ಕಲ್ಲಡ್ಕದ ಅನುಗ್ರಹ ಮಹಿಳಾ ಕಾಲೇಜಿನಲ್ಲಿ ೭೧ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ನಡೆಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಲಕ್ಷ್ಮೀಗಣೇಶ್ ಹೋಟೆಲ್ ಮಾಲೀಕ ರಾಜೇಂದ್ರ ಹೊಳ್ಳ, ಧ್ವಜಾರೋಹಣ ನೆರವೇರಿಸಿದರು. ದೇಶವನ್ನು ಕಟ್ಟುವಲ್ಲಿ ಕೋಮು ಸೌಹಾರ್ದತೆ ಅತೀ ಮುಖ್ಯ ಪಾತ್ರವಹಿಸುತ್ತದೆ. ಆದುದರಿಂದ ಸ್ವಾತಂತ್ರ್ಯೋತ್ಸವವು ನಮ್ಮ ಜಿಲ್ಲೆಗೆ, ರಾಜ್ಯಕ್ಕೆ, ರಾಷ್ಟ್ರಕ್ಕೆ ಶಾಂತಿ-ಸಹಬಾಳ್ವೆಯನ್ನು ರೂಢಿಸುವಲ್ಲಿ ಸಹಕಾರಿಯಾಗಲಿ ಎಂದು ಹಾರೈಸಿದರು.
ಅನುಗ್ರಹ ಎಜುಕೇಶನಲ್ ಟ್ರಸ್ಟ್ನ ಕಾರ್ಯದರ್ಶಿಗಳಾದ ಡಿ. ಕೆ. ಇಬ್ರಾಹಿಂ, ಜೊತೆ ಕಾರ್ಯದರ್ಶಿಯಾದ ಮಹಮ್ಮದ್ ಬಿ. ಹಾಗೂ ಆಡಳಿತ ಮಂಡಳಿಯ ಸರ್ವಸದಸ್ಯರು, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾದ ಝಕಾರಿಯಾ ಕಲ್ಲಡ್ಕ ಮತ್ತು ಸದಸ್ಯರು, ಕಾಲೇಜಿನ ಪ್ರಾಂಶುಪಾಲೆ ಜ್ಯೋತಿರತ್ನ ರೆಜಿನಾಲ್ಡ್, ಉಪಪ್ರಾಂಶುಪಾಲೆಯರಾದ ಮಮಿತಾ ಸುಧಾಕರ್ ರೈ ಹಾಗೂ ಸುಮಯ್ಯ ಹಾಗೂ ಬೋಧಕ-ಬೋಧಕೇತರ ವೃಂದ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಹಸೀನಾ ಬಾನು ಕಿರಾತ್ ಪಠಿಸಿ, ಆಯಿಷಾ ಕಾರ್ಯಕ್ರಮ ನಿರೂಪಿಸಿದರು.
Be the first to comment on "ಅನುಗ್ರಹ ಕಾಲೇಜಿನಲ್ಲಿ ಸ್ವಾತಂತ್ರ್ಯೋತ್ಸವ"