ಗಣೇಶೋತ್ಸವ ಮೂಲಕ ಭೇದರಹಿತವಾಗಿ ಎಲ್ಲರೂ ಒಗ್ಗೂಡಿ ರಾಷ್ಟ್ರಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಉಪನ್ಯಾಸಕ ಶ್ರೀಕೃಷ್ಣ ಉಪಾಧ್ಯಾಯ ಹೇಳಿದರು.
ಪೆರಾಜೆ ಶ್ರೀ ಗುಡ್ಡ ಚಾಮುಂಡೇಶ್ವರಿ ಸೇವಾ ಟ್ರಸ್ಟ್ ಪೆರಾಜೆ ವತಿಯಿಂದ ಪೆರಾಜೆ ದ.ಕ.ಜಿ.ಪಂ.ಹಿ.ಪ್ರಾ. ಶಾಲಾ ವಠಾರದಲ್ಲಿ ಏರ್ಪಡಿಸಲಾದ ೮ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಿಲ್ಲಾ ಬಿಜೆಪಿ ವಕ್ತಾರ, ಉದ್ಯಮಿ ಜಿತೇಂದ್ರ ಕೊಟ್ಟಾರಿ ಅಧ್ಯಕ್ಷತೆ ವಹಿಸಿದ್ದರು. ಸಮಾಜದ ಎಲ್ಲಾ ಬಂಧುಗಳನ್ನು ಒಟ್ಟು ಸೇರಿಸಿ ಗಣೇಶೋತ್ಸವ ಆಚರಿಸುವ ಮೂಲಕ ನಮ್ಮಲ್ಲಿರುವ ಭೇದ ಭಾವಗಳನ್ನು ಹೋಗಲಾಡಿಸಬೇಕು. ಸಮಾಜದ ಅನಿಷ್ಟಗಳನ್ನು ದೂರ ಮಾಡಬೇಕು ಎಂದರು.
ಮುಖ್ಯ ಅತಿಥಿಯಾಗಿ ಉದ್ಯಮಿ ರವಿ ಕಕ್ಯಪದವು ಮಾತನಾಡಿ ದೇವರ ಅನುಗ್ರಹದಿಂದ ಶ್ರಮ ಪಟ್ಟು ದುಡಿದರೆ ಯಾವುದೇ ಸಾಧನೆ ಮಾಡಲು ಸಾಧ್ಯ ಎಂದರು.
ಸಮಿತಿ ಗೌರವಾಧ್ಯಕ್ಷ ಡಾ. ಶ್ರೀನಾಥ್ ಆಳ್ವ , ಟ್ರಸ್ಟ್ ಅಧ್ಯಕ್ಷ ಶ್ರೀನಿವಾಸ ಪೂಜಾರಿ ಸ್ಥಾಪಕಾಧ್ಯಕ್ಷ ಹರೀಶ ರೈ ಪಾನೂರು, ಕೋಶಾಧಿಕಾರಿ ರಾಘವ ಗೌಡ, ಯುವ ವೇದಿಕೆಯ ಅಜಿತ್ ಗೌಡ ಉಪಸ್ಥಿತರಿದ್ದರು. ಗಣೇಶೋತ್ಸವ ಸಮಿತಿ ಅಧ್ಯಕ್ಷ ರಾಜಾರಾಮ ಕಾಡೂರು ಸ್ವಾಗತಿಸಿ ಪ್ರಸ್ತಾವನೆಗೈದರು. ಯತಿರಾಜ ನಿರೂಪಿಸಿ, ದಿವಾಕರ ಶಾಂತಿಲ ವಂದಿಸಿದರು. ಕಡೇಶ್ವಾಲ್ಯ ವೇ.ಮೂ. ಹರಿಭಟ್ ನೇತೃತ್ವದಲ್ಲಿ ವಿನಾಯಕನ ಮೂರ್ತಿ ಪ್ರತಿಷ್ಠೆ ಸಂಜೀವ ಪೂಜಾರಿ ಮಾಣಿ ಧ್ವಜಾರೋಹಣ ನೆರವೇರಿಸಿದರು.
Be the first to comment on "ರಾಷ್ಟ್ರಕಾರ್ಯದಲ್ಲಿ ತೊಡಗಿಸಲು ಗಣೇಶೋತ್ಸವ ಪ್ರೇರಣೆ"