ಗುರುವಾರ ಗೌರಿಪೂಜೆಯಾದರೆ, ಶುಕ್ರವಾರ ಗಣಪನ ಹಬ್ಬ. ಬೆಳಗ್ಗಿನಿಂದಲೇ ಬಿ.ಸಿ.ರೋಡ್, ಬಂಟ್ವಾಳ ಸಹಿತ ತಾಲೂಕಿನ ಪ್ರಮುಖ ಪ್ರದೇಶಗಳಲ್ಲಿ ಸಾರ್ವಜನಿಕ ಗಣೇಶೋತ್ಸವಗಳು ಆರಂಭಗೊಂಡರೆ, ಮಾರುಕಟ್ಟೆಯಲ್ಲಿ ಕಬ್ಬು ಸಹಿತ ನಾನಾ ಪೂಜೆಯ ವಸ್ತುಗಳಿಗೆ ಬೇಡಿಕೆ ಇದ್ದವು.

ಹಿಂದೂ ಧಾರ್ಮಿಕ ಸೇವಾ ಸಮಿತಿ ಬಿಸಿರೋಡು ಆಶ್ರಯದಲ್ಲಿ ಬಿ.ಸಿ.ರೋಡು ರಕ್ತೇಶ್ವರೀವಠಾರದಲ್ಲಿ ಪೂಜಿಲ್ಪಟ್ಟ 38ನೇ ವರ್ಷದ ಗಣಪ ಚಿತ್ರ: ಕಿಶೋರ್ ಪೆರಾಜೆ

ಫರಂಗಿಪೇಟೆಯಲ್ಲಿ ಪೂಜಿಸಲಾಗುತ್ತಿರುವ ಗಣಪತಿ – ಚಿತ್ರ: ಕಾರ್ತಿಕ್ ಸ್ಟುಡಿಯೋ, ಬಿ.ಸಿ.ರೋಡ್
ಬಿ.ಸಿ.ರೋಡಿನಲ್ಲಿ ಹಿಂದು ಧಾರ್ಮಿಕ ಸೇವಾ ಸಮಿತಿ ಆಶ್ರಯದಲ್ಲಿ ರಕ್ತೇಶ್ವರಿ ದೇವಿ ದೇವಸ್ಥಾನ ವಠಾರದಲ್ಲಿ 38ನೇ ವರ್ಷದ ಗಣೇಶೋತ್ಸವಕ್ಕೆ ಊರ, ಪರವೂರ ಭಕ್ತರು ಆಗಮಿಸಿ ಸಂಭ್ರಮಿಸಿದರೆ, ಬಂಟ್ವಾಳ ಜಕ್ರಿಬೆಟ್ಟಿನಲ್ಲಿ ಸಚಿವ ಬಿ.ರಮಾನಾಥ ರೈ ಮಾರ್ಗದರ್ಶನದಲ್ಲಿ ಸಾರ್ವಜನಿಕ ಗಣೇಶೋತ್ಸವವೂ ಆರಂಭಗೊಂಡವು.

