ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಮಹಿಳಾ ಜನಪ್ರತಿನಿಧಿಯೊಬ್ಬರನ್ನು ಉದ್ದೇಶಿಸಿ, ಏಕವಚನದಲ್ಲಿ ವೈಯಕ್ತಿಕವಾಗಿ ನಿಂದಿಸಿರುವುದು ಖಂಡನೀಯ ಎಂದು ಬಿಜೆಪಿ ಬಂಟ್ವಾಳ ಯುವಮೋರ್ಚಾ ಹೇಳಿದೆ.
ಅಧ್ಯಕ್ಷ ವಜ್ರನಾಥ ಕಲ್ಲಡ್ಕ ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ್ದು, ವಿರೋದ ಪಕ್ಷದವರಿಗೆ ಕೈ ತೋರಿಸುವ ಮುಂಚೆ ನಿಮ್ಮ ಒಟ್ಟಿಗೆ ಇರುವ ನಿಮ್ಮದೆ ಪಕ್ಷದವರ ಆಸ್ತಿಗಳ ಹತ್ತು ವರ್ಷಗಳ ಬೆಳವಣಿಗೆ ಲೆಕ್ಕಹಾಕಿ. ನಿಮ್ಮ ಮತಬೇಟೆಗಾಗಿ ಒಂದು ವರ್ಗದ ಓಲೈಕೆ ರಾಜಕಾರಣ ಕೈಬಿಡಿ. ಜಲೀಲ್ ಕರೋಪಾಡಿ ಹತ್ಯೆ ಆರೋಪಿಯಾಗಿರುವ ತಮ್ಮದೇ ಪಕ್ಷದ ಗ್ರಾಪಂ ಸದಸ್ಯನನ್ನು ಬಂಧಿಸಿ ಎಂದರು.
ನಿಮ್ಮಲ್ಲಿರುವ ಹಿಂದು ವಿರೋದಿ ದೋರಣೆಯನ್ನು ಬದಲಾಯಿಸಿಕೊಳ್ಳಿ, ಓಲೈಕೆ ಮತ್ತು ದ್ವೇಷದ ರಾಜಕೀಯ ಬಿಟ್ಟು ಸಜ್ಜನಿಕೆಯ ಮತ್ತು ನೈತಿಕ ರಾಜಕಾರಣ ಮಾಡಿ ಎಂದು ಬಂಟ್ವಾಳ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ವಜ್ರನಾಥ ಕಲ್ಲಡ್ಕ ಆಗ್ರಹಿಸಿದ್ದಾರೆ.
Be the first to comment on "ಯುವಮೋರ್ಚಾ ಖಂಡನೆ"