www.bantwalnews.com
ಕೃತಕವಲ್ಲದ ಸಹಜವಾದ ವಚನಗಳು ಧರ್ಮಜ್ಞಾನದ ಮೂಲವಾಗಿದೆ. ವೇದ ಹಾಗೂ ದೇವದಲ್ಲಿ ವ್ಯತ್ಯಾಸವೇನಿಲ್ಲ. ವೇದ ತ್ರಿಗುಣಾತೀತನ ಅನುಸಂಧಾನ ಮಾಡುತ್ತದೆ. ವೇದಗಳಿಗೂ ದೇವನಿಗೂ ಆದಿ, ಅಂತ್ಯಗಳಿಲ್ಲ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶ್ರೀ ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿಯವರು ವ್ಯಾಖ್ಯಾನಿಸಿದರು.
ಹಾರಕರೆ ನಾರಾಯಣ ಭಟ್ ಅವರ ಮನೆಯಲ್ಲಿ ಕಲಾರಾಮ ವಿಭಾಗದ ಆಶ್ರಯದಲ್ಲಿ ಏಕಾದಶಿಯಂದು ಶಿಷ್ಯರೊಡಗೂಡಿ ಆಯೋಜಿಸುವ ಸತ್ಸಂಗಮಾಲಿಕೆ ರಾಮಪದ ಕಾರ್ಯಕ್ರಮದಲ್ಲಿ ವೇದಗಳ ಸಾರದ ಬಗ್ಗೆ ಪ್ರವಚನ ನೀಡಿದರು.
ದೈವ ಕೃಪೆಯಿಂದ ಮೂರು ಜನ್ಮಗಳನ್ನು ಪಡೆದ ಭರಧ್ವಾಜರು ವೇದಗಳ ಅಧ್ಯಯನವನ್ನೇ ಮಾಡಿದ್ದರು. ಮೂರನೇ ಜನ್ಮದ ಕೊನೆಯ ಹಂತದಲ್ಲಿ ಇಂದ್ರ ದೇವರು ಪ್ರತ್ಯಕ್ಷವಾಗಿ ಇನ್ನೊಂದು ಜನ್ಮ ನೀಡುವ ವರ ನೀಡಿದಾಗಲೂ ಭರಧ್ವಾಜರು ಬ್ರಹ್ಮಚರ್ಯ ಮತ್ತು ವೇದಾಧ್ಯಯನವನ್ನು ಮುಂದುವರಿಸುವೆ ಎಂದು ಹೇಳುತ್ತಾರೆ. ಇಂತಹ ಗೀಳು ಇರಬೇಕು ಎಂದರು.
ವೇದಮೂರ್ತಿ ಶ್ರುತಿಸಾಗರ ಪಳ್ಳತ್ತಡ್ಕ ಶಂಕರನಾರಾಯಣ ಭಟ್ಟ ಘನಪಾಠಿಗಳು, ವೇದಮೂರ್ತಿ ಪಕಳಕುಂಜ ಚಾವಡಿಬಾಗಿಲು ಶಂಭು ಭಟ್ಟರು, ವೇದಮೂರ್ತಿ ಪಳ್ಳತ್ತಡ್ಕ ಶಶಿಧರಭಟ್ಟರು, ವೇದಮೂರ್ತಿ ಮುರ ಮುಕುಂದ ಶರ್ಮಾ, ವೇದಮೂರ್ತಿ ನರಸಿಂಹ ಭಟ್ ಮಿತ್ತೂರು ವೇದಗಳನ್ನು ಪಠಿಸಿದರು. ಸಹಗಾಯನದಲ್ಲಿ ದೀಪಿಕಾ ಭಟ್, ಪೂಜಾ ಭಟ್ ಸಹಕರಿಸಿದರು. ಹಾರ್ಮೋನಿಯಂನಲ್ಲಿ ಪ್ರಜ್ಞಾನಲೀಲಾಶುಕ ಉಪಾಧ್ಯಾಯ, ಸಿತಾರ್‌ನಲ್ಲಿ ಸುಬ್ರಹ್ಮಣ್ಯ ಹೆಗಡೆ ಇದ್ದರು. ಅನುರಾಧಾ ಪಾರ್ವತಿ ಕಾರ್ಯಕ್ರಮ ನಿರೂಪಿಸಿದರು.
Be the first to comment on "ಸಹಜವಾದ ವಚನಗಳು ಧರ್ಮಜ್ಞಾನದ ಮೂಲ"