ಕಲ್ಲಡ್ಕದ ಅನುಗ್ರಹ ಪದವಿ ಕಆಲೇಜಿಗೆ ದುಬೈನ ಅಮೆಕ್ಲಿಕ್ ಸಂಸ್ಥೆಯ ಆಡಳಿತ ನಿರ್ದೇಶಕ ಇಕ್ಬಾಲ್ ಬಂಟ್ವಾಳ ಸಿಸಿಟಿವಿಯನ್ನು ಕೊಡುಗೆಯಾಗಿ ನೀಡಿದರು. ಈ ಸಂದರ್ಭ ನಡೆದ ಕಾರ್ಯಕ್ರಮದಲ್ಲಿ ಅಂತರ್ಕಾಲೇಜು ಸ್ಪರ್ಧೆಯಲ್ಲಿ ಗೆದ್ದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.
ಅನುಗ್ರಹ ಎಜುಕೇಶನಲ್ ಟ್ರಸ್ಟ್‌ನ ಕಾರ್ಯದರ್ಶಿ ಡಿ. ಕೆ. ಇಬ್ರಾಹಿಂ ಪ್ರಾಸ್ತಾವಿಕ ಮಾತುಗಳನ್ನಾಡಿ ಸಿ. ಸಿ. ಟಿವಿ ಮತ್ತು ಟಿವಿಯನ್ನು ದೇಣಿಗೆಯಾಗಿ ನೀಡಿದ ಇಕ್ಬಾಲ್ ಬಂಟ್ವಾಳ ಅವರನ್ನು ಪರಿಚಯಿಸಿದರು.
ರಿಯಾಝ್ ಬಂಟ್ವಾಳ, ಜೊತೆ ಕಾರ್ಯದರ್ಶಿ ಮಹಮ್ಮದ್ ಬಿ. ಹಾಗೂ ಆಡಳಿತ ಮಂಡಳಿಯ ಸರ್ವಸದಸ್ಯರು, ಕಾಲೇಜಿನ ಪ್ರಾಂಶುಪಾಲೆ ಜ್ಯೋತಿ ರತ್ನ ರೆಜಿನಾಲ್ಡ್, ಉಪಪ್ರಾಂಶುಪಾಲೆ ಸುಮಯ್ಯ ಹಾಗೂ ಬೋಧಕ-ಬೋಧಕೇತರ ವೃಂದ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ. ನೌಶೀದ ಕಿರಾತ್ ಪಠಿಸಿದರು. ಬದ್ರುನ್ನೀಸಾ ಸ್ವಾಗತಿಸಿದರು. ಫಾತಿಮಾ ಹಫೀಝಾ ವಂದಿಸಿದರು. ಫಾತಿಮತ್ ಶಿಫಾನ ಕಾರ್ಯಕ್ರಮ ನಿರೂಪಿಸಿದರು.
Be the first to comment on "ಅನುಗ್ರಹ ಕಾಲೇಜಿಗೆ ಸಿಸಿಟಿವಿ ಕೊಡುಗೆ"