ಬಂಟ್ವಾಳನ್ಯೂಸ್ www.bantwalnews.com ಆರಂಭವಾಗಿ ವರ್ಷವಾಗುತ್ತಾ ಬಂತು. ತಾಲೂಕಿನದ್ದೇ ದೈನಂದಿನ ಸುದ್ದಿಗಳ ಜೊತೆಗೆ ಹಲವು ವೈವಿಧ್ಯಗಳನ್ನು ನೀಡುವ ವೆಬ್ ಪತ್ರಿಕೆಯ ಅಗತ್ಯವಿದ್ದಾಗ ನವೆಂಬರ್ 10, 2016ರಂದು ಬಂಟ್ವಾಳನ್ಯೂಸ್ ಆರಂಭಗೊಂಡಿತು. ವೆಬ್ ಪತ್ರಿಕೆ ಆರಂಭಗೊಂಡ ಮೇಲೆ ಹಲವರು ಇಂಟರ್ ನೆಟ್ ಮೂಲಕ ಓದುವ ಹವ್ಯಾಸ ಬೆಳೆಸಿಕೊಂಡರು. ಮೊಬೈಲ್ ಮೂಲಕ ಬಂಟ್ವಾಳದ ಸುದ್ದಿ ಓದುವ ಹವ್ಯಾಸವನ್ನು ಹಲವರು ರೂಢಿಸಿದರೆ, ಸುದ್ದಿ ಮಾಧ್ಯಮದ ಈ ಸಾಧ್ಯತೆ ಹೊಸತನಗಳಿಗೆ ಪ್ರೇರಣೆಯಾಯಿತು ಎಂಬುದು ಹೆಮ್ಮೆಯ ವಿಷಯ. ಸುದ್ದಿ, ಅಂಕಣಗಳು, ಲೇಖನಗಳೊಂದಿಗೆ ಯಾವುದೇ ಅಬ್ಬರವಿಲ್ಲದೆ ಬಂಟ್ವಾಳನ್ಯೂಸ್ ಮೊದಲ ವರ್ಷವನ್ನು ಯಶಸ್ವಿಯಾಗಿಯೇ ಮುಗಿಸುತ್ತಿದೆ. ಈ ಹೊತ್ತಿನಲ್ಲೇ ಬಂಟ್ವಾಳನ್ಯೂಸ್ ಗಾಗಿ ನಮ್ಮೂರಿನವರೇ ಆದ ಮುಕೇಶ್ ರಾವ್, ವ್ಯಂಗ್ಯಚಿತ್ರವನ್ನು ಒದಗಿಸಿದ್ದಾರೆ. ಕಳೆದ ವಾರ ಅದು ಪ್ರಕಟಗೊಂಡಿದೆ. ಈ ವಾರ ಇನ್ನೊಂದು ವ್ಯಂಗ್ಯಚಿತ್ರ – ವ್ಯಂಗ್ಯನೋಟಕ್ಕಾಗಿ ಪ್ರಕಟಗೊಳ್ಳುತ್ತಿದೆ.
ಜಾಹೀರಾತು
ನೀವೂ ಕಾರ್ಟೂನ್ ಬರೆಯಬಹುದು. ರಚಿಸಿದ ವ್ಯಂಗ್ಯಚಿತ್ರಗಳನ್ನು ನಮ್ಮ ವಿಳಾಸಕ್ಕೆ ಈ ಮೈಲ್ ಮಾಡಿರಿ. (ನೆನಪಿಡಿ: ಯಾವ ಜಾತಿ, ಧರ್ಮ, ವ್ಯಕ್ತಿ, ಸಿದ್ಧಾಂತಗಳ ಮನನೋಯಿಸುವ ಕಾರ್ಟೂನ್ ಗಳಿಗೆ ಇಲ್ಲಿ ಜಾಗವಿಲ್ಲ) ನಮ್ಮ ಇ ಮೈಲ್ ವಿಳಾಸ ಹೀಗಿದೆ: bantwalnews@gmail.com
ಸಹೃದಯಿ ಸ್ನೇಹಿತರ, ಓದುಗರ ಪ್ರೋತ್ಸಾಹ ಸದಾ ಇರಲಿ.
ಹರೀಶ ಮಾಂಬಾಡಿ, ಸಂಪಾದಕ.
ವ್ಯಂಗ್ಯಚಿತ್ರಕಾರರ ಕುರಿತು:
ಮುಕೇಶ್ ರಾವ್
ಬಂಟ್ವಾಳದವರಾದ ಮುಕೇಶ್ ರಾವ್ ಸದ್ಯ ಯು.ಎಸ್.ಎ.ಯ Seattle ನಲ್ಲಿ ವೃತ್ತಿ ಸಂಬಂಧವಾಗಿ ನೆಲೆಸಿದ್ದಾರೆ. ಎಸ್.ವಿ.ಎಸ್. ವಿದ್ಯಾಗಿರಿ, ಎಸ್.ವಿ.ಎಸ್. ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ ಪಡೆದ ಬಳಿಕ ಆರ್.ವಿ. ಕಾಲೇಜಿನಲ್ಲಿ ಇಂಜಿನಿಯರಿಂಗ್ ಮುಗಿಸಿ ಉದ್ಯೋಗವನ್ನರಸಿ ತೆರಳಿದ್ದು ಯು.ಎಸ್.ಎ.ಗೆ
3ನೇ ವಯಸ್ಸಿನಲ್ಲಿ ಮನೆಯ ನೆಲದ ಮೇಲೆ ಅಜ್ಜನ ಜೊತೆ ಬಸ್ಸು ಕಾರುಗಳ ಚಿತ್ರಗಳನ್ನು ಬರೆಯಲು ಪ್ರಾರಂಭಿಸಿದ್ದ ಮುಕೇಶ್ ಗೆ ಚಿತ್ರ ಬಿಡಿಸುವುದು ಎಂದರೆ ಪಂಚಪ್ರಾಣ. ಇದಲ್ಲದೆ ಪುಸ್ತಕಗಳನ್ನು ಓದುವುದು, ಹೊರಾಂಗಣ ಆಟಗಳನ್ನಾಡುವುದು, ಪ್ರಪಂಚ ಪರ್ಯಟನೆ ಇತರ ಹವ್ಯಾಸಗಳು. ಅವರ ಸಂಪರ್ಕ:
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.
Be the first to commenton "ಬಂಟ್ವಾಳನ್ಯೂಸ್ ನಲ್ಲಿ ವ್ಯಂಗ್ಯನೋಟ"
Be the first to comment on "ಬಂಟ್ವಾಳನ್ಯೂಸ್ ನಲ್ಲಿ ವ್ಯಂಗ್ಯನೋಟ"