಸ್ತೆಯ ಹೊಸ ಬಸ್ ನಿಲ್ದಾಣದ ಬಳಿಯ ಎಡಬದಿಗೆ ಪಾರ್ಕಿಂಗ್ ಮಾಡಬೇಕು.
- ವಿಟ್ಲ ಸಾಲೆತ್ತೂರು ರಸ್ತೆಯ ಸಮಾಜ ಸೇವಾ ಬ್ಯಾಂಕ್ ಬಳಿ ಬಸ್ ಮತ್ತು ರಿಕ್ಷಾಗಳಿಗೆ ನಿಲ್ಲಲು ಮಾತ್ರ ಅವಕಾಶ.
- ವಿಟ್ಲ ಮಂಗಳೂರು ರಸ್ತೆಯ ಲಯನ್ಸ್ ಬಸ್ ನಿಲ್ದಾಣದ ಬಳಿ ಬಸ್‌ಗಳು ನಿಲ್ಲಿಸಬೇಕು.
- ಅಂತರ್‌ರಾಜ್ಯ ಹಾಗೂ ಖಾಸಗಿ ಬಸ್, ಮತ್ತು ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಪುತ್ತೂರು ರಸ್ತೆಯ ಸ್ಟೈಲ್ ಪಾರ್ಕ್ ಬಳಿ ನಿಲ್ಲಲು ಅವಕಾಶ
- ಹಳೆ ಬಸ್ ನಿಲ್ದಾಣದಲ್ಲಿ ಬಸ್‌ಗಳಿಗೆ ನಿಲ್ಲಲು 15 ನಿಮಿಷಗಳ ಕಾಲಾವಕಾಶ ನೀಡಲಾಗಿದೆ. ಹಳೆ ಬಸ್ ನಿಲ್ದಾಣದೊಳಗೆ ೫ ಕಾರುಗಳಿಗೆ ಮಾತ್ರ ನಿಲ್ಲಿಸಲು ಅವಕಾಶ .
- ಹಳೆ ಬಸ್ ನಿಲ್ದಾಣದಲ್ಲಿ ರಿಕ್ಷಾಗಳಿಗೆ 2 ಸಾಲಿನಲ್ಲಿ ನಿಲ್ಲಲು ಅವಕಾಶ .
- ಏಕಮುಖ ರಸ್ತೆಯಾದ ಪಂಚಲಿಂಗೇಶ್ವರ ದೇವಸ್ಥಾನ ರಸ್ತೆಯಲ್ಲಿ 2 ರಿಕ್ಷಾಗಳಿಗೆ ನಿಲ್ಲಲು ತಾತ್ಕಾಲಿಕ ಅವಕಾಶ.
- ಪೇಟೆಯ ಒಳಗಡೆ ಕರ್ಕಶ ಹಾರ್ನ್‌ಗಳನ್ನು ಬಳಸಬಾರದು
- . ಪುರಭವನದ ರಸ್ತೆಯಲ್ಲಿ ಸಂತೆಯ ದಿನ ಹೊರತುಪಡಿಸಿ ಉಳಿದ ದಿನ ಬಲಭಾಗದಲ್ಲಿ ಪಾರ್ಕಿಂಗ್ ಮಾಡುವುದು.
- ಈ ಎಲ್ಲಾ ಕಾನೂನುಗಳು ನ.4ರಿಂದ 10 ದಿನಗಳೊಳಗೆ ಜಾರಿಗೆ ಬರಲಿದೆ.
- ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ
Be the first to comment on "ವಿಟ್ಲ ಟ್ರಾಫಿಕ್ ಜಾಮ್ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ನಿಯಮ"