ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜನವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ ಎಂದು ಆರೋಪಿಸಿ ಎಡ ಹಾಗೂ ಪ್ರಜಾಪ್ರಭುತ್ವ ಜಾತ್ಯಾತೀತ ಸಂಘಟನೆಗಳ ಆಶ್ರಯದಲ್ಲಿ ಅ.30 ರಂದು ಸಂಜೆ 6.30ರಿಂದ ರಾಷ್ಟ್ರವ್ಯಾಪಿ ಚಳುವಳಿಯ ಅಂಗವಾಗಿ ಸಮಾನಮನಸ್ಕ ಸಂಘಟನೆ ಆಶ್ರಯದಲ್ಲಿ ಪಂಜಿನ ಮೆರವಣಿಗೆ ಬಿ.ಸಿ.ರೋಡಿನಲ್ಲಿ ನಡೆಯಲಿದೆ.
ಬಂಟ್ವಾಳ ತಾಲೂಕು ಸಾಮಾಜಿಕ ನ್ಯಾಯಪರ ಸಮಿತಿ ಸದಸ್ಯ ಬಿ.ಎಂ. ಪ್ರಭಾಕರ ದೈವಗುಡ್ಡೆ ಪತ್ರಿಕ ಪ್ರಕಟಣೆ ಮೂಲಕ ಈ ವಿಷಯ ತಿಳಿಸಿದ್ದಾರೆ.
ಮೆರವಣಿಗೆಯು ಬಿ.ಸಿ.ರೋಡ್ ಬ್ರಹ್ಮಶ್ರೀ ನಾರಾಯಣ ಗುರು ಮುಖ್ಯ ವೃತ್ತದಿಂದ ಕೈಕಂಬ ಮೂಲಕ ಆಗಮಿಸಿ, ಬಿ.ಸಿ.ರೋಡ್ ಮಿನಿ ವಿಧಾನಸೌಧ ಎದುರು ಪ್ರತಿಭಟನಾ ಸಭೆ ನಡೆಯುವುದು.
ಬಂಟ್ವಾಳ ತಾಲೂಕಿನಲ್ಲೂ ಕೂಡಾ ಈ ಬಗ್ಗೆ ಚಳುವಳಿ ರೂಪಿಸುವ ಉದ್ದೇಶದಿಂದ ಬಿ.ಸಿ.ರೋಡಿನಲ್ಲಿ ಸಮಾನ ಮನಸ್ಕ ಸಂಘಟನೆಗಳು ಒಟ್ಟು ಸೇರಿ ಪಂಜಿನ ಮೆರವಣಿಗೆ ಕಾರ್ಯಕ್ರಮ ನಡೆಸಲು ತೀರ್ಮಾನ ಕೈಗೊಂಡಿವೆ ಸಭೆಯಲ್ಲಿ ಎಐಟಿಯುಸಿ ನಾಯಕರುಗಳಾದ ಬಿ.ಶೇಖರ್, ಸುರೇಶ್ ಕುಮಾರ್, ಸಿಐಟಿಯು ನಾಯಕರುಗಳಾದ ರಾಮಣ್ಣ ವಿಟ್ಲ , ಉದಯ ಕುಮಾರ್, ಎಚ್.ಎಂ.ಎಸ್.ನ ಮುಂದಾಳು ಬಿ.ಮೋಹನ, ಹಾರೂನ್ ರಶೀದ್, ಹಾಗೂ ಬಂಟ್ವಾಳ ತಾಲೂಕು ಸಾಮಾಜಿಕ ನ್ಯಾಯಪರ ಸಂಘಟನೆಯ ಮುಂದಾಳು ಪ್ರಭಾಕರ ದೈವಗುಡ್ಡೆ , ರಾಜಾ ಚಂಡ್ತಿಮಾರ್, ಅಬ್ದುಲ್ ರಜಾಕ್ ಗುಂಪಕಲ್ಲು , ಹುಸೇನ್ ಪರ್ಲಿಯಾ ಉಪಸ್ಥಿತರಿದ್ದರು ಎಂದು ದೈವಗುಡ್ಡೆ ತಿಳಿಸಿದ್ದಾರೆ.
Be the first to comment on "ಕೇಂದ್ರ, ರಾಜ್ಯ ಸರ್ಕಾರಗಳ ನೀತಿ ವಿರೋಧಿಸಿ 30ರಂದು ಪಂಜಿನ ಮೆರವಣಿಗೆ"