ನಮ್ಮ ಬಂಟ್ವಾಳ ಸಮೂಹ ಸಂಸ್ಥೆಯ ನಮ್ಮ ಬಂಟ್ವಾಳ ಡಾಟ್ ಕಾಮ್ ವೆಬ್ ಸೈಟ್ ಅನ್ನು ರಾಜ್ಯ ಅರಣ್ಯ,ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ದೀಪಬೆಳಗಿಸಿ ಉದ್ಘಾಟಿಸಿದರು.
ಜಾಲ ತಾಣವನ್ನು ಚಾಲನೆಗೊಳಿಸಿ ಮಾತನಾಡಿದ ಅವರು ಸಾಮಾಜಿಕ ವ್ಯವಸ್ಥೆಗಳನ್ನು ಸುಧಾರಣೆ ಮಾಡುವಂತಹ ಜವಾಬ್ದಾರಿ ಮಾಧ್ಯಮಗಳಿವೆ, ಈ ನಿಟ್ಟಿನಲ್ಲಿ ನಮ್ಮ ಬಂಟ್ವಾಳ ಡಾಟ್ ಕಾಮ್ ಉತ್ತಮವಾಗಿ ಕಾರ್ಯನಿರ್ವಹಿಸುವಂತಾಗಲಿ ಎಂದರು.
ಬಿಜೆಪಿ ಮುಖಂಡ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ನಮ್ಮ ಬಂಟ್ವಾಳ ಡಾಟ್ ಕಾಮ್ ವೆಬ್ಸೈಟ್ ನ ಲೋಗೋ ಅನಾವರಣಗೊಳಿಸಿದರು. ಈ ಸಂದರ್ಭ ಜಿ.ಪಂ.ಸದಸ್ಯರಾದ ತುಂಗಪ್ಪ ಬಂಗೇರ, ಚಂದ್ರಪ್ರಕಾಶ್ ಶೆಟ್ಟಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಪಿಯೂಸ್ ಎಲ್ ರೋಡ್ರಿಗಸ್, ಬಿಲ್ಲವ ಮುಖಂಡ ಹರಿಕೃಷ್ಣ ಬಂಟ್ವಾಳ, ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ, ಬಂಟ್ವಾಳ ಪುರಸಭೆ ಅಧ್ಯಕ್ಷ ರಾಮಕೃಷ್ಣ ಆಳ್ವ, ಸದಸ್ಯರಾದ ವಾಸು ಪೂಜಾರಿ, ಗಂಗಾಧರ್, ಪ್ರಮುಖರಾದ ಓಂಪ್ರಸಾದ್, ವಿಶ್ವನಾಥ ಬಂಟ್ವಾಳ, ವಿಶ್ವನಾಥ ಪೂಜಾರಿ ಗಾಣದಪಡ್ಪು, ವೆಂಕಪ್ಪ ಪೂಜಾರಿ, ನಝೀರ್ ಮಠ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮೌನೇಶ್ ವಿಶ್ವಕರ್ಮ, ಯಶು ವಿಟ್ಲ, ಮಂಜು ವಿಟ್ಲ, ಪ್ರವೀಣ್ ಅಂಚನ್ ತುಪ್ಪೆಕಲ್ಲು, ಗೀತಾಂಜಲಿ ಪ್ರಶಾಂತ್ ಪುಂಜಾಲಕಟ್ಟೆ ಮತ್ತಿತರರು ಉಪಸ್ಥಿತರಿದ್ದರು. ಸಂಸ್ಥೆಯ ಮುಖ್ಯಸ್ಥ ಪ್ರಶಾಂತ್ ಪುಂಜಾಲಕಟ್ಟೆ ಸ್ವಾಗತಿಸಿದರು, ಶಿಕ್ಷಕ ರಾಮಚಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು.
Be the first to comment on "ನಮ್ಮ ಬಂಟ್ವಾಳ ಬಳಗದಿಂದ ವೆಬ್ ಸೈಟ್ ಆರಂಭ"