ಬಂಟ್ವಾಳ: ಪರಮ ಪೂಜ್ಯ 108 ಮುನಿ ಶ್ರೀ ವೀರ ಸಾಗರ ಮಹಾರಾಜರ ಮಂಗಲ ವರ್ಷಾಯೋಗ ನಿಮಿತ್ತ, ಪಾಣೆಮಂಗಳೂರು ಶ್ರೀಅನಂತನಾಥ ಸ್ವಾಮೀ ಜಿನ ಚೈತ್ಯಾಲಯದಲ್ಲಿ, ಭಾನುವಾರ ಅಕ್ಟೋಬರ್ 1ರಂದು ಸುಮನಾಜಿ ಅಮ್ಮ ಮತ್ತು ಮಕ್ಕಳು, ಜೈನರ ಪೇಟೆ, ಪಾಣೆಮಂಗಳೂರು ಪ್ರಾಯೋಜಕತ್ವದಲ್ಲಿ ಪರಮ ಪೂಜ್ಯ 108 ಮುನಿಶ್ರೀ ವೀರ ಸಾಗರ ಮಹಾರಾಜರ ಪಾವನ ಸಾನ್ನಿಧ್ಯದಲ್ಲಿ, ಶ್ರೀ ಕ್ಷೇತ್ರ ಕನಕಗಿರಿ ಕ್ಷೇತ್ರದ ಪರಮ ಪೂಜ್ಯ ಸ್ವಸ್ತಿಶ್ರೀ ಭುವನಕೀರ್ತಿ ಭಟ್ಟಾರಕ ಮಹಾಸ್ವಾಮಿಗಳ ಉಪಸ್ಥಿತಿಯಲ್ಲಿ, ಪೂರ್ವಾಹ್ನ 9 ರಿಂದ ಶ್ರೀ ಪಂಚ ಪರಮೇಷ್ಠಿ ಆರಾಧನೆ ನಡೆಯಲಿದೆ.
ಈ ಸಾಮೂಹಿಕ ಆರಾಧನೆಗೆ ಕುಳಿತುಕೊಳ್ಳುವ ಶ್ರಾವಕರು ಚಾತುರ್ಮಾಸ ಸಮಿತಿಯನ್ನು ಸಂಪರ್ಕಿಸಿ ನೋಂದಾಯಿಸಬೇಕಾಗಿ ಪ್ರಕಟಣೆಯಲ್ಲಿ ವಿನಂತಿಸಿಕೊಂಡಿದ್ದಾರೆ.
ಅಪರಾಹ್ನ 3ರಿಂದ ಧಾರ್ಮಿಕ ಸಭೆಯಲ್ಲಿ 108 ಮುನಿ ಶ್ರೀ ವೀರ ಸಾಗರ ಮಹಾರಾಜರು ಗಣಧರ ಪೀಠದಿಂದ ಮಂಗಲ ಪ್ರವಚನ, ಶಂಕಾ ಸಮಾಧಾನ, ಶ್ರಾವಕರ ಧಾರ್ಮಿಕ ಪ್ರಶ್ನೆಗಳಿಗೆ ಉತ್ತರ ನೀಡಲಿದ್ದಾರೆ. ಧರ್ಮಸಭೆಯಲ್ಲಿ ಸ್ವಸ್ತಿಶ್ರೀ ಶ್ರೀ ಕ್ಷೇತ್ರ ಕನಕಗಿರಿ ಭುವನಕೀರ್ತಿ ಭಟ್ಟಾರಕ ಮಹಾಸ್ವಾಮಿಗಳು, ಮತ್ತು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸದಸ್ಯ ನಳಿನ್ ಕುಮಾರ್ ಕಟೀಲು ಅತಿಥಿಗಳಾಗಿ ಭಾಗವಹಿಸುವರು ಎಂದು ಚಾತುರ್ಮಾಸ ಸಮಿತಿಯ ಕಾರ್ಯಾಧ್ಯಕ್ಷ ಶ್ರೀ ಸುದರ್ಶನ್ ಜೈನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ .
Be the first to comment on "ಪಾಣೆಮಂಗಳೂರು ಚಾತುರ್ಮಾಸ – ಶ್ರೀ ಪಂಚ ಪರಮೇಷ್ಠಿ ಆರಾಧನೆ"