ಜಗತ್ತಿನಲ್ಲಿ ಎಲ್ಲ ಮನುಷ್ಯರೂ ದೇವರ ಮುಂದೆ ಸಮಾನರು ಎಂದು ಸನ್ಮಾರ್ಗ ಪಬ್ಲಿಕೇಶನ್ ಟ್ರಸ್ಟ ಅಧ್ಯಕ್ಷ ಸಯೀದ್ ಇಸ್ಮಾಯಿಲ್ ಹೇಳಿದರು.
ಕಲ್ಲಡ್ಕ ಅನುಗ್ರಹ ಮಹಿಳಾ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಬಕ್ರಿದ್ ಸಂದೇಶ ನೀಡಿದರು.
ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಯಾಸೀನ್ ಬೇಗ್, ಕಾಲೇಜಿನ ಪ್ರಾಂಶುಪಾಲೆ ಜ್ಯೋತಿರತ್ನ ರೆಜಿನಾಲ್ಡ್, ಉಪಪ್ರಾಂಶುಪಾಲೆಯರಾದ ಮಮಿತ ಸುಧಾಕರ್ ರೈ, ಸುಮಯ್ಯ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ – ಬೋಧಕೇತರ ವೃಂದ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ಖತೀಜತುಲ್ ಕುಬ್ರ, ನಸೀಹ ಫಾತಿಮು ಕಿರಾತ್ ಪಠಿಸಿದರು. ಫಾತಿಮತ್ ಶಿಫಾ ಸ್ವಾಗತಿಸಿದರು. ಅಫೀಫತ್ ಶಮ್ಲ ವಂದಿಸಿದರು. ಫಾತಿಮ ಅಝ್ಮೀ ಕಾರ್ಯಕ್ರಮವನ್ನು ನಿರೂಪಿಸಿದರು.
Be the first to comment on "ಎಲ್ಲ ಮನುಷ್ಯರೂ ದೇವರ ಮುಂದೆ ಸಮಾನರು"