- ಡಾ. ಎ.ಜಿ.ರವಿಶಂಕರ್
- ಅಂಕಣ: ಪಾಕಶಾಲೆಯೇ ವೈದ್ಯಶಾಲೆ
ರಾಗಿ ಎಂದಾಕ್ಷಣ ರಾಗಿಮುದ್ದೆ, ರಾಗಿಕಾಪಿ ,ರಾಗಿ ಮಣ್ಣಿ ಇತ್ಯಾದಿಗಳು ನೆನಪಾಗುತ್ತವೆ. ಇದು ಅತ್ಯಂತ ಸತ್ವಭಾರಿತವಾಗಿದ್ದು ಎಲ್ಲಾ ವಯೋಮಾನದವರಿಗೂ ಉತ್ತಮ ಪಥ್ಯ ಆಹಾರವಾಗಿದೆ.
- ರಾಗಿಯಲ್ಲಿ ಯಥೇಷ್ಟವಾಗಿ ಕ್ಯಾಲ್ಸಿಯಂ ಇರುವುದರಿಂದ ಬೆಳೆಯುತ್ತಿರುವ ಮಕ್ಕಳಿಗೆ ಇದು ಉತ್ತಮ ಆಹಾರವಾಗಿದ್ದು ಇದರಿಂದ ಮಕ್ಕಳ ಮೂಳೆಗಳು ದ್ರುಢವಾಗುತ್ತವೆ ಮತ್ತು ಬೆಳವಣಿಗೆ ಉತ್ತಮವಾಗುತ್ತದೆ.
- ರಾಗಿಯಲ್ಲಿ ನಾರಿನ ಅಂಶ ಇದ್ದು ಇದು ಬಹು ಹೊತ್ತಿನ ವರೆಗೆ ಹೊಟ್ಟೆಯಲ್ಲಿ ಇದ್ದು ಬೇಗನೆ ಹಸಿವಾಗುವುದನ್ನು ತಡೆಯುತ್ತದೆ. ಇದರಿಂದಾಗಿ ಶರೀರದ ಅಧಿಕ ತೂಕವನ್ನು ಇಳಿಸಲು ಸಹಕಾರಿಯಾಗುತ್ತದೆ.
- ರಾಗಿಯು ಮೇದೋಜೀರಕ ಗ್ರಂಥಿಯನ್ನು ಉತ್ತೇಜಿಸುವ ಮೂಲಕ ಮಧುಮೇಹವನ್ನು ಹತೋಟಿಗೆ ತರಲು ಸಹಕರಿಸುತ್ತದೆ.
- ಇದು ರಕ್ತದ ಒತ್ತಡವನ್ನು ಹತೋಟಿಯಲ್ಲಿಡಲು ಸಹಕರಿಸುತ್ತದೆ.
- ರಾಗಿಯಲ್ಲಿ ಸ್ವಾಭಾವಿಕವಾಗಿ ಕಬ್ಬಿಣದ ಅಂಶ ಇರುವುದರಿಂದ ಇದು ರಕ್ತ ಹೀನತೆಯನ್ನು ಹೋಗಲಾಡಿಸುತ್ತದೆ.
- ರಾಗಿಯು ಚರ್ಮ ಸುಕ್ಕು ಕಟ್ಟುವುದನ್ನು ತಡೆಯುವುದರ ಮೂಲಕ ಯುವಾವಸ್ಥೆಯನ್ನು ಕಾಪಾಡಿಕೊಂಡು ಬರುತ್ತದೆ.
- ನಿಯಮಿತವಾಗಿ ರಾಗಿಯನ್ನು ಉಪಯೋಗಿಸುವುದರಿಂದ ನಿದ್ರಾ ಹೀನತೆ ಕಡಿಮೆಯಾಗುತ್ತದೆ.
- ರಾಗಿಯು ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಮೈಗ್ರೈನ್ ತಲೆನೋವಿನಲ್ಲೂ ಸಹ ಉತ್ತಮ ಪರಿಣಾಮವನ್ನು ನೀಡುತ್ತದೆ.
- ಟೈಫಾಯಿಡ್ ,ಮಲೇರಿಯಾ ಮುಂತಾದ ವ್ಯಾಧಿಗಳಿಂದ ಬಳಳುತ್ತಿರುವವರಿಗೆ ಇದು ಉತ್ತಮ ಪಥ್ಯ ಆಹಾರವಾಗಿದೆ.
- ಇದು ಶರೀರದಲ್ಲಿನ ಕೆಟ್ಟ ಕೊಬ್ಬನ್ನು ಹೋಗಲಾಡಿಸುವ ಮೂಅಲಕ ಹೃದಯವನ್ನು ರಕ್ಷಿಸುತ್ತದೆ.
- ರಾಗಿಯು ಬಾಣಂತಿಯರಲ್ಲಿ ಎದೆಹಾಲಿನ ಉತ್ಪತ್ತಿಯನ್ನು ಅಧಿಕಗೊಳಿಸುತ್ತದೆ.
- ರಾಗಿಯು ಜೀರ್ಣ ಕ್ರಿಯೆಯನ್ನು ಉತ್ತೇಜಿಸುವ ಮೂಲಕ ಮಲಬದ್ಧತೆಯನ್ನು ನಿವಾರಿಸುತ್ತದೆ.
Be the first to comment on "ಆರೋಗ್ಯವಂತ ‘ರಾಗಿ’"