ಬಂಟ್ವಾಳ ಜಕ್ರಿಬೆಟ್ಟುವಿನಲ್ಲಿ ಪೂಜಿಸಲಾದ ಗಣಪತಿ: ಚಿತ್ರ: ಕಿಶೋರ್ ಪೆರಾಜೆ
ಸಜೀಪ ಮೂನ್ನೂರು ಯುವಕ ಸಂಘದ ವತಿಯಿಂದ 44ನೇ ವರ್ಷದ ಗಣೇಶೋತ್ಸವ, ನರಿಕೊಂಬು ನವಜೀವನ ವ್ಯಾಯಾಮ ಶಾಲೆ ವತಿಯಿಂದ ಸತ್ಯದೇವತಾ ಮಂದಿರದಲ್ಲಿ 35ನೇ ವರ್ಷದ ಗಣೇಶೋತ್ಸವ, ಶಂಭೂರು ರಾಮಾಂಜನೇಯ ವ್ಯಾಯಾಮ ಶಾಲೆಯಲ್ಲಿ 4ನೇ ವರ್ಷದ ಗಣೇಶೋತ್ಸವ, ಯುವ ಸಂಗಮ ಸೇವಾ ಟ್ರಸ್ಟ್ ವತಿಯಿಂದ ಯುವ ಸಂಗಮ ಸಮುದಾಯ ಭವನದಲ್ಲಿ 24ನೇ ವರ್ಷದ ಗಣೇಶೋತ್ಸವ, ಬಿ.ಸಿ.ರೋಡಿನಲ್ಲಿ ಹಿಂದೂ ಧಾರ್ಮಿಕ ಸೇವಾ ಸಮಿತಿ ಬಿಸಿರೋಡು ಇದರ ಆಶ್ರಯದಲ್ಲಿ ಬಿಸಿರೋಡು ರಕ್ತೇಶ್ವರೀ ದೇವಿ ದೇಸ್ಥಾನದ ವಠಾರದಲ್ಲಿ 38ನೇ ವರ್ಷದ ಗಣೇಶೋತ್ಸವ ಹಾಗೂ ಸಾರ್ವಜನಿಕ ಗಣೇಶೋತ್ಸವ ಆಚರಣಾ ಸಮಿತಿ ವತಿಯಿಂದ ಜಕ್ರಿಬೆಟ್ಟು ದಾಸ ರೈ ಮೈದಾನದಲ್ಲಿ 14ನೇ ವರ್ಷದ ಗಣೇಶೋತ್ಸವ, ಫರಂಗಿಪೇಟೆ ಹಿಂದು ಧಾರ್ಮಿಕ ಸೇವಾ ಸಮಿತಿಯ ಗಣೇಶೋತ್ಸವಕ್ಕೆ ಭಕ್ತರು ಆಗಮಿಸಿದರು.

ಪಾಣೆಮಂಗಳೂರು ಸಮೀಪ ನರಿಕೊಂಬಿನ ನವಜೀವನ ವ್ಯಾಯಮ ಶಾಲೆ ವತಿಯಿಂದ ಸತ್ಯ ದೇವತಾ ರಂಗಮಂದಿರದಲ್ಲಿ ಪೂಜಿಸಲ್ಪಟ್ಟ 35ನೇ ವರ್ಷದ ಗಣಪತಿ

ಸಜೀಪ ಮೂನ್ನೂರು ಯುವಕ ಸಂಘದ ವತಿಯಿಂದ ಪೂಜಿಲ್ಪಟ್ಟ 44 ನೇ ವರ್ಷದ ವಿಘ್ನನಿವಾರಕ

ಶಂಭೂರು ಶ್ರೀ ರಾಮಾಂಜನೇಯ ವ್ಯಾಯಮ ಶಾಲೆಯಲ್ಲಿ ಪೂಜಿಸಲ್ಪಟ್ಟ 14ನೇ ವರ್ಷದ ವಿನಾಯಕ

ಶೇಡಿಗುರಿ ಯುವ ಸಂಗಮ ಸೇವಾ ಟ್ರಸ್ಟ್ ವತಿಯಿಂದ ಯುವ ಸಂಗಮ ಸಮುದಾಯ ಭವನದಲ್ಲಿ ಪೂಜಿಸಲ್ಪಟ್ಟ 24ನೇ ವರ್ಷದ ಗಣಪ.

ಗೋಳ್ತಮಜಲು ಗಣೇಶನಗರದಲ್ಲಿ ಪೂಜಿಸಲಾದ 26ನೇ ವರ್ಷದ ಗಣಪತಿ ಚಿತ್ರ: ಲಕ್ಷಣ್, ಪೂಜಾ ಸ್ಟುಡಿಯೋ, ಮೇಲ್ಕಾರ್


Be the first to comment on "ಗಜಮುಖನೆ ಸಿದ್ಧಿವಿನಾಯಕನೆ ನಿನಗೆ ಶರಣು"