ಬಂಟ್ವಾಳ ಕಾಮಾಜೆಯಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮೂಲ ಸೌಕರ್ಯಗಳ ಕೊರತೆ ಕುರಿತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತು ವತಿಯಿಂದ ಪ್ರತಿಭಟನೆ ನಡೆಯಿತು.
ಕಾಲೇಜು ಪ್ರಾರಂಭವಾಗಿ ೧೦ ವರ್ಷಗಳು ಕಳೆದರೂ ನೀರಿನ ಕೊರತೆ, ರಸ್ತೆಯ ನಾದುರಸ್ತಿ, ಕಾಲೇಜಿಗೆ ಬೇಕಾದ ಆಟದ ಮೈದಾನದ ಕೊರತೆ ಇತ್ಯಾದಿಗಳನ್ನು ಒದಗಿಸಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದರು.
ಕಾಲೇಜಿನಿಂದ ಬಿ ಸಿ ರೋಡುವರೆಗೆ ಕಾಲ್ನಡಿಗೆ ರ್‍ಯಾಲಿ ಮೂಲಕ ಬಂದು ಪ್ರತಿಭಟನೆ ನಡೆಸಿ ಸಮಸ್ಯೆಯನ್ನು ಪರಿಹರಿಸುವಂತೆ ಕೋರಿ ತಹಶೀಲ್ದಾರ್‌ರವರಿಗೆ ಮನವಿಯನ್ನು ಸಲ್ಲಿಸಲಾಯಿತು. ಈ ಸಂದರ್ಭ ಕಾಲೇಜು ವಿದ್ಯಾರ್ಥಿ ಪ್ರಮುಖರಾದ ಲೋಕೇಶ್, ಅಕ್ಷತಾ ವಿದ್ಯಾರ್ಥಿಗಳ ಸಮಸ್ಯೆಗಳ ಬಗ್ಗೆ ಮಾತನಾಡಿದರು. ವಿದ್ಯಾರ್ಥಿ ಪ್ರಮುಖರಾದ ನಿಶ್ಮಿತಾ, ರಚನ್, ಪೂರ್ಣಶ್ರೀ, ಮತ್ತು ಪವನ್ ಹಾಗೂ ಅ.ಭಾ.ವಿ.ಪ. ನಗರ ಕಾರ್ಯದರ್ಶಿ ರಾಕೇಶ್, ಬಂಟ್ವಾಳ ತಾಲೂಕು ಸಂಚಾಲಕ್ ಆಶಿಶ್ ಅಜ್ಜಿಬೆಟ್ಟು, ತಾಲೂಕು ಸಹ ಸಂಚಾಲಕ್ ಚರಿತ್ ಕುಮಾರ್ ಹಾಗೂ ನಗರ ಸಹ ಕಾರ್ಯದರ್ಶಿಯಾದ ಶುಭರಾಜ್ ಮುಂತಾದವರು ಉಪಸ್ಥಿತರಿದ್ದರು.

Be the first to comment on "ಕಾಲೇಜಿಗೆ ಮೂಲಸೌಕರ್ಯ ಕೊರತೆ: ಎಬಿವಿಪಿ ಪ್ರತಿಭಟನೆ"