ಯುವ ಉದ್ಯಮಿ ಸುನಿಲ್ ಅವರು 2006ರಲ್ಲಿ ಆರಂಭಿಸಿರುವ ಅಪೂರ್ವ ಜ್ಯುವೆಲರ್ಸ್ ವಿಶಾಲವಾದ ಮಳಿಗೆಯಲ್ಲಿ ಕಾರ್ಯಾರಂಭ ಮಾಡಿದೆ. ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುವ ನಿಟ್ಟಿನಲ್ಲಿ ವಿಶಾಲ ಮಳಿಗೆ ಆರಂಭಿಸುವ ನಿರ್ಧಾರ ಕೈಗೊಂಡು ಈಗ ಕಾರ್ಯನಿರ್ವಹಿಸುತ್ತಿರುವ ಕಟ್ಟಡದಿಂದ ಸ್ಥಳಾಂತರಗೊಂಡು ಬಸ್ ನಿಲ್ದಾಣ ಹಿಂಭಾಗದಲ್ಲಿರುವ ಕೃಷ್ಣಾ ಹೆರಿಟೇಜ್ ಕಟ್ಟಡದ ಮಳಿಗೆಯಲ್ಲಿ ಶನಿವಾರ ಸೆ.30ರಿಂದ ತನ್ನ ಕಾರ್ಯಚಟುವಟಿಕೆ ಆರಂಭಿಸಿತು.
ಈ ಸಂದರ್ಭ ಬಂಟ್ವಾಳ ಸಹಿತ ಆಸುಪಾಸಿನ ಗಣ್ಯ ವ್ಯಕ್ತಿಗಳಾದ ಗೇರು ನಿಗಮ ಅಧ್ಯಕ್ಷ ಬಿ.ಎಚ್.ಖಾದರ್, ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ, ನೋಟರಿ ಅಶ್ವನಿ ಕುಮಾರ್ ರೈ ಸಹಿತ ಪ್ರಮುಖರು, ಗ್ರಾಹಕರು, ಸಾರ್ವಜನಿಕರು ಆಗಮಿಸಿ, ಉದ್ಯಮಿ ಸುನಿಲ್ ಹಾಗೂ ಕುಟುಂಬಿಕರಿಗೆ ಶುಭ ಹಾರೈಸಿದರು.
ಅಪೂರ್ವದ ವೈಶಿಷ್ಟ್ಯ : ಬಿಐಎಸ್ ಹಾಲ್‌ಮಾರ್ಕ್‌ನ ಆಭರಣಗಳು, ಗ್ರಾಹಕರ ಇಚ್ಛೆಯ ವಿನ್ಯಾಸದ ಆಭರಣಗಳ ಖಾತರಿ, ಮಿತವಾದ ತಯಾರಿಕ ವೆಚ್ಚ, ಉತ್ತಮ ಮರುಖರೀದಿಯ ಮೌಲ್ಯ, ಪ್ರಾಮಾಣೀಕ, ಪಾರದರ್ಶಕ ವ್ಯವಹಾರ, ಹರಳಿನ ವಿವರಗಳನ್ನೊಳಗೊಂಡ ಖಾತರಿ ಪತ್ರದೊಂದಿಗೆ ಲಭಿಸುವ ನೈಜ ಅದೃಷ್ಟ ಹರಳುಗಳು, ಎಲ್ಲಾ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಸ್ವೀಕರಿಸುವಿಕೆ, ಚಿನ್ನ ಖರೀದಿಯ ಅನುಕೂಲಕ್ಕಾಗಿ ಸುಲಭ ಮಾಸಿಕ ಕಂತಿನ ಅದೃಷ್ಟಯೋಜನೆಗಲು, ಎಲ್ಲಾ ತರಹದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳು ಮತ್ತು ದೈವ-ದೇವರ ಆಭರಣಗಳ ತಯಾರಿಕೆ, ಬೇಡಿಕೆಗೆ ಕೂಡಲೇ ಸ್ಪಂದನೆ ಇವೆಲ್ಲಾ ಅಪೂರ್ವದ ವಿಶಿಷ್ಟತೆಗಳಾಗಿವೆ. ಗ್ರಾಹಕರಿಗೆ ಇನ್ನೂ ಉತ್ತಮ ಸೇವೆ ಒದಗಿಸುವ ಆಶಯ ಹೊಂದಿರುವ ಸುನಿಲ್ ಅವರು ಜನರ ಉತ್ತಮ ಸ್ಪಂದನೆಯ ನಿರೀಕ್ಷೆಯಲ್ಲಿದ್ದಾರೆ
VIDEO:
Be the first to comment on "ಅಪೂರ್ವ ಜ್ಯುವೆಲರ್ಸ್ ಸ್ಥಳಾಂತರಿತ ಮಳಿಗೆ ಕಾರ್ಯಾರಂಭ"